ಬೆಂಗಳೂರು : ಟ್ಯೂಷನ್ ಗೆ ಹೋಗಿ ಬರುತ್ತೇನೆ ಎಂದು ಹೇಳಿ ನಾಪತ್ತೆಯಾಗಿದ್ದ ಬಾಲಕ ಇದೀಗ ಹೈದರಾಬಾದ್ ನಲ್ಲಿ ಪತ್ತೆಯಾಗಿದ್ದಾನೆ ಬೆಂಗಳೂರಿನಲ್ಲಿ ನಾಪತ್ತೆಯಾಗಿದ್ದ ಬಾಲಕ ಇದೀಗ ಹೈದರಾಬಾದ್ ನಲ್ಲಿ ಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ.
ಪರಿಣವ (12) ವರ್ಷದ ಬಾಲಕ ನಿನ್ನೆ ಬೆಂಗಳೂರಿಗೆ ನಂದನಪತೆಯಾಗಿದ್ದ. ಟ್ಯೂಷನ್ಗೆ ತೆರಳಿದ್ದ 12 ವರ್ಷದ ಬಾಲಕ ನಿಗೂಢವಾಗಿ ನಾಪತ್ತೆ ಆಗಿರುವಂತಹ ಘಟನೆ ನಗದರಲ್ಲಿ ನಡೆದಿತ್ತು. ವಿಜಯನಗರದ ಸುಖೇಶ್, ನಿವೇದಿತಾ ದಂಪತಿ ಪುತ್ರ ಪರಿನವ್ ನಾಪತ್ತೆ ಆದ ಬಾಲಕ. ಗುಂಜೂರಿನ ಡೆನ್ ಅಕಾಡೆಮಿ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಪರಿನವ್, ಭಾನುವಾರ ಮಧ್ಯಾಹ್ನ 12.15ರ ಸುಮಾರಿಗೆ ನಾಪತ್ತೆ ಆಗಿದ್ದ.
ವೈಟ್ಫೀಲ್ಡ್ನ ಅಲೆನ್ ಟೂಷನ್ ಸೆಂಟರ್ಗೆ ತಂದೆ ಡ್ರಾಪ್ ಮಾಡಿದ್ದಾರೆ. ಮಧ್ಯಾಹ್ನ ಕರೆತರಲು ಹೋಗುವುದು ತಡವಾಗಿದ್ದರಿಂದ ನಾಪತ್ತೆ ಆಗಿದ್ದ. ಟ್ಯೂಷನ್ ಸೆಂಟರ್ನಿಂದ ಮಾರತ್ತಹಳ್ಳಿವರೆಗೆ ಬಾಲಕ ನಡೆದುಬಂದಿದ್ದು, ನಂತರ ಬಿಎಂಟಿಸಿ ಬಸ್ ಹತ್ತಿರುವ ಸಿಸಿಕ್ಯಾಮರಾ ದೃಶ್ಯ ಲಭ್ಯವಾಗಿತ್ತು.
ಆನಂತರ ಬಾಲಕ ಪರಿನವ್ ಎಲ್ಲಿ ಹೋದನೆಂದು ಈವರೆಗೂ ಪತ್ತೆಯಾಗಿಲ್ಲ. ಬಾಲಕ ನಾಪತ್ತೆ ಬಗ್ಗೆ ವೈಟ್ಫೀಲ್ಡ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದ್ದು, ನಾಪತ್ತೆಯಾದ ಪರಿನವ್ಗಾಗಿ ವೈಟ್ಫೀಲ್ಡ್ ಠಾಣೆ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದರು ಇದೀಗ ಹೈದರಾಬಾದ್ ನಲ್ಲಿ ಬಾಲಕ ಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ.