ಬೆಂಗಳೂರು: ಮೇ 13 ರವರೆಗೆ ಬೆಂಗಳೂರಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಹಳದಿ ಎಚ್ಚರಿಕೆಯು ನಗರದಲ್ಲಿ ಭಾರಿ ಮಳೆಯಾಗಲಿದೆ ಎಂದು ಸೂಚಿಸುತ್ತದೆ. ಅಲ್ಪಾವಧಿಯ ಮುನ್ಸೂಚನೆಯ ಪ್ರಕಾರ, ಮಳೆಯೊಂದಿಗೆ ಗಾಳಿ ಬೀಸಬಹುದು. ನಗರದಲ್ಲಿ ಗುರುವಾರ ಮತ್ತು ಶುಕ್ರವಾರ ಗುಡುಗು ಸಹಿತ ಮಳೆಯಾಗಲಿದ್ದು, ಹೆಚ್ಚಾಗಿ ಸಂಜೆ ಅಥವಾ ರಾತ್ರಿ ಮಳೆಯಾಗಲಿದೆ ಎನ್ನಲಾಗಿದೆ.
ಮಳೆಯೊಂದಿಗೆ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಮುಂದಿನ ಎರಡು ದಿನಗಳಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 34 ಮತ್ತು 21 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿರಲಿದೆ.
ಐಎಂಡಿ ಬುಧವಾರವೂ ಹಳದಿ ಎಚ್ಚರಿಕೆ ನೀಡಿತ್ತು ಮತ್ತು ನಗರದ ಅನೇಕ ಭಾಗಗಳಲ್ಲಿ ಸಂಜೆಯ ವೇಳೆಗೆ ಧಾರಾಕಾರ ಮಳೆಯಾಗಿದೆ.