ಮೈಸೂರು : ಜಮ್ಮು ಕಾಶ್ಮೀರದ ಅನಂತ್ ನಾಗ್ ನಲ್ಲಿ ನಿನ್ನೆ ಉಗ್ರರು ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದು ಇದರಲ್ಲಿ 30ಕ್ಕೂ ಹೆಚ್ಚು ಪ್ರವಾಸಿಗರು ಸಾವನ್ನಪ್ಪಿದ್ದು, ಅವರಲ್ಲಿ ಇಬ್ಬರು ಕರ್ನಾಟಕದವರು ಸೇರಿದ್ದಾರೆ. ಇದೀಗ ಮೈಸೂರು ಜಿಲ್ಲೆಯ ಮೂಲದ ಹತ್ತು ಜನ ಪ್ರವಾಸಿಗರು ಶ್ರೀನಗರದಲ್ಲಿ ಸುರಕ್ಷಿತವಾಗಿ ಇದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಹೌದು ಮೈಸೂರಿನಿಂದ ಪ್ರವಾಸಕ್ಕೆ ತೆರಳಿದ 10 ಜನರು ಶ್ರೀನಗರದಲ್ಲಿ ಸೇಫ್ ಆಗಿದ್ದಾರೆ. ದೆಹಲಿ ಹಾಗೂ ಕಾಶ್ಮೀರ ಪ್ರವಾಸಕ್ಕೆ ಮೈಸೂರಿನ 10 ಜನರು ತೆರಳಿದ್ದರು. ಏಪ್ರಿಲ್ 28 ರಂದು ಮೈಸೂರು ಪ್ರವಾಸಿಗರು ಕರ್ನಾಟಕಕ್ಕೆ ವಾಪಸ್ ಬರಬೇಕಿತ್ತು, ಆದರೆ ಕಾಶ್ಮೀರದಲ್ಲಿ ಉಗ್ರರಿಂದ ದಾಳಿ ಹಿನ್ನೆಲೆಯಲ್ಲಿ ಪ್ರವಾಸವನ್ನು ಮೊಟಕು ಗೊಳಿಸಿದ್ದರು.ಇದೀಗ ಶ್ರೀನಗರದ ಹೋಟೆಲ್ ಒಂದರಲ್ಲಿ ಪ್ರವಾಸಿಗರು ಉಳಿದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈಗಾಗಲೇ ಸಚಿವ ಸಂತೋಷ್ ಲಾಡ್ ಮೈಸೂರು ಮೂಲದ 10 ಜನ ಪ್ರವಾಸಿಗರನ್ನು ಭೇಟಿಯಾಗಿದ್ದಾರೆ ಎಂದು ತಿಳಿದು ಬಂದಿದೆ.