ಮಂಗಳೂರು : ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ಅಧಿಕಾರಿಗಳು ಚಿನ್ನದ ಬೇಟೆಯ ಸರಣಿಯನ್ನು ಮುಂದುವರೆಸಿದ್ದು 50.93 ಲಕ್ಷ ರೂಪಾಯಿಯ ಅಕ್ರಮ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳಾದ IX816 ಮತ್ತು IX814ದಲ್ಲಿ ಅಭುದಾಬಿ ಮತ್ತು ದುಬೈಯಿಂದ ಆಗಮಿಸಿದ್ದ ಇಬ್ಬರು ಪ್ರಯಾಣಿಕರಲ್ಲಿ ಈ ಅಕ್ರಮ ಚಿನ್ನ ಪತ್ತೆಯಾಗಿದೆ. ಇಬ್ಬರಿಂದ ಒಟ್ಟು 815 ಗ್ರಾಂ ಶುದ್ದ ಚಿನ್ನವನ್ನು ವಶಕ್ಕೆ ಪಡೆದಿದ್ದು ಇದರ ಮೌಲ್ಯ ಸುಮಾರು ರೂ. 50,93,750 ಎಂದು ಅಂದಾಜಿಸಲಾಗಿದೆ. ಒರ್ವ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಕ್ಯಾಪ್ಸೂಲ್ ಮಾಡಿ ಗುದನಾಳದಲ್ಲಿ ಅಡಗಿಸಿಟ್ಟಿದ್ದರೆ, ಮತ್ತೋರ್ವ ಪೇಸ್ಟ್ ರೂಪ ಮಾಡಿ ಬ್ಯಾಗ್‌ನಲ್ಲಿ ಚಾಕಲೇಟ್ ಬಾಕ್ಸ್ ನಲ್ಲಿ ಮರೆಮಾಚಲಾಗಿತ್ತು ಎಂದು ಅಧಿಕಾರಿಗಳ ಮಾಹಿತಿ ನೀಡಿದ್ದಾರೆಯಾಗಿದೆ.