ಬೆಂಗಳೂರು : ಅಣ್ಣ ತಾಳೆ ಪರೀಕ್ಷೆ ಮಾಡಬೇಡ ಎಲ್ಲಿದ್ದರೂ ಪೊಲೀಸರಿಗೆ ಬಂದು ಶರಣಾಗು ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ತಮ್ಮ ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಪತ್ರದ ಮೂಲಕ ಎಚ್ಚರಿಕೆ ಕೊಟ್ಟಿದ್ದಾರೆ ಈ ವಿಚಾರವಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಕ್ರಿಯೆಸಿದ್ದು, ಇದು ಅವರ ಕುಟುಂಬದ ವಿಚಾರ ಅದರ ಬಗ್ಗೆ ನನಗೇನು ಕೇಳಬೇಡಿ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್ ಡಿ ದೇವೇಗೌಡರು ಪತ್ರ ಬರೆದಿರುವುದು ಅವರ ಕುಟುಂಬದ ವಿಚಾರ. ದೇವೇಗೌಡರು ಉಂಟು ಅವರ ಕುಟುಂಬ ಉಂಟು. ಎಚ್ ಡಿ ದೇವೇಗೌಡರ ಕುಟುಂಬದ ವಿಚಾರದ ಬಗ್ಗೆ ಏನು ಕೇಳಬೇಡಿ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣಗೆ ಎಚ್ ಡಿ ಕುಮಾರಸ್ವಾಮಿ ಅವರು ಟ್ವೀಟ್ ಮೂಲಕ ಎಚ್ಚರಿಕೆ ನೀಡಿದ್ದಾರೆ. ನನ್ನ ತಾಳ್ಮೆ ಪರೀಕ್ಷಿಸಬೇಡ ಎಲ್ಲೇ ಇದ್ದರೂ ಬಂದು ಪೊಲೀಸರಿಗೆ ಶರಣಾಗು ಎಂದು ತಿಳಿಸಿದ್ದಾರೆ.
ಇದು ಅವನಿಗೆ ಕೊಡುತ್ತಿರುವ ಎಚ್ಚರಿಕೆ ಎಂದು ತಿಳಿಯಬೇಕು ಇಲ್ಲದಿದ್ದಲ್ಲಿ ಕುಟುಂಬದವರ ಕೋಪವನ್ನು ಎದುರಿಸಬೇಕಾಗುತ್ತದೆ. ಮನೆಯವರ ಕಣ್ಣಲ್ಲಿ ಏಕಾಂಗಿಯಾಗುವುದರಲ್ಲಿ ಸಂದೇಹವೇ ಇಲ್ಲ. ನನ್ನ ಬಗ್ಗೆ ಗೌರವವಿದ್ದಲ್ಲಿ ಅವನು ಕೂಡಲೇ ವಿದೇಶದಿಂದ ಹಿಂದು ರೋಗ ಬೇಕು ಅನ್ಯಾಯಕ್ಕ ಒಳಗಾಗಿರುವವರಿಗೆ ನ್ಯಾಯ ಸಿಗುವುದು ಅಷ್ಟೇ ಮುಖ್ಯ ಜನರ ವಿಶ್ವಾಸವನ್ನು ಮರಳಿ ಪಡೆಯುವುದು ಅಷ್ಟೇ ನನ್ನ ಗುರಿ ಎಂದು ಟ್ವೀಟ್ ನಲ್ಲಿ ಪತ್ರದ ಮೂಲಕ ಪ್ರಜ್ವಲ್ಗೆ ದೇವೇಗೌಡರು ಎಚ್ಚರಿಕೆ ನೀಡಿದ್ದಾರೆ.