ಬೆಂಗಳೂರು : ಇತ್ತೀಚಿಗೆ ಹೈದ್ರಾಬಾದ್ ನಲ್ಲಿ ಮೈಸೂರು ನಕಲಿ ಸೋಪು ತಯಾರಿಕೆಯಲ್ಲಿ ಬಿಜೆಪಿ ನಾಯಕರು ಶಾಮೀಲಾಗಿದ್ದಾರೆ ಎಂದು ಗ್ರಾಮೀಣಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಗಂಭೀರವಾದಂತ ಆರೋಪ ಮಾಡಿದರು.
ಬೆಂಗಳೂರಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಈ ಒಂದು ಪ್ರಕರಣದಲ್ಲಿ ಬಿಜೆಪಿ ನಾಯಕರು ಶಾಮಿಲಾಗಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ. ಬಿಜೆಪಿಯ ನಾಯಕರು ಕೂಡ ಶಾಮೀಲು ಆಗಿದ್ದಾರೆ. ನಕಲಿ ಮಾಡುವುದರಲ್ಲಿ ಬಿಜೆಪಿ ನಾಯಕರು ಶಾಮೀಲು ಎಂದು ಆರೋಪಿಸಿದರು.
ಅಲ್ಲದೆ ಮಣಿಕಂಠ ರಾಠೋಡ್ಗೂ ತಯಾರಿಕರಿಗೂ ಏನು ನಂಟಿದೆ? ಬಿಜೆಪಿ ದುಡ್ಡು ಮಾಡಲು ಯಾವುದಕ್ಕೂ ಹೇಸುವುದಿಲ್ಲ ನಕಲಿ ಸೋಪ್ ತಯಾರಕ ಮಹಾವೀರ ಜೈನ್ ಇದ್ದಾನೆ ಮಹಾವೀರ ಜೈನ್ ಕೂಡ ಇದರಲ್ಲಿ ಭಾಗಿಯಾಗಿದ್ದಾನೆ ಎಂದು ಬೆಂಗಳೂರಿನಲ್ಲಿ ಹೆಚ್ಚು ಪ್ರಿಯಾಂಕ್ ಖರ್ಗೆ ಆರೋಪಿಸಿದರು.
ಹೈದರಾಬಾದ್ನಲ್ಲಿ ನಕಲಿ ಮೈಸೂರು ಸ್ಯಾಂಡಲ್ ಸೋಪ್ ತಯಾರಿಕಾ ಘಟಕ ಪತ್ತೆಯಾಗಿದ್ದು, 2 ಕೋಟಿ ರೂ. ಮೌಲ್ಯದ ಸಾಮಾಗ್ರಿ ವಶಕ್ಕೆ ಪಡೆಯಲಾಗಿದೆ. ಸರ್ಕಾರಿ ಸ್ವಾಮ್ಯದ ಮೈಸೂರು ಸ್ಯಾಂಡಲ್ ಸೋಪ್ ನಕಲಿ ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲ. ನಕಲಿ ಉತ್ಪನ್ನ, ಪ್ಯಾಕಿಂಗ್ಗೆ ಬಳಸುತ್ತಿದ್ದ ಕಾರ್ಟನ್ ಬಾಕ್ಸ್ ಸೇರಿದಂತೆ ಸಾಮಾಗ್ರಿಗಳು ಪತ್ತೆಯಾಗಿವೆ. ಹೈದರಾಬಾದಿನ ರಾಕೇಶ್ ಜೈನ್ ಮತ್ತು ಮಹಾವೀರ್ ಜೈನ್ ಎಂಬುವರ ಬಂಧಿಸಲಾಗಿದ್ದು, ಮಾಲಕಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.