ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ISRO) ಪ್ರತಿಕೂಲ ಹವಾಮಾನ ಅಥವಾ ಆಪತ್ತು ಎದುರಾಗಿ ಸಮುದ್ರದಲ್ಲಿ ಸಿಲುಕುವ ಮೀನುಗಾರರ ರಕ್ಷಣೆಗೆ 2ನೇ ತಲೆಮಾರಿನ ‘ಡಿಸ್ಟ್ರೆಸ್ ಅಲರ್ಟ್ ಟ್ರಾನ್ಸ್ಮಿಟರ್’ (DOT) ಎಂಬ ಉಪಕರಣ ಅಭಿವೃದ್ದಿ ಮಾಡಿದೆಯಾಗಿದೆ.
ಮೀನುಗಾರರು ಇದನ್ನು ಬಳಸಿಕೊಂಡು ಉಪಗ್ರಹದ ಮೂಲಕ ಸಮುದ್ರದಿಂದ ತುರ್ತು ಸಂದೇಶ ರವಾನಿಸಬಹುದು. ಅವರು ಕಳುಹಿಸಿದ ಸಂದೇಶವು ಇಂಡಿಯನ್ ಮಿಷನ್ ಕಂಟ್ರೋಲ್ ಸೆಂಟರ್ ಬರುತ್ತದೆ. ಅಲ್ಲಿಂದ ಕರಾವಳಿ ರಕ್ಷಣಾ ಪಡೆಗೆ ಅದನ್ನು ರವಾನಿಸಲಾಗುತ್ತದೆ. ಅವರಿಗೆ ಮೀನುಗಾರರಿರುವ ಸ್ಥಳ ತಿಳಿಯಲಿದೆ. ತಕ್ಷಣ ಅವರು ರಕ್ಷಣೆಗೆ ಧಾವಿಸುತ್ತಾರೆ ಎಂದು ಇಸ್ರೋ ತಿಳಿಸಿದೆ. ಇದೇ ವ್ಯವಸ್ಥೆಯನ್ನು ಬಳಸಿ ಮೀನುಗಾರರು ಸುರಕ್ಷಿತ ಸ್ಥಳಕ್ಕೆ ತಾವೇ ತೆರಳುವ ಇಲ್ಲವೇ ಮರಳಿ ತಮ್ಮ ಸ್ಥಳಕ್ಕೆ ಬರುವ ಅವಕಾಶವಿದೆ. ಈಗಾಗಲೇ ಇರುವ ಡಾಟ್ ವ್ಯವಸ್ಥೆಯನ್ನು ಇಸ್ರೋ ಮೇಲ್ದರ್ಜೆ ಮಾಡಲಾಗಿದೆ. ತಮ್ಮ ಮೊಬೈಲ್ನಲ್ಲೇ ಮೀನುಗಾರರು ಸೌಕರ್ಯವನ್ನು ಬಳಕೆ ಮಾಡಬಹುದಾಗಿದೆ.