ಮೈಕೆಲ್ ಜಾಕ್ಸನ್ ಅವರು ಪಾಪ್ ಸಂಗೀತದಲ್ಲಿ ಕ್ರಾಂತಿಯನ್ನೇ ಮಾಡಿ ‘ಕಿಂಗ್ ಆಫ್ ಪಾಪ್’ ಎನಿಸಿಕೊಂಡಿದ್ದರು. ಜಾಕ್ಸನ್ ಅವರದೇ ಆದ ಸ್ಟೈಲ್ ಹೊಂದಿದ್ದರಂತೆ. ಅದರಲ್ಲಿಯೂ ಅವರು ಒಂದೇ ಕೈಗೆ ಗ್ಲೌಸ್ ಧರಿಸುವುದನ್ನು ಕೂಡಾ ಜನ ಸಿಗ್ನೇಚರ್ ಸ್ಟೈಲ್ ಎಂದುಕೊಂಡಿದ್ದರು.
ಮೈಕೆಲ್ ಜಾಕ್ಸನ್ ಧ್ವನಿ, ಸಂಗೀತ, ನೃತ್ಯ- ಸಾಮಾನ್ಯ ಸಂಗೀತದ ವಿಡಿಯೋಗಳನ್ನು ಚಲನಚಿತ್ರ-ಪ್ರಮಾಣದ ವೈಶಿಷ್ಟ್ಯಗಳಾಗಿ ಪರಿವರ್ತಿಸುವ ಸೃಜನಾತ್ಮಕತೆಯಿಂದ ಸಾಮಾನ್ಯ ಜನರನ್ನು ಕೂಡ ಸೆಳೆಯುವ ವಿಶೇಷ ಕಲೆಯನ್ನು ತನ್ನದಾಗಿಸಿಕೊಂಡಿದ್ದ. ಪಾಪ್ ತಾರೆಗಳ ನಡುವೆ ಮೈಕೆಲ್‌ರ ಜುಟ್ಟು, ಬಣ್ಣ, ಜೊತೆಗೆ ಒಂದೇ ಕೈಗೆ ಧರಿಸುತ್ತಿದ್ದ ಬಿಳಿಯ ಹೊಳೆಯುವ ಗ್ಲೌಸ್ ಕೂಡಾ ಅವರ ಸಿಗ್ನೇಚರ್ ಸ್ಟೈಲ್ ಆಗಿ ನೋಡುಗರ ಕಣ್ಮನ ಸೆಳೆಯುತ್ತಿತ್ತು.
ಮೈಕೆಲ್ ಧರಿಸುತ್ತಿದ್ದ ಬಿಳಿ ಗ್ಲೌಸ್ ಹಿನ್ನೆಲೆ ಗಮನಿಸಿದರೆ,1983 ರಿಂದ ಆತ ತನ್ನ ಬಲಗೈಗೆ ಬಿಳಿ ಕೈಗವಸು ಧರಿಸುತ್ತಿದ್ದರಂತೆ. ಇದಕ್ಕೆ ಕಾರಣವೇನು ಗೊತ್ತಾ??ಆತ ಹೆಚ್ಚು ಮುಜುಗರ ತರುತ್ತಿದ್ದ ಆರೋಗ್ಯ ಸಮಸ್ಯೆಯನ್ನು ಎಲ್ಲರಿಂದ ಮುಚ್ಚಿಡಲು ಹೀಗೆ ಮಾಡುತ್ತಿದ್ದನಂತೆ. 2009ರ ಜೂನ್ 25ರಂದು ಮೈಕೆಲ್ ನಿಧನರಾದ ಬಳಿಕ, ನಟಿ ಸಿಸಿಲಿ ಟೈಸನ್, ಮೈಕೆಲ್ ಕೈಗವಸು ಧರಿಸುವ ನಿರ್ಧಾರದ ಬಗ್ಗೆ ಮಾತನಾಡಿದ್ದಾರೆ. ಮೈಕೆಲ್ ಕೈಯಲಿದ್ದ ಚರ್ಮದ ಸಮಸ್ಯೆ ವಿಟಿಲಿಗೋ(ತೊನ್ನು)ವನ್ನು ಮುಚ್ಚಿಡುವುದಕ್ಕಾಗಿ ಕೈಗವಸು ಧರಿಸುತ್ತಿದ್ದರು. ಮೈಕೆಲ್‌ಗೆ ಜೀವನದುದ್ದಕ್ಕೂ ಈ ಚರ್ಮದ ಸಮಸ್ಯೆ ಕಾಡುತ್ತಿತ್ತು. ಮೈಗೆ ಬಟ್ಟೆ, ಮುಖಕ್ಕೆ ಮೇಕಪ್‌ನಿಂದ ತೊನ್ನನ್ನು ಕವರ್ ಮಾಡಿಕೊಂಡರೂ, ಕೈಲಿದ್ದ ತೊನ್ನು ಎದ್ದು ಕಾಣಿಸುತ್ತಿತ್ತು. ಹಾಗಾಗಿ ಆತ ಕೈಗೆ ಗ್ಲೌಸ್ ಧರಿಸಿ, ಅದನ್ನೇ ಸ್ಟೈಲ್ ಸ್ಟೇಟ್‌ಮೆಂಟ್ ಮಾಡಿಕೊಂಡ ಎಂದು ಸಿಸಿಲಿ ಹಳೆಯ ನೆನಪನ್ನು ಮೆಲುಕು ಹಾಕಿದ್ದಾರೆ. ಮೈಕೆಲ್ ಮೈ ತುಂಬಾ ತೊನ್ನು ಇದ್ದ ಹಿನ್ನೆಲೆ ಅವನಿಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಇದು ಆತ್ಮಾವಿಶ್ವಾಸಕ್ಕೆ ಧಕ್ಕೆ ತರುತ್ತಿತ್ತಂತೆ. ಹೀಗಾಗಿ,ಆತ ತೊನ್ನಿಗೆ ವಿಪರೀತ ಚಿಕಿತ್ಸೆ ತೆಗೆದುಕೊಂಡಿದ್ದರು ಕಮ್ಮಿಯಾಗಿರಲಿಲ್ಲ. ಹೀಗಾಗಿ, ವೇದಿಕೆ ಮೇಲೆ ಬಹಳ ದಪ್ಪಗೆ ಮೇಕಪ್ ಮಾಡಿಕೊಂಡು ಮುಖದ ತೊನ್ನು ಕಾಣದಂತೆ ಚರ್ಮದ ಟೋನ್ ಲೇಪಿಸಿಕೊಳ್ಳುತ್ತಿದ್ದ ಬಗ್ಗೆ ನಟಿ ಸಿಸಿಲಿ ಟೈಸನ್ ಮಾಹಿತಿ ಹಂಚಿಕೊಂಡಿದ್ದಾರೆ.