ಬೆಂಗಳೂರು : ಇಂದು ಚುನಾವಣೆ ಪ್ರಚಾರದ ವೇಳೆ ಗನ್ ಇಟ್ಟುಕೊಂಡಿದ್ದ ಅಪರಿಚಿತ ವ್ಯಕ್ತಿಯೊಬ್ಬ ಸಿಎಂ ಸಿದ್ದರಾಮಯ್ಯಗೆ ಹಾರ ಹಾಕಿರುವ ಘಟನೆ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸೌಮ್ಯ ರೆಡ್ಡಿ ಪರ ಪ್ರಚಾರ ವೇಳೆ ಈ ಘಟನೆ ನಡೆದಿದೆ. ಆದರೆ ಹಾರ ಹಾಕಿರುವ ವ್ಯಕ್ತಿಯ ಕುರಿತು ಇದೀಗ ಪೊಲೀಸರು ಪ್ರಾಥಮಿಕ ಮಾಹಿತಿ ಕಲೆಹಾಕಿದ್ದಾರೆ.
ಹಾರ ಹಾಕಿರುವ ವ್ಯಕ್ತಿಯ ಹೆಸರು ರಿಯಾಜ್ ಎಂದು ಹೇಳಲಾಗುತ್ತಿದ್ದು ಈತನ ಮೇಲೆ ಕಳೆದ ಐದು ವರ್ಷಗಳ ಹಿಂದೆ ಮರ್ಡರ್ ಟು ಅಟೆಂಪ್ಟ್ ನಡೆದಿತ್ತು. ಹಾಗಾಗಿ ಈತ ತನಗೆ ಜೀವ ಭಯವಿದೆ ಎಂದು ಪೊಲೀಸ್ ಇಲಾಖೆಗೆ ಅರ್ಜಿ ಹಾಕಿ ಗನ್ ಲೈಸೆನ್ಸ್ ಅನ್ನು ಪಡೆದುಕೊಂಡಿದ್ದ ಎಂದು ಹೇಳಲಾಗುತ್ತಿದೆ ಅಲ್ಲದೆ ಈತ ಸಿದ್ದಾಪುರ ವಿಧಾನಸಭಾ ಕ್ಷೇತ್ರದ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತನು ಕೂಡ ಎಂದು ಹೇಳಲಾಗುತ್ತಿದೆ.ಹೀಗಾಗಿ ಇಂದು ಸಿಎಂ ಸಿದ್ದರಾಮಯ್ಯ ಅವರಿಗೆ ಹಾರ ಹಾಕಿ ಅಲ್ಲಿಂದ ತೆರಳಿದ್ದ.
ಚುನಾವಣೆ ವೇಳೆ ಗನ್ ಸಿಲಿಂಡರ್ ಮಾಡಿದರೂ ಅನುಮತಿ ಪಡೆದಿದ್ದ ಪೊಲೀಸ ಇಲಾಖೆಗೆ ಅರ್ಜಿ ಹಾಕಿ ರಿಯಾಜ್ ಅನ್ನುವ ವ್ಯಕ್ತಿ ಅನುಮತಿ ಪಡೆದಿದ್ದ ಎನ್ನಲಾಗುತ್ತಿದೆ ನನಗೆ ಜೀವ ಭಯವಿದೆ ಎಂದು ಅರ್ಜಿ ನೀಡಿ ಗನ್ ಸೆರೆಂಡರ್ ಮಾಡಿರಲಿಲ್ಲ. ಆದರೆ ಸಿಎಂ ಬಳಿ ಹೋಗುವಾಗ ಗನ್ ತೆಗೆದುಕೊಂಡು ಹೋಗಬಾರದಿತ್ತು.
ಝೆಡ್ ಸೆಕ್ಯೂರಿಟಿ ಭದ್ರತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ರಿಯಾಜ್ ಎನ್ನುವತಿ ಗನ್ ತೆಗೆದುಕೊಂಡು ಹೋಗಬಾರದಿತ್ತು ಆದರೆ ಅದನ್ನು ತಪಾಸಣೆ ನಡೆಸಿ ಬಿಡಬೇಕಿತ್ತು ಸಾರ್ವಜನಿಕ ಸ್ಥಳದಲ್ಲಿ ರಿಯಾಜ್ ಗನ್ ಪ್ರದರ್ಶನ ಮಾಡಿದ್ದಾನೆ. ಹೀಗಾಗಿ ಪೊಲೀಸರು ರಿಯಾಜ್ ಇಂದ ಗನ್ ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ರಿಯಾಜ್ ಸೊಂಟದಲ್ಲಿ ಗನ್ ಇಟ್ಟುಕೊಂಡು ಬಂದು ಕ್ಯಾಂಟರ್ ಏರಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹಾರ ಹಾಕಿದ್ದಾನೆ. ಸಿಎಂ ಸಿದ್ದರಾಮಯ್ಯಗೆ ಹಾರ ಹಾಕಿ ನಂತರ ಅಪರಿಚಿತ ವ್ಯಕ್ತಿ ಅಲ್ಲಿಂದ ತೆರಳಿದ್ದಾನೆ ಎಂದು ಹೇಳಲಾಗುತ್ತಿದೆ. ಆತನ ಬಳಿ ಲೈಸೆನ್ಚ್ ಇತ್ತ? ಸಿಎಂ ಗೆ ಹಾರ ಹಾಕಿದ ವ್ಯಕ್ತಿ ಯಾರು? ಎನ್ನುವ ಪ್ರಶ್ನೆಗಳಿಗೆ ಇದೀಗ ಪ್ರಾಥಮಿಕ ಮಾಹಿತಿಯ ಮೂಲಕ ಉತ್ತರ ದೊರಕಿದೆ.