ಬೆಂಗಳೂರು : ವಿಧಾನಸೌಧದಲ್ಲಿ ನಿನ್ನೆ ಪಾಕಿಸ್ತಾನ ಪ್ರಜೆಯ ಘೋಷಿಸಿದ ಘಟನೆಗೆ ಸಂಬಂಧಿಸಿದಂತೆ ಈ ವಿಷಯ ಪರಿಷತ್ತಿನಲ್ಲೂ ದೊಡ್ಡ ಸದ್ದು ಮಾಡುತ್ತಿದ್ದು ಈಗ ಸಭಾಪತಿ ಕುರ್ಚೆ ಎದುರುಗಡೆನೇ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದ ಘಟನೆ ನಡೆದಿದೆ.
BREAKING: ‘ರಿಲಯನ್ಸ್-ಡಿಸ್ನಿಯ’ ವಿಲೀನಗೊಂಡ ಮಾಧ್ಯಮ ವ್ಯವಹಾರದ ಅಧ್ಯಕ್ಷರಾಗಿ ನೀತಾ ಅಂಬಾನಿ ಸಾಧ್ಯತೆ: ವರದಿ
ಈ ಘಟನೆ ಕುರಿತಂತೆ ಕಾಂಗ್ರೆಸ್ ಸದಸ್ಯರಾದ ಬಿಹಾರಿ ಪ್ರಸಾದ್ ಮಾತನಾಡುತ್ತಿದ್ದ ವೇಳೆ, ರಾಜ ಕಾಂಗ್ರೆಸ್ ಸರ್ಕಾರ ದೇಶದ್ರೋಹ ಸರ್ಕಾರ ಎಂದು ರವಿಕುಮಾರ್ ಅವರು ಗಂಭೀರವಾದ ಆರೋಪ ಮಾಡಿದ್ದು ಈಗಿರುವ ಸರ್ಕಾರ ದೇಶದ್ರೋಹಿ ಸರಕಾರ ಎಂದಿದ್ದಾರೆ. ಇವರಿಗೆ ಏನಾದರೂ ತಾಕತ್ತು ಇದ್ದರೆ ಪ್ರಧಾನಿ ಮೋದಿ ಬಳಿಗೆ ಹೋಗಿ ಸರ್ಕಾರದ ಮೇಲೆ ದೇಶದ್ರೋಹದ ಕೇಸ್ ಬುಕ್ ಮಾಡಲಿಕ್ಕೆ ಹೇಳಿ, ಬಾಯಿಗೆ ಬಂದಂತೆ ಹೇಳಕಾಗುತ್ತ ಇವರಿಂದ ನಾವು ಸರ್ಟಿಫಿಕೇಟ್ ತಗೋ ಬೇಕೇನೋ? ಎಂದು ಕೇಳಿದ್ದಾರೆ.
ದಾವಣಗೆರೆ : ಚರ್ಚ್ ಗೆ ಬರುವ ಮಹಿಳೆಯರ ಮೇಲೆ ತಂದೆ ‘ಲೈಂಗಿಕ’ ದೌರ್ಜನ್ಯವೆಸಗಿದ್ದಾರೆ : ಸ್ವಂತ ಮಗಳಿಂದಲೇ ಆರೋಪ
ಈ ವೇಳೆ ಎನ್ ರವಿ ಕುಮಾರ್ ಅವರು ಮಧ್ಯಪ್ರವೇಶಿಸಿದಾಗ, ಅಬ್ದುಲ್ ಜಬ್ಬಾರ್ ಅವರು ಅವನ ಬಾಯಿಯನ್ನು ಮುಚ್ಚಿಸಿ ಎಂದು ಏಕವಚನದಲ್ಲಿ ಹೇಳಿದಾಗ ಇದರಿಂದ ಆಕ್ರೋಶಗೊಂಡ ಎನ್ ರವಿ ಕುಮಾರ್ ಏಕವಚನದಲ್ಲಿ ಮಾತನಾಡಿದರೆ ಸರಿ ಇರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಇದೆ ವೇಳೆ ಕಾಂಗ್ರೆಸ್ ಸದಸ್ಯರ ಮೇಲೆ ಮುಗಿಬೀಳಲು ಬಿಜೆಪಿ ಸದಸ್ಯರು ತೆರಳುತ್ತಿದ್ದ ಸಂದರ್ಭದಲ್ಲಿ ಪರಿಷತ್ ಸದಸ್ಯರನ್ನು ನಿಯಂತ್ರಿಸಲು ಮಾರ್ಷಲ್ ಗಳು ಹರಸಾಹಸ ನಡೆಸಿದರು. ಪರಿಷತ್ ನಲ್ಲಿ ಕೈ ಕೈ ಮಿಲಾಯಿಸುವ ಹಂತಕ್ಕೆ ಗಲಾಟೆ ನಡೆಯಿತು. ಬಿಜೆಪಿ ಕಾಂಗ್ರೆಸ್ ಸದಸ್ಯರ ನಡುವೆ ಕದನ ಜೋರಾಯಿತು.ಈ ವೇಳೆ ಸಭಾಪತಿ ಕುರ್ಚಿ ಎದುರುಗಡೆನೇ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದರು.
ರವಿಕುಮಾರ್ ಬಗ್ಗೆ ಏಕವಚನವನ್ನು ಅಬ್ದುಲ್ ಜಬ್ಬಾರ್ ಪ್ರಯೋಗಿಸಿದ್ದರು.ರವಿಕುಮಾರ್ ಹೇಳಿದಾಗ ಈ ವೇಳೆ ಅರ್ಜುನ್ ಜಬ್ಬಾರ್ ಮಾತಿಗೆ ರೊಚ್ಚಿಗೆದ್ದ ಬಿಜೆಪಿ ಸದಸ್ಯರು ಏಕವಚನದಲ್ಲಿ ಮಾತನಾಡಿದರೆ ಸರಿ ಇರಲ್ಲವೆಂದು ಎನ್. ರವಿಕುಮಾರ್ ಎದ್ದು ಹೋಗಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು.ಅವರ ಜೊತೆಗೆ ತುಳಸಿ ಮುನಿರಾಜುಗೌಡ ಮುಂದಾಗಿ ಹೋಗಿ ವಾರ್ನಿಂಗ್ ನೀಡಿದ ಘಟನೆ ನಡೆಯಿತು.