ಚಿತ್ರದುರ್ಗ : ಕೈಮಗ್ಗ ಮತ್ತು ಜವಳಿ ಇಲಾಖೆಯು ಕೈಮಗ್ಗ ಮತ್ತು ವಿದ್ಯುತ್ ಮಗ್ಗ ನೇಕಾರರುಗಳಿಗೆ ಹಾಗೂ ಕೈಮಗ್ಗ ನೇಕಾರರಿಗೆ ಸಂಬಂಧಿಸಿದ ಇತರೆ ಚಟುವಟಿಕೆಗಳಲ್ಲಿ ತೊಡಗಿರುವ ನೇಕಾರರಿಗೆ ವಾರ್ಷಿಕ ರೂ.5000/- ಗಳನ್ನು ನೀಡಲು ನೇಕಾರರ ಸಮ್ಮಾನ್ ಯೋಜನೆಯಡಿ 2024-25ನೇ ಸಾಲಿಗೆ ಈಗಾಗಲೇ ನೊಂದಾಯಿತವಾಗಿರುವ ಅರ್ಹ ಕೈಮಗ್ಗ, ವಿದ್ಯುತ್ ಮಗ್ಗ ನೇಕಾರರಿಂದ ಹೊಸದಾಗಿ ಅರ್ಜಿ ಪಡೆದು ಅರ್ಹವಿರುವ ನೇಕಾರರ ಅರ್ಜಿಗಳನ್ನು ಸೇವಾ ಸಿಂಧು ಪೋರ್ಟಲ್ ನಲ್ಲಿ ಅಪ್‍ಲೋಡ್ ಮಾಡಲು ಕೇಂದ್ರ ಕಚೇರಿ ಪತ್ರದಲ್ಲಿ ಸೂಚಿಸಲಾಗಿದೆ.
ಅದರಂತೆ 2023-24ನೇ ಸಾಲಿನಲ್ಲಿ ಈ ಯೋಜನೆಯಡಿ ಈಗಾಗಲೇ ಸೌಲಭ್ಯ ಪಡೆದಿರುವ ಕೈಮಗ್ಗ ಮತ್ತು ವಿದ್ಯುತ್ ಮಗ್ಗ ನೇಕಾರರ ಪಟ್ಟಿಯಲ್ಲಿ ನೊಂದಾಯಿತ ಕೈಮಗ್ಗ ನೇಯ್ಗೆ, ವಿದ್ಯುತ್ ಮಗ್ಗ ನೇಯ್ಗೆ ಚಟುವಟಿಕೆಯಲ್ಲಿ ತೊಡಗಿರುವ ಅರ್ಹ ನೇಕಾರರಿಂದ, 2024ರ ಅ.20ರೊಳಗಾಗಿ ಅರ್ಜಿ ಸಲ್ಲಿಸುವಂತೆ ಪತ್ರಿಕಾ ಪ್ರಕಟಣೆ ಹೊಡಿಸಲಾಗಿತ್ತು.
ಇನ್ನೂ ಹಲವಾರು ನೇಕಾರರು ಅರ್ಜಿ ಸಲ್ಲಿಸದೇ ಇರುವುದರಿಂದ ಅರ್ಜಿ ಸಲ್ಲಿಸಲು ಇನ್ನೂ ಕಾಲಾವಕಾಶ ಅವಶ್ಯಕತೆ ಇರುವುದನ್ನು ಮನಗಂಡು ಅರ್ಜಿ ಸಲ್ಲಿಕೆ ಅವಧಿಯನ್ನು 2024ರ ನ.10ರೊಳಗಾಗಿ ಅರ್ಜಿ ಸಲ್ಲಿಸಲು ಕೋರಿದೆ.ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರ ಕಚೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಬಿ.ಡಿ.ರಸ್ತೆ, ಯುನಿಯನ್ ಪಾರ್ಕ್ ಹತ್ತಿರ, ಮಸೀದಿ ಪಕ್ಕ, ಚಿತ್ರದುರ್ಗ ಕಚೇರಿ ದೂರವಾಣಿ ಸಂಖ್ಯೆ 08194-221426ಗೆ ಸಂಪರ್ಕಿಸಬಹುದು ಎಂದು ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.