ಮಾಜಿ ರೂಪದರ್ಶಿ ದಿವ್ಯಾ ಪಹುಜಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಅನೇಕ ಸಂಗತಿಗಳು ಬಹಿರಂಗಗೊಂಡಿವೆ. ಜನವರಿ 2 ರಂದು ದಿವ್ಯಾ ಪಹುಜಾರನ್ನು ಹತ್ಯೆ ಮಾಡಲಾಗಿದ್ದು, ಸುಮಾರು 11 ದಿನಗಳ ಬಳಿಕ ಹರ್ಯಾಣದ ತೊಹಾನಾ ಕಾಲುವೆಯಲ್ಲಿ ಮೃತದೇಹ ಪತ್ತೆಯಾಗಿತ್ತು.
ಕಾಲುವೆಯಿಂದ ದೇಹವನ್ನು ಹೊರತೆಗೆದ ಸಂದರ್ಭ ದಿವ್ಯಾ ತಲೆಯ ಮೇಲಿನ ಕೂದಲು ಕಾಣೆಯಾಗಿದ್ದು, ಭಾರೀ ಅಚ್ಚರಿಗೆ ಕಾರಣವಾಗಿತ್ತು. ಇದರಿಂದ ದೇಹವನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ದೊಡ್ದ ಸವಾಲಾಗಿತ್ತು. ದಿವ್ಯಾ ತಾಯಿ ಬೆನ್ನು, ತೋಳುಗಳ ಮೇಲಿರುವ ಹಚ್ಚೆಗಳ ಮೂಲಕ ಮಗಳನ್ನು ಪತ್ತೆ ಹಚ್ಚಿದ್ದರು. ದಿವ್ಯಾಳ ಫೋನ್ನಲ್ಲಿ ಕೆಲವು ಅಶ್ಲೀಲ ಚಿತ್ರಗಳಿದ್ದ ಹಿನ್ನೆಲೆ ಆಕೆ ನಿರಂತರವಾಗಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದಳು ಎನ್ನಲಾಗಿದೆ. ಇದೇ ಕಾರಣಕ್ಕಾಗಿ ಆಕೆಯನ್ನು ಕೊಲೆ ಮಾಡಿರುವುದಾಗಿ ಅಭಿಜೀತ್ ತಪ್ಪು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ದಿವ್ಯಾ ತಲೆಯಲ್ಲಿ ಗುಂಡು ಪತ್ತೆಯಾಗಿದ್ದು, ಹೋಟೆಲ್ ಮಾಲೀಕ ಅಭಿಜೀತ್ ಸಿಂಗ್ ಅವರು ಆಕೆಯ ತಲೆಗೆ ಅತ್ಯಂತ ಸಮೀಪದಿಂದ ಗುಂಡು ಹಾರಿಸಿದ್ದರು ಎಂದು ತಿಳಿದುಬಂದಿದೆ. ಮಾಜಿ ರೂಪದರ್ಶಿ ದಿವ್ಯಾ ಪಹುಜಾ ಶವವನ್ನು ಮತ್ತೊಬ್ಬ ಆರೋಪಿ ರವಿ ಬಾಂದ್ರಾ ಜತೆ ವಿಲೇವಾರಿ ಮಾಡುತ್ತಿದ್ದ ಸಂದರ್ಭ ಬಾಲ್ರಾಜ್ ಗಿಲ್ ಗುರುವಾರ ಸಂಜೆ ವಿಮಾನ ನಿಲ್ದಾಣದಲ್ಲಿ ವಿಮಾನ ಹತ್ತಲು ಪ್ರಯತ್ನಿಸುತ್ತಿದ್ದ ವೇಳೆ ಬಂಧಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಹೋಟೆಲ್ ಮಾಲೀಕ ಅಭಿಜಿತ್, ಕೆಲಸಗಾರರಾದ ಹೇಮರಾಜ್, ಓಂ ಪ್ರಕಾಶ್ನನ್ನು ಬಂಧಿಸಲಾಗಿದೆ ಎಂದು ಮಾಹಿತಿ ದೊರಕಿದೆ.