ಮೈಸೂರು : ಮೈಸೂರು ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪರಿಷತ್ತು ಜಂಟಿಯಾಗಿ ಇಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಗ್ಯಾರಂಟಿ ಫಲಾನುಭವಿಗಳ ಸಮಾವೇಶವನ್ನು ಹಮ್ಮಿಕೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಒಂದು ಸಮಾವೇಶದಲ್ಲಿ ಮಾತನಾಡಿ ಬಿಜೆಪಿ ಪಕ್ಷದ ಬಡವರಿಗೂ ಕೂಡ ಗ್ಯಾರಂಟಿ ಯೋಜನೆಗಳನ್ನ ತಲುಪಿಸುತ್ತಿದ್ದೇವೆ ಎಂದು ತಿಳಿಸಿದರು.
ಕಲಬುರ್ಗಿಯ ಅಂಗನವಾಡಿ ಕೇಂದ್ರದಲ್ಲಿ ‘ಕಳಪೆ’ ಆಹಾರ ಪೂರೈಕೆ : ದಿಢೀರ್ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು
ಗ್ಯಾರಂಟಿ ಯೋಜನೆಗಳು ಎಲ್ಲಾ ಜಾತಿಯ ಬಡವರು, ಎಲ್ಲಾ ಧರ್ಮದ ಬಡವರು ಅವರೆಲ್ಲರಿಗೂ ಕೂಡ ಈ ಯೋಜನೆಗಳು ತಲುಪುವ ಕೆಲಸ ಮಾಡುತ್ತೇವೆ. ಭಾರತೀಯ ಜನತಾ ಪಕ್ಷದ ಬಡವರಿಗೂ ಕೂಡ ಕೊಡುತ್ತಿದ್ದೇವೆ. ನಾವು ಯಾವುದೇ ಧರ್ಮ ಜಾತಿ ಪಕ್ಷ ಪಂಗಡ ಎಂದು ಬೇಧ ಮಾಡುವುದಿಲ್ಲ ಸಮರದಲ್ಲಿರುವಂತಹ ಎಲ್ಲಾ ಮಹಿಳೆಯರು ಎಲ್ಲಾ ಬಡವರು ಅವರಿಗೆ ಸಹಾಯ ಮಾಡಬೇಕೆಂಬುದೇ ನಮ್ಮ ಗ್ಯಾರಂಟಿ ಯೋಜನೆಗಳ ಪ್ರಮುಖ ಉದ್ದೇಶವಾಗಿದೆ ಎಂದರು.
“ಡಿಎಂಕೆ, ಕಾಂಗ್ರೆಸ್’ಗೆ ಹಗರಣಗಳ ಇತಿಹಾಸವಿದೆ” : ತಮಿಳುನಾಡಲ್ಲಿ ‘ಪ್ರಧಾನಿ ಮೋದಿ’ ವಾಗ್ದಾಳಿ
ಬೆಲೆ ಏರಿಕೆಯಿಂದ ಇವತ್ತು ಬಡವರು ಜೀವನ ನಡೆಸಲು ತುಂಬಾ ಕಷ್ಟವಾಗುತ್ತಿದೆ ಅದಕ್ಕೋಸ್ಕರ ಬಡವರ ಕೈಯಲ್ಲಿ ದುಡ್ಡಿಲ್ಲ ಯಾವುದೇ ಹೊಸ ಕೊಂಡುಕೊಳ್ಳುವಂತ ಬೇಕಾದರೂ ಶಕ್ತಿ ಕಡಿಮೆಯಾಗಿದೆ.ಅಂತಹ ಜನರಿಗೆ ಮಹಿಳೆಯರಿಗೆ ದಲಿತರಿಗೆ ಹಿಂದುಳಿದವರಿಗೆ ಅಲ್ಪಸಂಖ್ಯಾತರಿಗೆ ಕಾರ್ಮಿಕರಿಗೆ ರೈತರಿಗೆ ಸೇರಿದಂತೆ ಎಲ್ಲರಿಗೂ ಕೂಡ ಯಾರು ಅವಕಾಶಗಳಿಂದ ವಂಚಿತರಾಗಿರುವಂತಹ ಜನರಿದ್ದಾರೆ ಯಾರು ಬೆಲೆ ಏರಿಕೆಯಿಂದ ಜೀವನದಲ್ಲಿ ಕಷ್ಟ ಅನುಭವಿಸುತ್ತಿದ್ದಾರೋ ಈ ವರ್ಗದ ಜನರಿಗೆ ಆರ್ಥಿಕವಾಗಿ ಸಾಮಾಜಿಕವಾಗಿ ಶಕ್ತಿ ತುಂಬಬೇಕು ಅನ್ನುವ ಕಾರಣಕ್ಕೋಸ್ಕರ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದೇವೆ.
ಆಗ ಕೂಡ ಬಿಜೆಪಿಯವರು ವ್ಯಂಗ್ಯವಾಡಿದರು ಅವ ಹೇಳನ ಮಾಡಿದರು ಸ್ವತಹ ಮೋದಿ ಅವರೇ ರಾಜಸ್ಥಾನದ ಕಾರ್ಯಕ್ರಮದ ಒಂದರಲ್ಲಿ ಅವರ ಭಾಷಣದಲ್ಲಿ ಕರ್ನಾಟಕದ 5 ಗ್ಯಾರಂಟಿಗಳನ್ನು ಜಾರಿ ಮಾಡಲಿಕ್ಕೆ ಸಾಧ್ಯ ಇಲ್ಲ.ಯಾಕೆಂದರೆ ಅಷ್ಟೊಂದು ಹಣ ತರಲಿಕ್ಕೆ ಸಾಧ್ಯವಿಲ್ಲ ಒಂದು ವೇಳೆ ಕರ್ನಾಟಕದಲ್ಲಿ ಐದು ಗ್ಯಾರಂಟಿಗಳನ್ನು ಜಾರಿ ಮಾಡಿದರೆ ಕರ್ನಾಟಕದ ಖಜಾನೇ ಖಾಲಿಯಾಗುತ್ತದೆ ಯಾವ ಕಾರಣಕ್ಕೂ ಕೂಡ ಜಾರಿ ಮಾಡುವುದಕ್ಕೆ ಆಗಲ್ಲ ಎಂದರು.
ಪ್ರತಿ ಹಳ್ಳಿಗೂ ನೀರು ಸರಬರಾಜು: ಯಶಸ್ವಿಗೆ 151 ತಾಂತ್ರಿಕ ಬೆಂಬಲ ಸಿಬ್ಬಂದಿ ನೇಮಕ- ಪ್ರಿಯಾಂಕ್ ಖರ್ಗೆ
ಒಂದು ವೇಳೆ 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದರೆ ಅಭಿವೃದ್ಧಿ ಕೆಲಸಗಳೆಲ್ಲ ನಿಂತು ಹೋಗುತ್ತವೆ ಎಂದು ಟೀಕೆ ಮಾಡಿದರು. ಇವೆಲ್ಲ ಚುನಾವಣೆಗೋಸ್ಕರ ಮಾಡಿರುವಂತಹ ಕಾರ್ಯಕ್ರಮಗಳು ಚುನಾವಣೆ ಆದಮೇಲೆ ಈ ಎಲ್ಲಾ ಯೋಜನೆಗಳು ನಿಲ್ಲಿಸಿ ಬಿಡುತ್ತಾರೆ ಇವೆಲ್ಲವೂ ಕೂಡ ಅಪ್ಪಟ ಸುಳ್ಳು. ಅವರು ಹೊಟ್ಟೆ ಊರಿಗೆ ಬಡವರ ಪರವಾಗಿ ಹಣ ಕೊಡುತ್ತಿದ್ದಾರೆ ಬಡವರ ಕೈಗೆ ಹಣ ಕೊಡುತ್ತಿದ್ದಾರೆ ಎಲ್ಲಾ ಕಾರ್ಯಕ್ರಮಗಳು ಮಾಡುತ್ತಿದ್ದಾರೆ ಈ ಕಾರಣಕ್ಕೆ ಸುಳ್ಳು ಹೇಳುವುದಕ್ಕೆ ಪ್ರಾರಂಭ ಮಾಡಿದರು ಎಂದು ವಾಗ್ದಾಳಿ ನಡೆಸಿದರು.