ಬಾಗಲಕೋಟೆ: ನಮ್ಮ ಕಾಂಗ್ರೆಸ್ ಪಕ್ಷ ( Congress Party ) ಮುಂಬರುವಂತ ಚುನಾವಣೆಯಲ್ಲಿ ಬಹುಮತದಿಂದ ಗೆದ್ದು, ಅಧಿಕಾರಕ್ಕೆ ಬಂದರೇ 7 ಕೆಜಿ ಅಲ್ಲ, 10 ಕೆಜಿ ಅಕ್ಕಿಯನ್ನು ಉಚಿತವಾಗಿ ಕೊಡುತ್ತೇವೆ ಎಂಬುದಾಗಿ ವಿಪಕ್ಷ ನಾಯಕ ಸಿದ್ಧರಾಮಯ್ಯ ( Siddaramaiah ) ಘೋಷಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಬೆಳಗಲ್ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಸ್ವಾತಂತ್ರ್ಯ ಬಂದಾಗ ನಮಗೆ ಆಹಾರ ಸ್ವಾಲಂಬನೆ ಇರಲಿಲ್ಲ. ಆಹಾರ ಸ್ವಾಲಂಬನೆ ಮಾಡಿದ್ದು ಇಂದಿರಾ ಗಾಂದಿಯವರ ನೇತೃತ್ವದ ಸರ್ಕಾರ ಎಂದು ಹೇಳಿದರು.
ನಾನು ಸಿಎಂ ಆದಮೇಲೆ ಉಚಿತವಾಗಿ ತಲಾ 7 ಕೆಜಿ ಅಕ್ಕಿ ಕೊಟ್ಟೆ. ಹಸಿವು ಮುಕ್ತ ರಾಜ್ಯವಾಗಲೇ ಬೇಕು ಎಂಬ ಹಿನ್ನಲೆಯಲ್ಲಿ 7 ಕೆಜಿ ಅಕ್ಕಿ ನೀಡಲಾಯಿತು. ಆದ್ರೇ ಅದನ್ನೇ ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತೆ. ಪುಕ್ಕಟ್ಟೆ ಪ್ರಚಾರವನ್ನು ಪಡೆದರು ಅಂದರು ಅಂತ ಹೇಳಿದರು.
ಕೇಂದ್ರ ಸರ್ಕಾರ ಅಕ್ಕಿ ಕೊಟ್ಟಿದ್ದರೇ ಗುಜರಾತ್ ಸೇರಿದಂತೆ ಬಿಜೆಪಿ ಆಡಳಿತವಿರುವಂತ ರಾಜ್ಯಗಳಲ್ಲಿ ಉಚಿತವಾಗಿ ಏಕೆ ಕೊಡುತ್ತಿಲ್ಲ? ಹಸಿವು ಮುಕ್ತ ರಾಜ್ಯವನ್ನಾಗಿ ಏಕೆ ಮಾಡಲಿಲ್ಲ ಎಂಬುದಾಗಿ ಪ್ರಶ್ನಿಸಿದರು. ಬಡವರು, ರೈತರು, ಕಾರ್ಮಿಕರಿಗಾಗಿ ಇಂದಿರಾ ಕ್ಯಾಂಟೀನ್ ತೆರೆಯಲಾಯಿತು. ಆದ್ರೇ ಬೊಮ್ಮಾಯಿ ಅವರೇಕೆ ಇಂದಿರಾ ಕ್ಯಾಂಟೀನ್ ಬಂದ್ ಮಾಡಿದ್ರು ಎಂದು ಪ್ರಶ್ನಿಸಿದರು.
ನಮ್ಮ ಪಕ್ಷ ಅಧಿಕಾರಕ್ಕೆ ಬಂದರೇ 7 ಕೆಜಿ ಅಲ್ಲ, 10 ಕೆಜಿ ಅಕ್ಕಿಯನ್ನು ಉಚಿತವಾಗಿ ಕೊಡುತ್ತೇವೆ ಎಂಬುದಾಗಿ ಇದೇ ಸಂದರ್ಭದಲ್ಲಿ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ಧರಾಮಯ್ಯ ಘೋಷಣೆ ಮಾಡಿದರು.