Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಈ ಐದು ನಿಯಮ ಪಾಲಿಸಿದರೆ ನಿಮ್ಮ ಆದಾಯವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ

13/05/2025 8:27 PM

BREAKING: ಅಮೆರಿಕ, ಸೌದಿ ಅರೇಬಿಯಾ 142 ಬಿಲಿಯನ್ ಡಾಲರ್ ಬೃಹತ್ ಶಸ್ತ್ರಾಸ್ತ್ರ ಒಪ್ಪಂದಕ್ಕೆ ಸಹಿ

13/05/2025 8:23 PM

ಮನೆ ಬದಲಿಸಿದ್ದೀರಾ.? ಆ ಮನೆಗೂ ಗೃಹಜ್ಯೋತಿ ಸೌಲಭ್ಯ ಪಡೆಯಲು ಅವಕಾಶವಿದೆ, ಜಸ್ಟ್ ಹೀಗೆ ಮಾಡಿ | Gruha Jyothi Scheme

13/05/2025 7:51 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಅಶ್ವಮೇಧ ಹೊಸ ವಿನ್ಯಾಸದ ‘100 ಕರ್ನಾಟಕ ಸಾರಿಗೆ ಎಕ್ಸ್ ಪ್ರೆಸ್’ ಬಸ್ಸು ಲೋಕಾರ್ಪಣೆ: ಇಲ್ಲಿದೇ ಬಸ್ಸುಗಳ ವಿಶೇಷತೆ
KARNATAKA

ಅಶ್ವಮೇಧ ಹೊಸ ವಿನ್ಯಾಸದ ‘100 ಕರ್ನಾಟಕ ಸಾರಿಗೆ ಎಕ್ಸ್ ಪ್ರೆಸ್’ ಬಸ್ಸು ಲೋಕಾರ್ಪಣೆ: ಇಲ್ಲಿದೇ ಬಸ್ಸುಗಳ ವಿಶೇಷತೆ

By kannadanewsnow0905/02/2024 2:42 PM

ಬೆಂಗಳೂರು: ಅಶ್ವಮೇಧ (ಕ್ಲಾಸಿಕ್) ಹೊಸ ವಿನ್ಯಾಸದ 100 ಕರ್ನಾಟಕ ಸಾರಿಗೆ (ಪಾಯಿಂಟ್‌ –ಟು-ಪಾಯಿಂಟ್‌) ಎಕ್ಸ್ ಪ್ರೆಸ್‌ ಬಸ್ಸುಗಳನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಲೋಕಾರ್ಪಣೆ‌ಗೊಳಿಸಿದರು.

ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ,  ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ,  KSRTC ಅಧ್ಯಕ್ಷ ಗೋಪಿ ಶ್ರೀನಿವಾಸ್, ಕರಾರಸಾ ನಿಗಮ ರವರು ನಿಗಮದ ಅಶ್ವಮೇಧ ಕ್ಲಾಸಿಕ್‌ ಮಾದರಿಯ 100 ಹೊಸ ವಿನ್ಯಾಸದ ಪಾಯಿಂಟ್-ಟು-ಪಾಯಿಂಟ್‌ ಎಕ್ಸ್‌ಪ್ರೆಸ್ ಬಸ್ಸುಗಳಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿ ಸಿಎಂ ಸಿದ್ಧರಾಮಯ್ಯ, ರಸ್ತೆ ಸಾರಿಗೆ ನಿಗಮಗಳು ಕಳೆದ 06 ವರ್ಷಗಳಿಂದ ಯಾವುದೇ ನೂತನ ವಾಹನಗಳನ್ನು ಸೇರ್ಪಡೆ ಮಾಡಿರಲಿಲ್ಲ, ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ವರ್ಷ 5800 ನೂತನ ವಾಹನಗಳನ್ನು ಸೇರ್ಪಡೆ ಮಾಡುವುದಾಗಿ ತಿಳಿಸಿ, ನಿಗಮಗಳು ಹಲವಾರು ಜನಪ್ರಿಯ ಯೋಜನೆಗಳನ್ನು ಹಮ್ಮಿಕೊಂಡ ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ನೀಡುತ್ತಿದೆ ಹಾಗೂ ಕಾರ್ಮಿಕರ ಕಲ್ಯಾಣಕ್ಕಾಗಿ ವಿನೂತನ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿರುವುದಾಗಿ ತಿಳಿಸಿ, ಸಂತೋಷ ವ್ಯಕ್ತಿಪಡಿಸಿದರು.

ನೂತನ ಮಾದರಿಯ Point to Point ಎಕ್ಸ್‌ಪ್ರೆಸ್‌ ವಾಹನಗಳ ವೈಶಿಷ್ಟ್ಯಗಳು 

  • ವಾಹನದ ಎತ್ತರ 4 ಮೀಟರ್‌ (ಹಿಂದೆ 3.2 ಮೀಟರ್‌ ಇತ್ತು)
  • ಆಸನಗಳ ಸಂಖ್ಯೆ 50 ಹೆಚ್ಚಿನ ಎತ್ತರದ ಉತ್ತಮ ಗುಣಮಟ್ಟದ ಕುಷನ್‌ ಮತ್ತುರೆಕ್ಸಿನ್‌ ಒಳಗೊಂಡಂತೆ ಪ್ರತಿ ಆಸನದ ಹಿಂಬದಿಯಲ್ಲಿ ಮ್ಯಾಗಜಿನ್‌ ಹಾಗೂ ವಾಟರ್‌ ಬಾಟಲ್‌ ಪೌಚ್‌ನ ಸೌಲಭ್ಯ.
  • ವಿಶಾಲವಾದ ವಾಹನದ ಮುಂದಿನ ಹಾಗೂ ಹಿಂದಿನ ಗಾಜು
  • ವಿಶಾಲವಾದ ಪ್ರಯಾಣಿಕರ ಕಿಟಕಿ ಫ್ರೇಮ್ ಹಾಗೂ ಮೇಲಿನ ಗಾಜು
  • ಮೇಲ್ಛಾವಣಿಯಲ್ಲಿ 2 ಸಾಲು ಗ್ರಾಬ್‌ ರೈಲ್.
  • ಬಸ್ಸಿನ ಹಿಂದೆ ಹಾಗೂ ಮುಂದೆ ಎಲ್.ಇ.ಡಿ ಮಾರ್ಗ ಫಲಕ ಅಳವಡಿಕೆ
  • ಜಾಹೀರಾತು ಮಾದರಿಯ ಹ್ಯಾಂಡ್‌ ಗ್ರಿಪ್.‌
  • ಎಫ್.ಆರ್.ಪಿ ಡ್ಯಾಶ್‌ ಬೋರ್ಡ್.‌
  • ಮೇಲ್ಛಾವಣಿ (ಸಲೂನ್)‌ ಎಲ್.ಇ.ಡಿ .ಸ್ಟ್ರೀಪ್‌ 2 ಸಂಖ್ಯೆ ಲೈಟ್.‌
  • ಪ್ರವೇಶದ ಫುಟ್‌ ಸ್ಟೆಪ್‌ ಮೇಲೆ ಸ್ಟ್ರಿಪ್‌ ಮಾದರಿಯ ಎಲ್‌ ಇ ಡಿ ಬಲ್ಬಗಳು
  • ಮುಂಬದಿ ಹಾಗೂ ಹಿಂಬದಿಯಲ್ಲಿ ತಲಾ 01 ಕ್ಯಾಮರ ಆಳವಡಿಸಲಾಗಿದೆ.
  • ಎಲೆಕ್ಟ್ರಾನಿಕ್ ವಾಹನ ಸ್ಥಿರತೆ ನಿಯಂತ್ರಣ ಉಪಕರಣ ಅಳವಡಿಕೆ. (ಇವಿಎಸ್‌ಸಿ)
  • Bs-6 OBD 2 ಕಂಪ್ಲೈಂಟ್
  • ವಾಹನಕ್ಕೆ ಟ್ರ್ಯಾಕಿಂಗ್‌ ಉಪಕರಣ, ಪ್ಯಾನಿಕ್ ಬಟನ್‌ಗಳು ಮತ್ತು ಬಸ್‌ ನಿಲ್ದಾಣಗಳ ಮಾಹಿತಿ ನೀಡುವ (ಧ್ವನಿವರ್ದಕ) ಯಂತ್ರಗಳನ್ನು ಅಳವಡಿಸಲಾಗಿದೆ.

ನೂತನ ಮಾದರಿಯ POINT TO POINT ಹಾಗೂ ಪ್ರಸ್ತುತ ಕಾರ್ಯಾಚರಣೆಯಲ್ಲಿರುವ  ಕರ್ನಾಟಕ ಸಾರಿಗೆ ವಾಹನಗಳಲ್ಲಿನ ತಾಂತ್ರಿಕ (ವಿನ್ಯಾಸ) ವ್ಯತ್ಯಾಸದ ವಿವರಗಳು

  ಕ್ರ.

ಸಂ

ವಿವರಗಳು ನೂತನ

ಮಾದರಿಯ (POINT TO POINT) ವಾಹನ 

 

(ಪ್ರಾರಂಭಿಕ ವರ್ಷ – 2024)

ಪ್ರಸ್ತುತ ಕಾರ್ಯಾಚರಣೆಯಲ್ಲಿರುವ  ಕರ್ನಾಟಕ ಸಾರಿಗೆ ವಾಹನ

 

(ಪ್ರಾರಂಭಿಕ ವರ್ಷ – 2004)

1 ಒಟ್ಟಾರೆ ಬಸ್ಸಿನ ಎತ್ತರ 3.42 ಮೀಟರ್ (135”) 3.19 ಮೀಟರ್ (125”)
2 ಬಸ್ಸಿನ ಒಳಭಾಗದ ಎತ್ತರ 2.12 ಮೀಟರ್‌  (83”) 1.96 ಮೀಟರ್‌ (77”)
3 ವಾಹನದ ದೊಡ್ಡ ಗಾಜುಗಳ  ಅಳತೆ

ಅ) ಮುಂಭಾಗ

ಆ) ಹಿಂಭಾಗ

 

70” X 97”

53” x 75”

 

46” X 97”

36” X 47”

4 ಮಾರ್ಗ ಫಲಕದ ವಿನ್ಯಾಸ  & ಅಳತೆ

ಅ) ಮುಂಭಾಗ

ಆ) ಹಿಂಭಾಗ

 

ಎಲ್‌.ಇ.ಡಿ. ಡಿಸ್ಪ್ಲೇ ಬೋರ್ಡ್‌

1800  X 220 ಎಂ.ಎಂ.

900 X 220 ಎಂ.ಎಂ.

 

ಸ್ಟಿಕರಿಂಗ್‌ /ಪೈಂಟಿಂಗ್ ಬೋರ್ಡ್‌

800  X 200 ಎಂ.ಎಂ.

800  X 200 ಎಂ.ಎಂ.

5 ಪ್ರಯಾಣಿಕರ ಕಿಟಕಿ ಗಾಜಿನ ಅಳತೆ 1397  X 800 ಎಂ.ಎಂ. 1080  X 610 ಎಂ.ಎಂ.
‌6 ಕಿಟಕಿ ಮೇಲಿನ ಗಾಜಿನ  ಅಳತೆ 1397  X 440 ಎಂ.ಎಂ. 1080  X 290 ಎಂ.ಎಂ.
7 ಒಟ್ಟು  ಪ್ರಯಾಣಿಕರ ಆಸನಗಳು 50 + 1 + 1 = 52 ಸಂಖ್ಯೆ

(ಎತ್ತರದ ಉತ್ತಮ  ಗುಣಮಟ್ಟದ ಕುಷನ್‌ ಮತ್ತು ರೆಕ್ಸಿನ್‌ ಒಳಗೊಂಡಂತೆ, ಪ್ರತಿ ಸೀಟಿನ  ಹಿಂಬದಿಯಲ್ಲಿ  ಮ್ಯಾಗಜಿನ್‌ ಹಾಗೂ ವಾಟರ್‌ ಬಾಟಲ್‌ ಪೌಚ್‌ನ ಸೌಲಭ್ಯ)

49 + 1 + 1 = 51 ಸಂಖ್ಯೆ
8 ಫುಟ್‌ ಬೋರ್ಡ್‌ ಲೈಟಿಂಗ್ ಎಲ್‌ಇಡಿ ಸ್ಟ್ರಿಪ್‌ ಲೈಟ್ಸ್‌ ಸಾಮಾನ್ಯ ಬಲ್ಬ್‌
9 ಪ್ರಯಾಣಿಕರ ಹಿಡಿಕೆ (ಗ್ರಾಬ್‌ ರೈಲ್‌) 2 ಸಾಲು 1 ಸಾಲು
10 ಬಸ್ಸಿನ ಒಳಭಾಗದ (ಸಲೂನ್‌)  ಬೆಳಕಿನ ವ್ಯವಸ್ಥೆ ಬಸ್ಸಿನ ಉದ್ದಕ್ಕೂ ಎಲ್‌ ಇ ಡಿ ಸ್ಟ್ರಿಪ್‌ ಲೈಟ್‌ಗಳು – 02 ಸಾಲು ಸಾಮಾನ್ಯ ಬಲ್ಬ್‌ಗಳು

9 ಸಂಖ್ಯೆ

11 ಮುಂದಿನ & ಹಿಂದಿನ ಕ್ಯಾಮರಾಗಳು 2 ಸಂಖ್ಯೆ -ಇಲ್ಲ-
12 ಎಲೆಕ್ಟ್ರಾನಿಕ್‌ ವೆಹಿಕಲ್‌ ಸ್ಟೆಬಿಲಿಟಿ ಕಂಟ್ರೋಲ್‌ (EVSC) ಅಳವಡಿಸಿದೆ -ಇಲ್ಲ-
13 ಖಾಲಿ ಬಸ್ಸಿನ ತೂಕ

(unladen -ULW)

9840  ಕೆಜಿ. 9300  ಕೆಜಿ.

ಕ.ರಾ.ರ.ಸಾ.ನಿಗಮದ ಪ್ರಸ್ತುತ ಸ್ಥಿತಿಗತಿ ಕೆಳಕಂಡಂತಿದೆ. 

  • ವಿಭಾಗಗಳು – 17
  • ಘಟಕಗಳು – 83
  • ಬಸ್ಸು ನಿಲ್ದಾಣಗಳು – 175
  • ಸಾರಿಗೆ ಒದಗಿಸಿರುವ ಗ್ರಾಮಗಳು- 19076
  • ಸಾರಿಗೆ ಸೇವೆಗಳು – 7638
  • ಒಟ್ಟು ಬಸ್ಸುಗಳು – 8360
  • ಪ್ರತಿನಿತ್ಯ ಕಾರ್ಯಾಚರಿಸಿರುವ ಕಿ.ಮೀ – 27.84 ಲಕ್ಷ ಕಿಮೀ
  • ಪ್ರತಿನಿತ್ಯ ಪ್ರಯಾಣಿಸಿರುವ ಅಂದಾಜು ಒಟ್ಟು ಪ್ರಯಾಣಿಕರ ಸಂಖ್ಯೆ – 32.33 ಲಕ್ಷ,
  • ಪ್ರತಿನಿತ್ಯ ಪ್ರಯಾಣಿಸಿರುವ ಅಂದಾಜು ಶಕ್ತಿ ಪ್ರಯಾಣಿಕರ ಸಂಖ್ಯೆ-18 ರಿಂದ 19 ಲಕ್ಷ
  • ಒಟ್ಟು ಸಿಬ್ಬಂದಿ – 33843

ಸಾರ್ವಜನಿಕ ಸಮೂಹ ಸಾರಿಗೆಯನ್ನು ಉತ್ತೇಜಿಸಲು ಹಾಗೂ ಪ್ರಯಾಣಿಕರಿಗೆ ಉತ್ತಮ ಸೇವೆಯನ್ನು ಒದಗಿಸಲು ನಿಗಮವು ಪ್ರಸಕ್ತ ವರ್ಷದಲ್ಲಿ ಒಟ್ಟು 948 ಡೀಸೆಲ್‌ ಹಾಗೂ 300 ಇಲೆಕ್ಟ್ರಿಕ್‌ (ಜಿ.ಸಿ.ಸಿ. ಮಾದರಿಯಲ್ಲಿ) ಹೊಸ ವಾಹನಗಳನ್ನು ಸೇರ್ಪಡೆ ಮಾಡಲು ಯೋಜಿಸಿದ್ದು, ಡಿಸೆಂಬರ್‌ ವರೆಗೆ 180 ವಾಹನಗಳನ್ನು (153 ಡೀಸೆಲ್‌ ಹಾಗೂ 27 ಇಲೆಕ್ಟ್ರಿಕ್) ಸೇರ್ಪಡೆಗೊಳಿಸಿದೆ. ಈ ಬಾಬ್ತು ಸರ್ಕಾರವು ರೂ. 100 ಕೋಟಿ ಅನುದಾನ ಒದಗಿಸಿದೆ.

ನಿಗಮವು ಹಲವಾರು ಕಾರ್ಮಿಕ ಕಲ್ಯಾಣ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಪ್ರಮುಖ ಯೋಜನೆಗಳ ವಿವರ ಕೆಳಕಂಡಂತಿದೆ.

  • ದೇಶದ ರಸ್ತೆ ಸಾರಿಗೆ ನಿಗಮಗಳಲ್ಲಿಯೇ ಪ್ರಪ್ರಥಮ ಬಾರಿಗೆ ಕ.ರಾ.ರ.ಸಾ. ನಿಗಮದ ಸಿಬ್ಬಂದಿಗಳಿಗೆ ರೂ.1.00 ಕೋಟಿ ಅಪಘಾತ ವಿಮಾ ಯೋಜನೆ ಜಾರಿಗೊಳಿಸಲಾಗಿದೆ.
  • ಈ ಯೋಜನೆಯಡಿ 12 ಮೃತಾವಲಂಬಿತರಿಗೆ ರೂ.1.00 ಕೋಟಿ ಚೆಕ್‌ ವಿತರಿಸಲಾಗಿದೆ.
  • ಕ.ರಾ.ರ.ಸಾ. ನಿಗಮದ ಸಿಬ್ಬಂದಿಗಳು ಸೇವಾವಧಿಯಲ್ಲಿ ಯಾವುದೇ ಕಾರಣದಿಂದ ಮರಣ ಹೊಂದಿದ್ದಲ್ಲಿ ಅವರ ಅವಲಂಬಿತರಿಗೆ ನೌಕರರ ಕುಟುಂಬ ಕಲ್ಯಾಣ ಯೋಜನೆಯಡಿ ಹಾಲಿ ನೀಡುತ್ತಿರುವ ರೂ.3 ಲಕ್ಷ ಪರಿಹಾರ ಮೊತ್ತವನ್ನು ರೂ.10 ಲಕ್ಷಕ್ಕೆ ಹೆಚ್ಚಿಸಲಾಗಿದೆ.
  • ಕ.ರಾ.ರ.ಸಾ. ನಿಗಮದ ಸಿಬ್ಬಂದಿಗಳ ಮಕ್ಕಳಿಗೆ ವಿದ್ಯಾ ಸಹಾಯ ನಿಧಿ ಅಡಿಯಲ್ಲಿ ʼಸಾರಿಗೆ ವಿದ್ಯಾ ಚೇತನʼ ಯೋಜನೆ ಜಾರಿಗೊಳಿಸಿ ಶಿಕ್ಷಣಕ್ಕೆ ಸ್ಕಾಲರ್‌ಶಿಪ್‌ ನೀಡಲಾಗುತ್ತಿದೆ. 2022-23 ಹಾಗೂ 2023-24ನೇ ಸಾಲಿನಲ್ಲಿ 3344 ಫಲಾನುಭವಿಗಳಿಗೆ ರೂ.1.68 ಕೋಟಿ ಸ್ಕಾಲರ್‌ಶಿಪ್‌ ನೀಡಲಾಗಿದ್ದು, ಸದರಿ ಕಾರ್ಯವು ಪ್ರಗತಿಯಲ್ಲಿದೆ.
  • ಕ.ರಾ.ರ.ಸಾ. ನಿಗಮದ 40 ವರ್ಷ ಮೇಲ್ಪಟ್ಟ ಸಿಬ್ಬಂದಿಗಳಿಗೆ ಹೃದಯ ಸಂಬಂಧಿ ಹತ್ತು ವೈದ್ಯಕೀಯ ತಪಾಸಣೆಗಳನ್ನು ಮಾಡಿಸಲು ಶ್ರೀ. ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯೊಂದಿಗೆ ದಿನಾಂಕ:02-11-2023ರಿಂದ ಜಾರಿಗೆ ಬರುವಂತೆ ಮುಂದಿನ ಐದು ವರ್ಷಗಳ ಅವಧಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ದಿನಾಂಕ: 31.01.2024 ರವರೆಗೆ 2723 ಸಿಬ್ಬಂದಿಗಳು ಇದರ ಪ್ರಯೋಜನವನ್ನು ಪಡೆದುಕೊಂಡಿರುತ್ತಾರೆ.
  • ನಗದು ರಹಿತ ಪ್ರಯಾಣವನ್ನು ಡೆಬಿಟ್/ಕ್ರೆಡಿಟ್ ಕಾರ್ಡ್‌, ರಾಷ್ಟ್ರೀಯ ಮೊಬಿಲಿಟಿ ಕಾರ್ಡ್, ನೇರ ನಗದು ವರ್ಗಾವಣೆ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ.
  • 8 ವರ್ಷಗಳಿಂದ ಸ್ಥಗಿತಗೊಂಡಿದ್ದ ತಾಂತ್ರಿಕ ಸಹಾಯಕ ಹುದ್ದೆಯ ನೇಮಕಾತಿಗೆ ಚಾಲನೆ ನೀಡಿ‌, 240 ತಾಂತ್ರಿಕ ಸಹಾಯಕರನ್ನು ನೇಮಕ ಮಾಡಿಕೊಳ್ಳಲಾಗಿದೆ.

ಇದೇ ವಾಹನದ ಮಾದರಿಯಲ್ಲಿ ಅಶೋಕ್‌ ಲೇಲ್ಯಾಂಡ್‌ ಕಂಪನಿಯ 200 ಸಾಮಾನ್ಯ ಕರ್ನಾಟಕ ಸಾರಿಗೆ ವಾಹನಗಳನ್ನು ನಿಗಮದ ವಾಹನ ಬಲಕ್ಕೆ ಸೇರಿಸಲಾಗುವುದು. ಪ್ರಸ್ತುತ 15 ವಾಹನಗಳು ಪ್ರಾಯೋಗಿಕ ಕಾರ್ಯಾಚರಣೆಯಲ್ಲಿದೆ.

ಕಾರ್ಯಕ್ರಮದಲ್ಲಿ ನಾಗರಾಜ್‌ ಯಾದವ್‌, ವಿಧಾನ ಪರಿಷತ್‌ ಸದಸ್ಯರು, ನಸೀರ್‌ ಅಹಮದ್‌, ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು ಹಾಗೂ ಶಾಸಕರು, ವಿಧಾನ ಪರಿಷತ್‌, ಡಾ. ಎನ್‌.ವಿ. ಪ್ರಸಾದ್‌ ಭಾಆಸೇ., ಸರ್ಕಾರದ ಕಾರ್ಯದರ್ಶಿ, ಸಾರಿಗೆ ಇಲಾಖೆ, ವಿ. ಅನ್ಬುಕುಮಾರ್‌, ಭಾಆಸೇ., ಡಾ. ನಂದಿನಿದೇವಿ.ಕೆ. ಭಾಆಸೇ., ನಿರ್ದೇಶಕರು (ಸಿಬ್ಬಂದಿ ಮತ್ತು ಜಾಗೃತ), ಕಾರ್ಮಿಕ ಸಂಘಟನೆಗಳ ಮುಖಂಡರು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

LIC Share Rises: ಮೊದಲ ಬಾರಿಗೆ 1000 ರೂ ದಾಟಿದ ಎಲ್ಐಸಿ ಮಾರುಕಟ್ಟೆ ಬಂಡವಾಳ

BREAKING: ‘ಜಾರ್ಖಂಡ್ ವಿಧಾನಸಭೆ’ಯಲ್ಲಿ ವಿಶ್ವಾಸಮತ ಗೆದ್ದ ‘ಸಿಎಂ ಚಂಪೈ ಸೊರೆನ್’ | Jharkhand Floor Test

Share. Facebook Twitter LinkedIn WhatsApp Email

Related Posts

ಈ ಐದು ನಿಯಮ ಪಾಲಿಸಿದರೆ ನಿಮ್ಮ ಆದಾಯವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ

13/05/2025 8:27 PM3 Mins Read

ಮನೆ ಬದಲಿಸಿದ್ದೀರಾ.? ಆ ಮನೆಗೂ ಗೃಹಜ್ಯೋತಿ ಸೌಲಭ್ಯ ಪಡೆಯಲು ಅವಕಾಶವಿದೆ, ಜಸ್ಟ್ ಹೀಗೆ ಮಾಡಿ | Gruha Jyothi Scheme

13/05/2025 7:51 PM1 Min Read

ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರಲ್ಲಿ ಮುಳುಗಿ ಸಾವು

13/05/2025 7:44 PM1 Min Read
Recent News

ಈ ಐದು ನಿಯಮ ಪಾಲಿಸಿದರೆ ನಿಮ್ಮ ಆದಾಯವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ

13/05/2025 8:27 PM

BREAKING: ಅಮೆರಿಕ, ಸೌದಿ ಅರೇಬಿಯಾ 142 ಬಿಲಿಯನ್ ಡಾಲರ್ ಬೃಹತ್ ಶಸ್ತ್ರಾಸ್ತ್ರ ಒಪ್ಪಂದಕ್ಕೆ ಸಹಿ

13/05/2025 8:23 PM

ಮನೆ ಬದಲಿಸಿದ್ದೀರಾ.? ಆ ಮನೆಗೂ ಗೃಹಜ್ಯೋತಿ ಸೌಲಭ್ಯ ಪಡೆಯಲು ಅವಕಾಶವಿದೆ, ಜಸ್ಟ್ ಹೀಗೆ ಮಾಡಿ | Gruha Jyothi Scheme

13/05/2025 7:51 PM

ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರಲ್ಲಿ ಮುಳುಗಿ ಸಾವು

13/05/2025 7:44 PM
State News
KARNATAKA

ಈ ಐದು ನಿಯಮ ಪಾಲಿಸಿದರೆ ನಿಮ್ಮ ಆದಾಯವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ

By kannadanewsnow0913/05/2025 8:27 PM KARNATAKA 3 Mins Read

ಈ ಐದು ವಿಷಯಗಳನ್ನು ಪಾಲಿಸಿದರೆ ನಿಮ್ಮ ಆದಾಯವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಕೋಟಿಗಟ್ಟಲೆ ಆದಾಯ ಹೆಚ್ಚಿಸಲು ಅನುಸರಿಸಬೇಕಾದ ಅಂಶಗಳು ಯಾವುವು?…

ಮನೆ ಬದಲಿಸಿದ್ದೀರಾ.? ಆ ಮನೆಗೂ ಗೃಹಜ್ಯೋತಿ ಸೌಲಭ್ಯ ಪಡೆಯಲು ಅವಕಾಶವಿದೆ, ಜಸ್ಟ್ ಹೀಗೆ ಮಾಡಿ | Gruha Jyothi Scheme

13/05/2025 7:51 PM

ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರಲ್ಲಿ ಮುಳುಗಿ ಸಾವು

13/05/2025 7:44 PM

BIG NEWS : ಪಾಕಿಸ್ತಾನಕ್ಕೆ ಬುದ್ಧಿ ಕಲಿಸಬೇಕೆಂದು ಹೊರಟು, ಈಗ ಕದನ ವಿರಾಮ ಘೋಷಿಸಿದ್ದು ಸರಿನಾ? : ಕೃಷ್ಣ ಭೈರೇಗೌಡ

13/05/2025 7:24 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.