ಬೆಂಗಳೂರು : ಕಂಪನಿ ಒಂದಕ್ಕೆ ಗಣಿಗಾರಿಕೆಗೆ ನಿಯಮ ಉಲ್ಲಂಘಿಸಿ ಭೂಮಿ ಮಂಜೂರು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರನ್ನು ಯಾವ ಪರಿಸ್ಥಿತಿಯಲ್ಲೂ ಬಂಧಿಸಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಇದಕ್ಕೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ನನ್ನನ್ನು ಬಂದಿಸಲು ನೂರು ಸಿದ್ದರಾಮಯ್ಯ ಬರಬೇಕಾಗುತ್ತದೆ ಎಂದು ತಿರುಗೇಟು ನೀಡಿದರು.
ಹೌದು ಸಿಎಂ ಸಿದ್ದರಾಮಯ್ಯ ಅವರು HD ಕುಮಾರಸ್ವಾಮಿ ಅವರನ್ನ ಅರೆಸ್ಟ್ ಮಾಡುತ್ತೇವೆ ಅಂತ ಎಲ್ಲವೂ ಹೇಳಿಲ್ಲ.ಆದರೆ ಅರೆಸ್ಟ್ ಮಾಡಬೇಕಾದಂತಹ ಪರಿಸ್ಥಿತಿ ಬಂದರೆ ಅರೆಸ್ಟ್ ಮಾಡುತ್ತೇವೆ. ಯಾವುದೇ ಮುಲಾಜಿಲ್ಲದೆ ಬಂಧಿಸುತ್ತೇವೆ. ಆದರೆ ಅಂತಹ ಸನ್ನಿವೇಶ ಸದ್ಯಕ್ಕೆ ಇಲ್ಲ.
ಕುಮಾರಸ್ವಾಮಿ ಪಾಪ ಭಯಪಟ್ಟಿಕೊಂಡಿದ್ದಾರೆ. ಗವರ್ನರ್ ಪ್ರಾಸಿಕ್ಯೂಷನ್ ಅನುಮತಿ ಕೊಡುತ್ತಾರೆ ಎಂದು ಭಯಪಟ್ಟಿದ್ದಾರೆ. ಅನುಮತಿ ನಾವು ಕೇಳಿಲ್ಲ ಖಾಸಗಿ ವ್ಯಕ್ತಿನು ಕೇಳಿಲ್ಲ ಅನುಮತಿ ಕೇಳಿರುವುದು SIT ಅಧಿಕಾರಿಗಳು. ಸಾಕ್ಷಿಗಳನ್ನ ಸಂಗ್ರಹಿಸಿ ಆಮೇಲೆ ಪ್ರಾಸಿಕ್ಯೂಷನ್ ಗೆ ಅನುಮತಿ ಕೇಳಿದ್ದಾರೆ. ಅದರ ಅರ್ಥ ಇವರ ಮೇಲೆ ಸಾಕ್ಷಿಗಳು ಇವೆ ಅಂತ ಅರ್ಥ ಎಂದು ತಿಳಿಸಿದರು.
ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ HD ಕುಮಾರಸ್ವಾಮಿ, ನನ್ನ ಬಂಧಿಸೋಕೆ 100 ಸಿದ್ದರಾಮಯ್ಯ ಬರಬೇಕು. ಎಂದು ಬೆಂಗಳೂರಿನಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿಕೆ ನೀಡಿದರು. ನನ್ನ ಬಂಧಿಸಲು ನೂರು ಸಿದ್ದರಾಮಯ್ಯ ಬರಬೇಕು. ಈ ಕುರಿತು ಭಯಪಟ್ಟಿಕೊಂಡಿದ್ದಾರೆ ಎಂಬ ಸಿಎಂ ಹೇಳಿಕೆಗೆ ನಾನು ಭಯಪಟ್ಟು ಕೊಂಡಿದ್ದೇನೆ ನನ್ನ ನೋಡಿದರೆ ನಿಮಗೆ ಹಾಗೆ ಕಾಣಿಸುತ್ತದೆಯಾ ಎಂದು ಮಾಧ್ಯಮಗಳ ಪ್ರಶ್ನೆಗೆ ಹೆಚ್ಡಿ ಕುಮಾರಸ್ವಾಮಿ ಉತ್ತರಿಸಿದರು.
ಏನಿದು ಕುಮಾರಸ್ವಾಮಿ ವಿರುದ್ಧದ ಪ್ರಕರಣ?
2007ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಬಳ್ಳಾರಿಯ ಸಂಡೂರಿನಲ್ಲಿ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ಗೆ ಭೂಮಿ ಮಂಜೂರು ಮಾಡಿದ್ದರು. ನಿಯಮ ಉಲ್ಲಂಘಿಸಿ 550 ಹೆಕ್ಟೇರ್ ಭೂಮಿ ಮಂಜೂರು ಮಾಡಿದ್ದ ಆರೋಪ ಕೇಳಿಬಂದಿತ್ತು. ಈ ವಿಚಾರವನ್ನು 2011ರ ಲೋಕಾಯುಕ್ತರ ವರದಿಯಲ್ಲಿ ಕೂಡ ಉಲ್ಲೇಖ ಮಾಡಲಾಗಿತ್ತು. ಅದಾದ ಬಳಿಕ ಲೋಕಾಯುಕ್ತರು ತನಿಖೆ ಮಾಡಿ ರಾಜ್ಯಪಾಲರಿಗೆ ಪತ್ರ ಬರೆದಿದ್ದರು.
2023ರ ನವೆಂಬರ್ 21ರಂದು ಪ್ರಾಸಿಕ್ಯೂಷನ್ಗೆ ಅನುಮತಿ ಕೊಡುವಂತೆ ಕೇಳಿದ್ದರು. ಇದೀಗ ಬರೋಬ್ಬರಿ 8 ತಿಂಗಳ ಬಳಿಕ ಲೋಕಾಯುಕ್ತರು ಎಸ್ಐಟಿಗೆ ಸ್ಪಷ್ಟನೆ ಕೇಳಿದ್ದಾರೆ. ಇದೇ ವರ್ಷ ಜುಲೈ 29ರಂದು ಎಸ್ಐಟಿಗೆ ಪತ್ರ ಬರೆದಿದ್ದಾರೆ. ಪತ್ರಕ್ಕೆ ಪ್ರತಿಕ್ರಿಯೆ ಕೊಟ್ಟ ಎಸ್ಐಟಿ ಮುಖ್ಯಸ್ಥರು, ರಾಜ್ಯಪಾಲರಿಗೆ ಆಗಸ್ಟ್ 21ರಂದು ಸ್ಪಷ್ಟನೆ ನೀಡಿದ್ದಾರೆ. ಈ ಸ್ಪಷ್ಟನೆಯಲ್ಲೇ ಚಾರ್ಜ್ಶೀಟ್ ಸಲ್ಲಿಸಲು ಅನುಮತಿ ಕೊಡಿ ಎಂದು ಲೋಕಾಯುಕ್ತರು ಮನವಿ ಮಾಡಿದ್ದಾರೆ.