ತಮಿಳುನಾಡು: ದೇವಸ್ಥಾನಗಳಲ್ಲಿ ಲೂಟಿ ಮಾಡುತ್ತಿದ್ದಾರೆಂದು ಆರೋಪಿಸಿ, ಜನರ ಗುಂಪೊಂದು ಕುಟುಂಬದ ಆರು ಮಂದಿ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದು, ಈ ವೇಳೆ 10 ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಯಲ್ಲಿ ನಡೆದಿದೆ.
ನವೆಂಬರ್ 14 ರಂದು, ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಯ ಕಿಲ್ಲನೂರ್ ಗ್ರಾಮದ ಬಳಿ ರಸ್ತೆ ಬದಿಯ ದೇವಸ್ಥಾನಗಳಲ್ಲಿ ಲೂಟಿ ಮಾಡುವ ಗುಂಪು ಕಂಡುಬಂದಿದೆ ಎಂದು ವಾಟ್ಸಾಪ್ನಲ್ಲಿ ಸಂದೇಶಗಳು ವೈರಲ್ ಆಗಿದ್ದವು. ಇದೇ ಸಂದರ್ಭದಲ್ಲಿ, ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಆರು ಮಂದಿ ಹೊರಗಿನವರ ಗುಂಪನ್ನು ಗಮನಿಸಿದ ಗ್ರಾಮಸ್ಥರು ಅವರ ವಾಹನವನ್ನು ಹಿಂಬಾಲಿಸಿದ್ದಾರೆ. ಗ್ರಾಮಸ್ಥರ ಗುಂಪು ಆಟೋ ರಿಕ್ಷಾವನ್ನು ಸುತ್ತುವರಿದು ಮಚುವಾಡಿ ಬಳಿ ತಡೆದು ಕುಟುಂಬ ಸದಸ್ಯರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಕುಟುಂಬವನ್ನು ಕಡಲೂರಿನಲ್ಲಿ ರಕ್ಷಿಸಿದ್ದಾರೆ.
On Monday, in a ‘Cinematic chasing’ nearly 50 villagers in bikes from Kulathur Taluk captured a family that allegedly involved in theft & tried to escape in an auto.Police sources said family has been beaten up badly by the villagers & now admitted in #Pudukkottai GH @xpresstn pic.twitter.com/baSlUubagl
— Iniya Nandan (@Iniyanandan25) November 14, 2022
ಗ್ರಾಮಸ್ಥರ ಗುಂಪೊಂದು ಅವರ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಕೂಡ ವೈರಲ್ ಆಗಿದೆ. ದಾಳಿಯ ನಂತರ ಪೊಲೀಸರು ಕುಟುಂಬವನ್ನು ಪುದುಕೊಟ್ಟೈ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗುಂಪು ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ 10 ವರ್ಷದ ಬಾಲಕಿ ಬುಧವಾರ ಸಂಜೆ ಮೃತಪಟ್ಟಿದೆ. ಮಗುವಿನ ತಾಯಿ ಲಿಲಿ ಪುಷ್ಪಾ ಗಣೇಶ್ ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ತನ್ನ ಕುಟುಂಬ ಸಮೇತ ಎರಡು ತಿಂಗಳಿಂದ ಕಡಲೂರಿನಿಂದ ಆಟೋ ರಿಕ್ಷಾದಲ್ಲಿ ದೇವಾಲಯಗಳಿಗೆ ಭೇಟಿ ನೀಡುತ್ತಿರುವುದಾಗಿ ತಿಳಿಸಿದ್ದಾಳೆ.
ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಮಧ್ಯೆ, ಕುಟುಂಬ ಸದಸ್ಯರು ಕದ್ದಿದ್ದಾರೆ ಎನ್ನಲಾದ ವಸ್ತುಗಳಿಗೆ ಸಂಬಂಧಿಸಿದ ಮತ್ತೊಂದು ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
BIGG NEWS: ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ಆರೋಪ; ಚಿಲುಮೆ ಸಂಸ್ಥೆ ವಿರುದ್ಧ ತನಿಖೆಗೆ ಮುಂದಾದ ಬಿಬಿಎಂಪಿ
BIG NEWS: ʻ2024ರಲ್ಲಿ ತೆಲುಗು ದೇಶಂ ಪಕ್ಷ ಅಧಿಕಾರಕ್ಕೆ ಬರದಿದ್ದರೆ, ಅದೇ ನನ್ನ ಕೊನೆ ಚುನಾವಣೆʼ: ಚಂದ್ರಬಾಬು ನಾಯ್ಡು
BIGG NEWS: ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ಆರೋಪ; ಚಿಲುಮೆ ಸಂಸ್ಥೆ ವಿರುದ್ಧ ತನಿಖೆಗೆ ಮುಂದಾದ ಬಿಬಿಎಂಪಿ