ಬೆಂಗಳೂರು: ಇಂದಿನಿಂದ 10 ದಿನಗಳ ಕಾಲ ರಾಜ್ಯ ವಿಧಾನ ಮಂಡಲ ಅಧಿವೇಶನ ಶುರುವಾಗಲಿದೆ. ಬೆಳಗ್ಗೆ 11 ಗಂಟೆಗೆ ಅಧೀವೇಶನ ಶುರುವಾಗಲಿದ್ದು, ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಗಿದೆ.
BIGG NEWS: ಬಾರ್ ನಲ್ಲಿ ಬಾಟಲ್ ನಿಂದ ಹೊಡೆದಾಟ; ಕುಡಿಯಲು ಬಂದವರಿಂದಲೇ ಝಳಪಿಸಿದ ಲಾಂಗ್ – ಮಚ್ಚು
ಆಡಳಿತ ಮತ್ತು ಪ್ರತಿಪಕ್ಷಗಳ ಮಧ್ಯೆ ವಾಕ್ಸಮರದ ಬಿಸಿ ಹೆಚ್ಚಿಸಲಿದೆ. ಸರ್ಕಾರದ ಇದು ವಿಧಾನಸಭೆಯ ಕೊನೆಯ ಮಳೆಗಾಲದ ಅಧಿವೇಶನವಾಗಿದೆ. ಬಳಿಕ ಚಳಿಗಾಲ ಅಧಿವೇಶನ, ಹಾಗೂ ಬಜೆಟ್ ಅಧಿವೇಶನ ಮೂಲಕ 15ನೇ ವಿಧಾನಸಭೆ ಅಂತ್ಯವಾಗಲಿದೆ. ಹೀಗಾಗಿ ಈ ಮಳೆಗಾಲ ಅಧಿವೇಶನ ಮೂರು ಪಕ್ಷಗಳಿಗೂ ತುಂಬಾ ಮಹತ್ವದ್ದಾಗಿದೆ. ಇಂದಿನ ಕಲಾಪ ಆರಂಭದಲ್ಲೇ ಸರ್ಕಾರ ವಿರುದ್ಧ ಕಾಂಗ್ರೆಸ್ ಬತ್ತಳಿಕೆಯಲ್ಲಿ ಬ್ರಹ್ಮಾಸ್ತ್ರಗಳನ್ನೇ ಹಿಡಿದು ಕುಳಿತುಕೊಳ್ಳುವ ಸಾಧ್ಯತೆ ಇದೆ.
ಇನ್ನು ಮಂಗಳವಾರ ಸಂಜೆ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಲಿದೆ. ಈ ವೇಳೆ ಸರ್ಕಾರದ ವಿರುದ್ಧ ಹೋರಾಟದ ರೂಪರೇಷೆ ಹೆಣೆಯುವ ಕಾರ್ಯ ಆಗಲಿದೆ . ಮಂಗಳವಾರ ಬೆಳಗ್ಗೆಯೇ ಹೋರಾಟದ ಪ್ರಮುಖ ಅಸ್ತ್ರವೊಂದನ್ನು ಪ್ರಯೋಗಿಸಲು ಕಾಂಗ್ರೆಸ್ ತೀರ್ಮಾನಿಸಿದೆ.