ಬೆಂಗಳೂರು : ರಾಜ್ಯದಲ್ಲಿ ಮತ್ತೆ ಕಮಿಷನ್ ಆರೋಪ ಜೋರಾಗಿದ್ದು, ಶಾಸಕರು, ಸಚಿವರು ಸೇರಿದಂತೆ ಪ್ರತಿಯೊಬ್ಬರಿಗೆ 10% ಕೊಡಬೇಕು ಎಂದು ಗುತ್ತಿದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮಾಧ್ಯಮಗಳ ಮುಂದೆ ಸ್ವಷ್ಟನೆ ನೀಡಿದ್ದಾರೆ.
Vasthu Tips: ಎಷ್ಟೇ ದುಡಿದರೂ ಹಣ ಕೈಯಲ್ಲಿ ಉಳಿಯುತ್ತಿಲ್ಲವೇ? ಈ ವಾಸ್ತು ಸಲಹೆಗಳನ್ನು ಅನುಸರಿಸಿ
ಸಭೆ ನಡೆದ ಬಳಿಕ ಗುತ್ತಿದಾರ ಸಂಘದ ಅಧ್ಯಕ್ಷ ಕೆಂಪಣ್ಣ ಮಾಧ್ಯಮಗೊಂದಿಗೆ ಮಾತನಾಡಿ ನಾವು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಈ ಪ್ರಕರಣ ಸಂಬಂಧ ಯಾವ್ದೆ ದಾಖಲೆಗಳನ್ನು ಕೊಟ್ಟಿಲ್ಲ. ಕಮಿಷನ್ ಬಗ್ಗೆ ʻನ್ಯಾಯಾಂಗ ತನಿಖೆ ಮಾಡುತ್ತಾರೆ ಎಂದರೆ ನಾವು ದಾಖಲೆ ಸಮೇತ ನೀಡುತ್ತೇವೆ ಇತ್ತಿಚೇಗೆ ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವನ್ನಪ್ಪಿದ್ದರು ಸರ್ಕಾರ ಈ ಬಗ್ಗೆ ಯಾವುದೆ ಕ್ರಮ ಕೈಗೊಂಡಿಲ್ಲ ಎಂದು ಗುತ್ತಿದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಕಿಡಿ ಕಾಡಿದ್ದಾರೆ .
Vasthu Tips: ಎಷ್ಟೇ ದುಡಿದರೂ ಹಣ ಕೈಯಲ್ಲಿ ಉಳಿಯುತ್ತಿಲ್ಲವೇ? ಈ ವಾಸ್ತು ಸಲಹೆಗಳನ್ನು ಅನುಸರಿಸಿ
ಕಳೆದ 1 ವರ್ಷದಿಂದ ಹೋರಾಟ ಮಾಡ್ತಿದ್ದೇವೆ. ಗುತ್ತಿಗೆದಾರರಿಗೆ ಹಣ ಬಿಡುಗಡೆ ಆಗಬೇಕೆಂದ್ರೆ ಶಾಸಕರು , ಸಚಿವರಿಗೆ 10% ಕಮಿಷನ್ ಪಡೆಯುತ್ತಿದ್ದಾರೆ. ಸಿಎಂ ಬೊಮ್ಮಾಯಿ ಮಾತಿಗೂ ಬೆಲೆ ಇಲ್ಲದಂತಾಗಿದೆ. ಇನ್ನೂ15 ದಿನಗಳಲ್ಲಿ ಪ್ರಧಾನಿ ಮೋದಿ ಅವರಿಗೆ ಮತ್ತೊಂದು ಪತ್ರ ಬರೆಯುತ್ತೇವೆ ಎಂದು ಕೆಂಪಣ್ಣ ಕಿಡಿಕಾರಿದ್ದಾರೆ.
Vasthu Tips: ಎಷ್ಟೇ ದುಡಿದರೂ ಹಣ ಕೈಯಲ್ಲಿ ಉಳಿಯುತ್ತಿಲ್ಲವೇ? ಈ ವಾಸ್ತು ಸಲಹೆಗಳನ್ನು ಅನುಸರಿಸಿ
ಮಾನಮರ್ಯಾದೆ ಇಲ್ಲದೆ ಜನ ಪ್ರತಿನಿಧಿಗಳು. ನ್ಯಾಯಾಂಗ ತನಿಖೆ ಮಾಡಿದ್ರೆ ದಾಖಲೆ ಕೊಡುತ್ತೇವೆ ದಾಖಲೆ ಕೊಟ್ಟರೆ ಗುತ್ತಿಗೆದಾರರಿಗೆ ತೊಂದರೆ ಆಗೊ ಭಯವಿದೆ. ಸಿದ್ದರಾಮಯ್ಯಗೆ ಎಲ್ಲಾ ಮಾಹಿತಿ ನೀಡಿದ್ದೇವೆ. ಸದನದಲ್ಲಿ ಪ್ರಸ್ತಾಪಿಸುವಂತೆ ಮನವಿ ಮಾಡಿದ್ದೇವೆ. ಈ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡುವುದಾಗಿ ಹೇಳಿದ್ದಾರೆಂದು ಕೆಂಪಣ್ಣ ಮಾಧ್ಯಮಗಳಿಗೆ ಬಹಿರಂಗವಾಗಿ ಮಾಹಿತಿ ನೀಡಿದ್ದಾರೆ.
Vasthu Tips: ಎಷ್ಟೇ ದುಡಿದರೂ ಹಣ ಕೈಯಲ್ಲಿ ಉಳಿಯುತ್ತಿಲ್ಲವೇ? ಈ ವಾಸ್ತು ಸಲಹೆಗಳನ್ನು ಅನುಸರಿಸಿ
ಎಲ್ಲಾ ಎಂಎಲ್ಎ ಸಚಿವರೂ ಭ್ರಷ್ಟಾಚಾರದಲ್ಲಿ ನಂಬರ್ ಒನ್ ಆಗಿದ್ದಾರೆ ಯಾರಿಗೂ ರ್ಯಾಂಕಿಂಗ್ ಕೋಡದಕ್ಕೆ ಆಗೋದಿಲ್ಲ. ಸಿಎಂ ಬೊಮ್ಮಾಯಿ ಒಳ್ಳೆಯ ವ್ಯಕ್ತಿ. ಅವರು ಸೂಚನೆ ನೀಡಿದ್ರೂ ಗುತ್ತಿಗೆದಾರರ ಹಣ ಬಿಡುಗಡೆ ಮಾಡುತ್ತಿಲ್ಲ . ಬೊಮ್ಮಾಯಿ ಅಸಹಾಯ ಸ್ಥಿತಿಯಲ್ಲಿದ್ದಾರೆ. ಸಿಎಂ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ ಎಂದು ಕೆಂಪಣ್ಣ ಕಿಡಿಕಾರಿದ್ದಾರೆ