ಬೆಂಗಳೂರು : ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳು ಫುಲ್ ಆಕ್ಟಿವ್ ಆಗಿವೆ. ಹಿರಿ ಸಂದರ್ಭದಲ್ಲಿ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಪಕ್ಷಾಂತರವಾಗುವುದು ಸಹಜ ಅದೇ ರೀತಿಯಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರಿಗೆ ಆಹ್ವಾನ ನೀಡಿದ್ದಾರೆ.
ಉದ್ಯೋಗವಾರ್ತೆ: ‘ಅಂಚೆ ಇಲಾಖೆ’ಯಿಂದ 98083 ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಸಂಪೂರ್ಣ ಮಾಹಿತಿ!
ಈ ಕುರಿತಂತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಬಿಜೆಪಿ ಜೆಡಿಎಸ್ ಯಾವ ಪಕ್ಷದಿಂದ ಆದರೂ ಬರಬಹುದು.ಬೇರೆ ಬೇರೆ ಪಾರ್ಟಿಯಿಂದ ನಮ್ಮ ಪಕ್ಷದ ಸಿದ್ಧಾಂತವನ್ನು ಒಪ್ಪಿ ಬರುವ ಸೇರಿಸಿಕೊಳ್ಳುವ ಕಾರ್ಯಕ್ರಮವಾಗಿದೆ. ಯಾರು ಬೇಕಾದರೂ ಬರಬಹುದು. ಸಮಯ ವ್ಯರ್ಥ ಮಾಡಬೇಡಿ ಎಂದು ಕರೆ ನೀಡಿದ್ದಾರೆ.
ರಾಮ ಮಂದಿರಕ್ಕೆ ತಿಂಗಳಲ್ಲಿ 25 ಕೋಟಿ ದೇಣಿಗೆ : ‘ಅಯೋಧ್ಯೆ ಟ್ರಸ್ಟ್’ | Ram Mandir
ಈಗಲೇ ಸೇರಿಕೊಳ್ಳಿ ನನಗೆ 61 ವರ್ಷ ಇನ್ನೊಂದು 9 ವರ್ಷವಾದರೆ 70 ವರ್ಷ ಮುಗಿಯುತ್ತೆ, ಆದ್ದರಿಂದ ಯುವ ಕಾರ್ಯಕರ್ತರು ಈಗಲೇ ಪಕ್ಷಕ್ಕೆ ಸೇರಿಕೊಂಡರೆ ಮುಂದಿನ 50 ವರ್ಷಗಳ ಕಾಲ ಪಕ್ಷದಲ್ಲಿ ಕಾರ್ಯನಿರ್ವಹಿಸಬಹುದು.70 ವರ್ಷಕ್ಕೂ 50 ವರ್ಷಕ್ಕೂ ಬಹಳ ವ್ಯತ್ಯಾಸವಿದೆ. ಈ ಮೂಲಕ ಎಲ್ಲ ಪಕ್ಷದ ಕಾರ್ಯಕರ್ತರಿಗೆ ನಾನು ಕರೆ ಕೊಡುತ್ತಿದ್ದೇನೆ ಎಂದು ಬಹಿರಂಗವಾಗಿ ಅಹ್ವಾನ ನೀಡಿದ್ದಾರೆ.
BREAKING : ಬೆಂಗಳೂರಲ್ಲಿ ಮಹಿಳೆಯ ಮುಂದೆ ಪ್ಯಾಂಟ್ ಬಿಚ್ಚಿ ಅಸಭ್ಯ ವರ್ತನೆ : ಅಪ್ರಾಪ್ತ ಬಾಲಕರು ಸೇರಿ ಐವರ ಬಂಧನ