ಮನೆಯಲ್ಲಾಗಲಿ, ಸಮಾರಂಭಗಳಲ್ಲಾಗಲಿ ಅಥವಾ ಎಲ್ಲಾ ಹೋಟೆಲ್ ಗಳಲ್ಲೂ ಊಟದ ನಂತರ ಮೊಸರು-ಸಕ್ಕರೆ ಕೊಡುವುದು ಗೊತ್ತಿದೆ. ಇದೆರಡನ್ನು ಮಿಕ್ಸ್ ಮಾಡಿ ಸವಿದರೆ ಅದೆಂತ ರುಚಿ. ಆದರೆ ಕೆಲವರು ಇದನ್ನು ತಿಂದರೆ ಶೀತ ಆಗುತ್ತೆ, ಕೆಮ್ಮು ಬರುತ್ತೆ, ಗಂಟಲು ಕೆರೆಯುತ್ತೆ ಎಂದೆಲ್ಲಾ ಅಲ್ಲಗಳೆಯುತ್ತಾರೆ. ತಿನ್ನೋರಿಗೂ ಅಡ್ಡಗಾಲು ಹಾಕುತ್ತಾರೆ.
ಮೊಸರಿಗೆ ಸಕ್ಕರೆ ಸಾಕಿ ತಿನ್ನೋದ್ರಿಂದ ಏನೆಲ್ಲಾ ಲಾಭಗಳಿವೆಯೆಂದರೆ, ಶೀತ, ನೆಗಡಿ, ಕೆಮ್ಮು, ಕಫ ಕಡಿಮೆಯಾಗುತ್ತದೆ. ಅಸಿಡಿಟಿ, ಹೊಟ್ಟೆ ಉರಿ ಕಡಿಮೆಯಾಗುತ್ತದೆ. ದೇಹವನ್ನು ಸದಾ ತಂಪಾಗಿರಿಸುತ್ತದೆ. ಮೆದುಳಿನ ಹಾಗೂ ದೇಹದ ಶಕ್ತಿ ಹೆಚ್ಚಿಸುತ್ತದೆಯಾಗಿದೆ.