ಹುಬ್ಬಳ್ಳಿ : ಆರೋಗ್ಯ ಕ್ಷೇತ್ರಕ್ಕೆ ಮುಂದಿನ ಬಜೆಟ್ ನಲ್ಲಿ 10 ಸಾವಿರ ಕೋಟಿ ಅನುದಾನ ಮೀಸಲು ಇಡಲಾಗುವುದು ಎಂದು ಸಿಎಂ ಬೊಮ್ಮಾಯಿ ಘೋಷಿಸಿದರು.
ಇಂದು ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಬೊಮ್ಮಾಯಿ ಆರೋಗ್ಯ ಕ್ಷೇತ್ರಕ್ಕೆ ಮುಂದಿನ ಬಜೆಟ್ ನಲ್ಲಿ 10 ಸಾವಿರ ಕೋಟಿ ಅನುದಾನ ಮೀಸಲು ಇಡಲಾಗುತ್ತದೆ. ಆರೋಗ್ಯ ಕ್ಷೇತ್ರಕ್ಕೆ ಸರ್ಕಾರ ಹೆಚ್ಚಿನ ಮಹತ್ವ ನೀಡಲಾಗುತ್ತದೆ. 60 ವರ್ಷ ಮೇಲ್ಪಟ್ಟವರಿಗೆ ಉಚಿತ ಕಣ್ಣಿನ ಚಿಕಿತ್ಸೆ ನೀಡಲಾಗುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ನಮ್ಮ್ ಕ್ಲಿನಿಕ್ ಗಳನ್ನಮೇಲ್ದರ್ಜೆಗೇರಿಸಲು ಅನುದಾನ
ನಮ್ಮ್ ಕ್ಲಿನಿಕ್ ಗಳನ್ನಮೇಲ್ದರ್ಜೆಗೇರಿಸಲು ಮುಂದಿನ ಬಜೆಟ್ ನಲ್ಲಿ ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು., ಹಿಂದೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಡಿಸ್ಪೆನ್ಸರಿಗಳಿದ್ದವು. ವೈದ್ಯರು ನೆಗಡಿ, ಜ್ವರ ಇತ್ಯಾದಿ ಸಣ್ಣಪುಟ್ಟ ಪರೀಕ್ಷೆ ಮಾಡಿ ಚಿಕಿತ್ಸೆ ನೀಡುತ್ತಿದ್ದರು. ಬಡವರಿಗೆ ಪ್ರಾಥಮಿಕವಾಗಿ ಚಿಕಿತ್ಸೆ ನೀಡುವ ದೃಷ್ಟಿಯಿಂದ ನಮ್ಮ ಕ್ಲಿನಿಕ್ ಸ್ಥಾಪಿಸಲಾಗುತ್ತಿದೆ. 437 ಇಡೀ ರಾಜ್ಯ ದಲ್ಲಿ ಸ್ಥಾಪನೆಯಾಗುತ್ತಿದೆ. ಪ್ರಥಮ ಹಂತದಲ್ಲಿ ನೂರು ಕ್ಲಿನಿಕ್ ಗಳು ಪ್ರಾರಂಭವಾಗುತ್ತದೆ. ನಮ್ಮ ಕ್ಲಿನಿಕ್ ಗಳ ಕಾರ್ಯವೈಖರಿ ನೋಡಿಕೊಂಡು ತಪಾಸಣೆ ಮಾಡಿ ಔಷಧ ನೀಡುವುದಲ್ಲದೆ, ರಕ್ತ ಪರೀಕ್ಷೆ ಮುಂತಾದ ಪೂರ್ವಭಾವಿ ಪರೀಕ್ಷೆಗಳನ್ನು ಕೈಗೊಳ್ಳಲು ವ್ಯವಸ್ಥೆ ಕಲ್ಪಿಸಲಾಗುವುದು. ಟೆಲಿ ಮೆಡಿಸಿನ್ ವ್ಯವಸ್ಥೆಯನ್ನೂ ಇದಕ್ಕೇ ಜೋಡಿಸಲಾಗುವುದು ಎಂದರು.
BREAKING NEWS : ಕಾಂಗ್ರೆಸ್ ಶಾಸಕ ‘ಅನಿಲ್ ಚಿಕ್ಕಮಾದು’ ಸಹೋದರಿ ರಂಜಿತಾ ‘ಜೆಡಿಎಸ್’ ಸೇರ್ಪಡೆ..!
ಶಿವಮೊಗ್ಗ: ಶಂಕರಘಟ್ಟದಲ್ಲಿನ ಸ್ನಾತಕೋತ್ತರ ಬಾಲಕಿಯರ ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ