ಬೆಂಗಳೂರು : ರಾಜ್ಯದಲ್ಲಿ ಗೋದ್ರಾ ರೀತಿ ಘಟನೆ ಆಗುತ್ತೆ ಎಂದು ಹೇಳಿಕೆ ವಿಚಾರವಾಗಿ ಬಿಜೆಪಿ ಅಧಿಕಾರದಲ್ಲಿ ಇಲ್ಲದ ಕಡೆ ರಾಜ್ಯಪಾಲರ ಮೂಲಕ ಆಳ್ವಿಕೆ ನಡೆಸಲಾಗುತ್ತಿದೆ.ಕಾನೂನು ಸುವ್ಯವಸ್ಥೆಗೆ ರಾಜ್ಯಪಾಲರಿಗೂ ಏನು ಸಂಬಂಧ? ಏನೇ ಇದ್ದರೂ ಕಾನೂನು ಚೌಕಟ್ಟಿನಲ್ಲಿ ಮಾಡುತ್ತೇವೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ ಖರ್ಗೆ ರಾಜ್ಯದಲ್ಲಿ ಗೋದ್ರಾ ರೀತಿ ಘಟನೆ ಆಗುತ್ತೆ ಎಂದು ಹೇಳಿಕೆ ವಿಚಾರವಾಗಿ ರಾಜ್ಯಪಾಲರಾದ ಗೆಹಲೊಟ್ ಪದೇಪದೇ ಇದರ ಬಗ್ಗೆ ಕೇಳುತ್ತಿದ್ದಾರೆ.ತನಿಖೆ ಆಗಿದೆಯಾ ಇಲ್ವಾ ಎಂದು ಪದೇಪದೇ ಕೇಳುತ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ಸಚಿವ ಪ್ರಿಯಾಂಕ ಖರ್ಗೆ ಹೇಳಿದರು.
ರಾಜ್ಯಪಾಲರ ಮಾತಿಗೆ ಗೌರವ ಕೊಟ್ಟು ಗೃಹ ಇಲಾಖೆಯು ವರದಿ ನೀಡಿದೆ. ರಾಜ್ಯಪಾಲರು ಏಕೆ ಎಷ್ಟು ಆಸಕ್ತಿ ಇದ್ದಾರೆ ಎಂದು ಗಮನಿಸಬೇಕು.ರಾಜ್ಯಪಾಲರಿಗೆ ಕೇಂದ್ರ ಸರ್ಕಾರದಿಂದ ನಿರ್ದೇಶನ ವಿದೆಯಾ? ಸರ್ಕಾರ ಹರಿಪ್ರಸಾದ್ ಗೆ ಮುಜುಗರ ಮಾಡಬೇಕು ಅಂತ ಇದೆಯಾ? ಎಂದು ಪ್ರಶ್ನಿಸಿದರು.