ಬಳ್ಳಾರಿ : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ತಡೆಗಟ್ಟಲು ನೀರು ಸಮೇತ ಜಾರಿ ಮಾಡಲಾಗಿದ್ದು ಇತ್ತೀಚಿಗೆ ಏಪ್ರಿಲ್ ಏಳರಂದು ಬಳ್ಳಾರಿಯಲಿ ಐದು ಕೋಟಿ 60 ಲಕ್ಷಕ್ಕೂ ಹೆಚ್ಚು ಹಣ ಹಾಗೂ ಚಿನ್ನ ಬೆಳ್ಳಿ ಜಪ್ತಿ ಮಾಡಿಕೊಂಡಿರುವ ಪ್ರಕರಣಕ್ಕೆ ಹೊಸ ತಿರುಗು ಸಿಕ್ಕಿದ್ದು ಪೊಲೀಸರ ವಿಚಾರಣೆ ವೇಳೆ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.
ಜಾತಿ ಹೆಸರು ಹೇಳಿ ಮತದಾರರ ಮೇಲೆ ಪ್ರಭಾವ ಆರೋಪ : ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಬಿಜೆಪಿ ದೂರು
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ವೇಳೆ ನರೇಶ್ ಹವಾಲಾ ದಂಧೆ ನಡೆಸುತ್ತಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಎಸ್ಪಿ ರಂಚಿತಕುಮಾರ ಬಂಡಾರು ಅವರು ಹೇಳಿದ್ದಾರೆ. ಇಂದು ಬಳ್ಳಾರಿ ಡಿಸಿ ಕಚೇರಿಯಲ್ಲಿ ಮಾತನಾಡಿ, ‘ಬಳ್ಳಾರಿ ನಗರ ಮತ್ತು ಸುತ್ತಮುತ್ತ ಹವಾಲಾ ದಂಧೆ ನಡೆಸುತ್ತಿದ್ದ ನರೇಶ್, ಈ ಹಿಂದೆಯೂ ಹವಾಲಾ ಮೂಲಕ ಹಣ ವರ್ಗಾಯಿಸಿದ್ದ ಎಂದು ತಿಳಿಸಿದರು.
‘ಹೇಡಿತನ ಕೆಟ್ಟದು’ : ಭಾರತ-ಚೀನಾ ಗಡಿ ವಿವಾದ ; ‘ಪ್ರಧಾನಿ ಮೋದಿ’ ವಿರುದ್ಧ ‘ಕಾಂಗ್ರೆಸ್’ ವಾಗ್ದಾಳಿ
ಈ ಹಿನ್ನೆಲೆಯಲ್ಲಿ ನಿಖರ ಮಾಹಿತಿ ಮೇರೆಗೆ ಏ.7ರಂದು ಬಳ್ಳಾರಿಯ ಕಂಬಳಿ ಬಜಾರ್ನ ನರೇಶ್ ಮನೆ ಮೇಲೆ ಏಕಕಾಲದಲ್ಲಿ ಐಟಿ ಹಾಗೂ ಪೊಲೀಸರು ಜಂಟಿ ದಾಳಿ ನಡೆಸಿ, ಆತನ ಮನೆಯಲ್ಲಿದ್ದ 5 ಕೋಟಿ 60 ಲಕ್ಷ ಹಣ, 3 ಕೆಜಿ ಚಿನ್ನ, 68 ಕೆಜಿ ಬೆಳ್ಳಿ ಗಟ್ಟಿ ಮತ್ತು 103 ಕೆಜಿ ಬೆಳ್ಳಿ ಆಭರಣ ಜಪ್ತಿ ಮಾಡಿದ್ದರು. ಬಳಿಕ ವಿಚಾರಣೆಗೆ ಹಾಜರಾಗುವಂತೆ ನರೇಶ್ಗೆ ನೋಟಿಸ್ ನೀಡಲಾಗಿತ್ತು. ನರೇಶ್ ವಿಚಾರಣೆ ವೇಳೆ ಪೊಲೀಸರು ಸ್ಫೋಟಕ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ಹೇಳಿದರು.