ಬೆಂಗಳೂರು : ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುನಿರತ್ನ ವಿರುದ್ಧ ಬೆಂಗಳೂರಿನಲ್ಲಿ ಇಂದು ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದ್ದು, ಕಾಂಗ್ರೆಸ್ ಪ್ರತಿಭಟನೆಯಲ್ಲಿ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಭಾಗಿಯಾಗಿದ್ದಾರೆ. ಕೆಂಗೇರಿ ರೈಲ್ವೆ ನಿಲ್ದಾಣದ ಬಳಿ ನಡೆದ ಈ ಒಂದು ಮೌನ ಪ್ರತಿಭಟನೆಯಲ್ಲಿ ಸೌಮ್ಯ ರೆಡ್ಡಿ ಜೊತೆ ಎಸ್‌ಟಿ ಸೋಮಶೇಖರ್ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ಬಿಜೆಪಿ ಶಾಸಕ ಸೋಮಶೇಖರ್ ನಡೆ ಭಾರಿ ಕುತೂಹಲ ಮೂಡಿಸಿದೆ.
ಪ್ರತಿಭಟನೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್ ಟಿ ಸೋಮಶೇಖರ್, ಈಗಾಗಲೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುನಿರತ್ನ ಮಾತನಾಡಿರುವ ಧ್ವನಿಯನ್ನು FSL ಗೆ ಕಳುಹಿಸಿದ್ದಾರೆ. ನನಗಂತೂ ನೂರಕ್ಕೆ ನೂರು ಇದೆ ಮುನಿರತ್ನ ಅವರೇ ಮಾತನಾಡಿದ್ದಾರೆ. ನನ್ನ ಕ್ಷೇತ್ರದ ಎಲ್ಲಾ ಸಮುದಾಯದವರು ಇದೊಂದು ಹೀನಾಯ ಕೃತ್ಯ ನೀವು ಇದರಲ್ಲಿ ಭಾಗವಹಿಸಬೇಕು ಎಂದರೆ ನಾನು ಹಿಂದಕ್ಕೆ ಸರಿದುಕೊಳ್ಳಬೇಕಾ? ಎಂದು ಅವರು ಮಾಧ್ಯಮದವರಿಗೆ ಪ್ರಶ್ನಿಸಿದರು.
ಈ ಕ್ಷೇತ್ರದ ದಲಿತ ಮತ್ತು ಜೈ ಭೀಮ ಕಮಿಟಿವರು, ದಲಿತ ಸಂಘಟನೆ ಅವರು ನನ್ನ ಕಚೇರಿಗೆ ಬಂದು ನಮ್ಮ ವಿರುದ್ಧ ನಮ್ಮ ಕಮ್ಯೂನೀಟಿ ವಿರುದ್ಧ ಮಾತನಾಡಿದ್ದಾರೆ ಅಂದರೆ ನಾನು ಹಿಂದೆ ಸರಿದಯಬೇಕಾ? ಮಹಿಳೆಯರು ಎಲ್ಲರೂ ಬಂದು ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ ಅಂದರೆ ನಾನು ಹಿಂದೆ ಸರಿದು ಕೊಳ್ಳಬೇಕಾ ಎಂದು ಪ್ರಶ್ನಿಸಿದರು.