ಯುಕೆ: ಅನೇಕ ಕಂಪನಿಗಳಲ್ಲಿ ವಾರದ ರಜೆ ಅಂದ್ರೆ, ಶನಿವಾರ ಮತ್ತು ಭಾನುವಾರ ಇರುತ್ತೆ ಹಾಗೂ ವಾರದಲ್ಲಿ ಉದ್ಯೋಗಿಗಳಿಗೆ ಒಂದೇ ದಿನ ಮಾತ್ರ ರಜೆ ನೀಡಲಾಗುತ್ತದೆ. ಆದ್ರೆ, ವಾರದಲ್ಲಿ ನಾಲ್ಕು ದಿನ ಕೆಲಸ, ಮೂರು ದಿನ ರಜೆ ನೀಡಲು 100 ಬ್ರಿಟನ್ ಕಂಪನಿಗಳು ನಿರ್ಧರಿಸಿದ್ದು, ಇದಕ್ಕೆ ಒಪ್ಪಿಗೆ ನೀಡಿವೆ.
ಯುನೈಟೆಡ್ ಕಿಂಗ್ಡಂನಲ್ಲಿ ನೂರು ಕಂಪನಿಗಳು ಯಾವುದೇ ವೇತನವನ್ನು ಕಡಿತಗೊಳಿಸದೇ ಎಲ್ಲಾ ಉದ್ಯೋಗಿಗಳಿಗೆ ವಾರದಲ್ಲಿ ನಾಲ್ಕು ದಿನ ಕೆಲಸ, ಮೂರು ದಿನ ರಜೆಗೆ ಸಹಿ ಹಾಕಿವೆ. ಈ 100 ಕಂಪನಿಗಳು ಒಟ್ಟು 2,600 ಸಿಬ್ಬಂದಿಯನ್ನು ನೇಮಿಸಿಕೊಂಡಿವೆ. ಇದರಿಂದ ಉದ್ಯೋಗಿಗಳು ಭಾರಿ ಸಂತಸ ವ್ಯಕ್ತಪಡಿಸಿವೆ.
100 ಕಂಪನಿಗಳಲ್ಲಿ ಹೊಸ ಕೆಲಸದ ನೀತಿಯನ್ನು ಅಳವಡಿಸಿಕೊಳ್ಳಲು ಸಹಿ ಹಾಕಿರುವ UK ಯ ಎರಡು ದೊಡ್ಡ ಸಂಸ್ಥೆಗಳೆಂದರೆ ಆಟಮ್ ಬ್ಯಾಂಕ್ ಮತ್ತು ಆವಿನ್ ಜಾಗತಿಕ ಮಾರ್ಕೆಟಿಂಗ್ ಕಂಪನಿಗಳಾಗಿವೆ. ಉದ್ಯೋಗಿಗಳಿಗೆ ವಾರದಲ್ಲಿ ಮೂರು ದಿನ ರಜೆ ನೀಡುವುದರಿಂದ ಉತ್ಪಾದಕತೆ ಮೇಲೆ ಉತ್ತಮ ಪರಿಣಾಮ ಬೀರಲಿದೆ ಎಂದು ಕಂಪನಿಗಳು ಹೇಳಿಕೊಂಡಿವೆ.
ಈ ಬಗ್ಗೆ ಮಾತನಾಡಿದ ಅವಿನ್ನ ಮುಖ್ಯ ಕಾರ್ಯನಿರ್ವಾಹಕ ಆಡಮ್ ರಾಸ್, ಹೊಸ ಕೆಲಸದ ಮಾದರಿಗೆ ಬದಲಾಯಿಸುವುದು “ಅಭಿಯಾನದ ಇತಿಹಾಸದಲ್ಲಿ ನಾವು ನೋಡಿದ ಅತ್ಯಂತ ಪರಿವರ್ತಕ ಉಪಕ್ರಮಗಳಲ್ಲಿ ಒಂದಾಗಿದೆ” ಎಂದು ಹೇಳಿದರು.
ಹೊಸ ಕೆಲಸದ ಮಾದರಿಯನ್ನು ಅಧಿಕೃತವಾಗಿ ಅಳವಡಿಸಿಕೊಂಡಿರುವ ಹೆಚ್ಚಿನ ಕಂಪನಿಗಳು ತಂತ್ರಜ್ಞಾನ, ಈವೆಂಟ್ಗಳು ಅಥವಾ ಮಾರ್ಕೆಟಿಂಗ್ ಕಂಪನಿಗಳಂತಹ ಸೇವಾ ವಲಯದಲ್ಲಿವೆ. ಆದರೆ, ಕೆಲವು ತಯಾರಿಕಾ ಮತ್ತು ನಿರ್ಮಾಣ ಉದ್ಯೋಗದಾತರು ಸಹ ಸೈನ್ ಅಪ್ ಮಾಡಿದ್ದಾರೆ ಎನ್ನಲಾಗಿದೆ.
ʻಪಂಜಾಬ್ ನ್ಯಾಷನಲ್ ಬ್ಯಾಂಕ್ʼ ಗ್ರಾಹಕರ ಗಮನಕ್ಕೆ: ಡಿ. 12 ರೊಳಗೆ KYC ಅಪ್ಡೇಟ್ ಮಾಡುವಂತೆ ಸೂಚನೆ
BIGG NEWS : ಅಮೃತಸರದಲ್ಲಿ ಪಾಕಿಸ್ತಾನದ ಡ್ರೋನ್ ಅನ್ನು ಹೊಡೆದುರುಳಿಸಿದ ಬಿಎಸ್ಎಫ್ | Pakistani drone
ʻಪಂಜಾಬ್ ನ್ಯಾಷನಲ್ ಬ್ಯಾಂಕ್ʼ ಗ್ರಾಹಕರ ಗಮನಕ್ಕೆ: ಡಿ. 12 ರೊಳಗೆ KYC ಅಪ್ಡೇಟ್ ಮಾಡುವಂತೆ ಸೂಚನೆ