ಹಳೆ ವಾಹನ ಗುಜರಿಗೆ ಹಾಕಿ ಹೊಸ ವಾಹನ ಖರೀದಿ ಮಾಡುವವರಿಗೆ ರಸ್ತೆ ತೆರಿಗೆ ವಿನಾಯಿತಿ ನೀಡುವ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸಲು ರಾಜ್ಯರಸ್ತೆ ಪ್ರಾಧಿಕಾರ ತೀರ್ಮಾನ ಕೈಗೊಂಡಿದೆ. ವಾಹನ ಮಾಲೀಕರಿಗೆ ವಾಹನದ ಮೌಲ್ಯದ ಆಧಾರದಲ್ಲಿ ನೇರವಾಗಿ ತೆರಿಗೆ ವಿನಾಯಿತಿ ಕಲ್ಪಿಸಲು ಸರ್ಕಾರಕ್ಕೆ ಕ್ರಮ ಕೈಗೊಳ್ಳಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಕ್ಕೆ ಸರಕಾರ ಗ್ರೀನ್ ಸಿಗ್ನಲ್ ನೀಡಲಾಗಿದೆ.
ಹೊಸ ದ್ವಿಚಕ್ಕ ವಾಹನ ಖರೀದಿ ಮೇಲೆ ಒಂದು ಸಾವಿರದಿಂದ 5000 ರೂ.ವರೆಗೆ, ನಾಲ್ಕು ಚಕ್ರದ ವಾಹನಗಳ ಖರೀದಿ ಮೇಲೆ 10,000 ದಿಂದ 40,000 ರೂ.ವರೆಗೆ ತೆರಿಗೆ ವಿನಾಯಿತಿ ನೀಡಲು ಮನವಿ ಮಾಡಲಾಗಿದ್ದು, ಈ ಪ್ರಸ್ತಾವನೆಗೆ ಸಮ್ಮತಿ ಸೂಚಿಸಿದೆ. ದಾಖಲೆ ಪತ್ರಗಳಿಲ್ಲದ ಹಿನ್ನೆಲೆ ತೆರಿಗೆ ವಿನಾಯಿತಿ ಸೌಲಭ್ಯ ಪಡೆಯಲು ಮಾಲೀಕರು ವಂಚಿತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಸ್ತೆ ಸಾರಿಗೆ ಪ್ರಾಧಿಕಾರ ಹಳೆಯ ವಾಹನಗಳ ತೆರಿಗೆ ಪಾವತಿ ದಾಖಲೆಪತ್ರ ಲಭ್ಯವಿಲ್ಲದಿದ್ದರೂ ಹೊಸ ವಾಹನಗಳ ಖರೀದಿ ಮೌಲ್ಯದ ಆಧಾರದಲ್ಲಿ ವಾಹನ ಮಾಲೀಕರಿಗೆ ನೇರವಾಗಿ ರಸ್ತೆ ತೆರಿಗೆ ವಿನಾಯಿತಿ ಕಲ್ಪಿಸಲು ಸರ್ಕಾರ ಪ್ರಸ್ತಾವನೆ ಸಲ್ಲಿಕೆ ಮಾಡಿದೆ. ಹಳೆ ವಾಹನಗಳನ್ನು ನೋಂದಾಯಿತ ವಾಹನಗಳ ಗುಜರಿಕೇಂದ್ರಗಳಲ್ಲಿ ಗುಜರಿಗೆ ಹಾಕಿದ ಬಳಿಕ ಮಾಲೀಕರು ಶೋರೂಮ್ ಗಳಿಗೆ ಸಿಓಡಿ ಸಲ್ಲಿಸಿ ಹೊಸ ವಾಹನ ಖರೀದಿ ಮಾಡಿದಾಗ ವಾಹನ ಮೌಲ್ಯದ ಮೇಲೆ ನೇರವಾಗಿ ತೆರಿಗೆ ವಿನಾಯಿತಿ ಪಡೆದುಕೊಳ್ಳಬಹುದು. ಹಳೆಯ ವಾಹನಗಳ ತೆರಿಗೆ ಪಾವತಿ ದಾಖಲೆ ಪತ್ರಗಳು ಅನೇಕ ಮಾಲೀಕರ ಬಳಿ ಇರದ ಹಿನ್ನಲೆ ವಾಹನಗಳನ್ನು ಗುಜರಿಗೆ ಹಾಕುವವರಿಗೆ ತೆರಿಗೆ ವಿನಾಯಿತಿ ನೀಡಲು ತೀರ್ಮಾನ ಕೈಗೊಳ್ಳಲಾಗಿದ್ದು, ಈ ಪ್ರಸ್ತಾವನೆಗೆ ಸರ್ಕಾರ ಒಪ್ಪಿಗೆ ಸೂಚಿಸಿದೆಯಾಗಿದೆ.