ಹಾಸನ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮಗಳನ್ನು ತಡೆಗಟ್ಟಲು ಪೊಲೀಸ್ ಅಧಿಕಾರಿಗಳು ಹಾಗೂ ಚುನಾವಣಾ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದ್ದು, ಅಲ್ಲದೆ ನೀತಿ ಸಂಹಿತೆ ಜಾರಿ ಆಗಿರುವುದರಿಂದ ಅಕ್ರಮ ತಡೆಗಟ್ಟಲು ಪಾಲಿಸಲಾಗುತ್ತಿದೆ. ಹಾಗಾಗಿ ಇಂದು ಹಾಸನದಲ್ಲಿ ಅಬಕಾರಿ ಅಧಿಕಾರಿಗಳಿಂದ ಒಂಬತ್ತು ಕೋಟಿ ಮೌಲ್ಯದ ಬಿಯರ್ ಅನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ಹಾಸನದಲ್ಲಿ ವುಡ್ ಪೆಕರ ಡಿಸ್ಟಲರಿಸ್ ಅಂಡ್ ಬ್ರೇವರೀಸ್ ಫ್ಯಾಕ್ಟರಿ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳಿಂದ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ. ದಾಸ್ತಾನಿನಲ್ಲಿ ನ್ಯೂನ್ಯತೆ ಕಂಡುಬಂದ ಹಿನ್ನೆಲೆಯಲ್ಲಿ 9 ಕೋಟಿ ರೂ. ಮೌಲ್ಯದ ಬಿ ಆರ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಪವರ್ ಕೂಲ್, ಲೆಜೆಂಡ್, ವುಡ್ ಪೆಕರ ಸೇರಿದಂತೆ ಇತರೆ ಮಧ್ಯದ ಬ್ರಾಂಡ್ಗಳನ್ನು ವಶಪಡಿಸಿಕೊಳ್ಳಲಾಗಿದೆ.ಒಟ್ಟು 56,736 ಬಾಕ್ಸ್ ಗಳಲ್ಲಿದ್ದ 5 ಕೋಟಿ 63 ಲಕ್ಷ 756 ಬಿಯರ್ ಬಾಟಲ್ ಸೇರಿದಂತೆ 9 ಕೋಟಿ 54 ಲಕ್ಷ 8,400 ರೂಪಾಯಿ ಮೌಲ್ಯದ ಬಿಯರ್ ಯನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಇದೀಗ ವುಡ್ ಪೆಕರ್ ಡಿಸ್ಟಲರಿಸ್ ಸನ್ನದುದಾರರ ವಿರುದ್ಧ ಪ್ರಕರಣ ದಾಖಲಾಗಿದೆ.