ಬೆಂಗಳೂರು : ಮನೆಯ ಬೆಡ್ ರೂಂ ಅಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಕೆಎಎಸ್ ಅಧಿಕಾರಿ ಪತ್ನಿ ಆತ್ಮಹತ್ಯೆಗೆ ಇದೀಗ ಟ್ವಿಸ್ಟ್ ಸಿಕ್ಕಿದ್ದು ಕಳೆದ ಮೂರು ತಿಂಗಳ ಹಿಂದೆಯೇ ಮೃತ ಚೈತ್ರ ಗೌಡ ಡೆತ್ ನೋಟ್ ಬರೆದಿದ್ದರು ಎಂದು ತನಿಖೆಯ ವೇಳೆ ಗೊತ್ತಾಗಿದೆ.
ಇಂದು ಬೆಳಿಗ್ಗೆ ಸಂಜಯ್ ನಗರದಲ್ಲಿ ಮನೆ ಒಂದರಲ್ಲಿ ಕೆಎಎಸ್ ಅಧಿಕಾರಿ ಪತ್ನಿ ಹಾಗೂ ವೃತ್ತಿಯಲ್ಲಿ ವಕೀಲೆಯಾಗಿರುವಂತಹ ರೈತರ ಗೌಡ ಅವರು ಮನೆಯ ಬೆಡ್ ರೂಮಿನಲ್ಲಿ ಫ್ಯಾನಿಗೆ ನೇಣು ಬಿಗಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ತಕ್ಷಣ ಅವರನ್ನು ಎಂ ಎಸ್ ರಾಮಯ್ಯ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಅವರ ಶವವನ್ನು ರವಾನಿಸಲಾಗಿತ್ತು ಇದೀಗ ಪೊಲೀಸರು ಅವರ ಮನೆಯನ್ನು ಪರಿಶೀಲ ನಡೆಸಿದಾಗ ಈ ಒಂದು ಡೆತ್ ನೋಟ್ ಪ್ರತಿ ಪತ್ತೆಯಾಗಿದೆ.
ಡೆತ್ ನೋಟ್ ಅಲ್ಲಿ ಏನಿದೆ?
ಮಾರ್ಚ್ 11 ರಂದು ಚೈತ್ರಾಗೌಡ ಡೆತ್ ನೋಟ್ ಬರೆದಿಟ್ಟಿದ್ದರು. ಜೀವನ ಎಂಜಾಯ್ ಮಾಡಿ ಮಗಳನ್ನು ಚೆನ್ನಾಗಿ ನೋಡಿಕೊಳ್ಳಿ. ನಾನು ಡಿಪ್ರೆಶನ್ ಇಂದ ಬಳಲುತ್ತಿದ್ದೇನೆ. ಡಿಪ್ರೆಶನ್ ಇಂದ ಹೊರಬರಲು ಸಾಕಷ್ಟು ಪ್ರಯತ್ನಿಸಿದ್ದೆ ಆದರೆ ಆಗಲಿಲ್ಲ.ಹಾಗಾಗಿ ನನ್ನ ಜೀವನ ಕೊನೆಗೊಳಿಸುತ್ತಿದ್ದೇನೆ.
ಮಗು ಚೆನ್ನಾಗಿ ನೋಡಿಕೊಂಡು ಲೈಫ್ ಎಂಜಾಯ್ ಮಾಡಿ.ನಾನು ಆತ್ಮಹತ್ಯೆ ಮಾಡಿಕೊಳ್ಳುವುದು ತಪ್ಪು ಅಂತ ಗೊತ್ತಿದೆ. ಆದರೂ ನನ್ನ ಜೀವನ ಅಂತ್ಯ ಮಾಡುತ್ತಿದ್ದೇನೆ ಎಂದು ಚೈತ್ರ ಗೌಡ ಡೆತ್ ನೋಟ್ ಬರೆದಿಟ್ಟಿದ್ದಾರೆ. ಮನೆಯಲ್ಲಿ ಮೂರು ತಿಂಗಳ ಹಿಂದೆ ಚೈತ್ರ ಗೌಡ ಡೆತ್ ನೋಟ್ ಬರೆದಿಟ್ಟಿದ್ದು ಇದೀಗ ಪತ್ತೆಯಾಗಿದೆ.