ಮೈಸೂರು : ಲೋಕಸಭಾ ಚುನಾವಣೆಯಲ್ಲಿ ಪ್ರತಾಪ್ ಸಿಂಹ ವಿರುದ್ಧ ಡಾಲಿ ಧನಂಜಯ ಸ್ಪರ್ಧಿಸುತ್ತಾರೆ ಎಂಬ ಗಾಳಿಸುದ್ದಿ ಹರಡಿದೆ. ಈ ಬಗ್ಗೆ ಮೊದಲ ಬಾರಿಗೆ ಧನಂಜಯ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.ನಾನು ಕಾಮನ್ ಮ್ಯಾನ್ ಆಗಿ ಇರುಲು ಇಷ್ಟಪಡುತ್ತೇನೆ. ಚುನಾವಣೆಯಲ್ಲಿ ನಿಲ್ಲುವ ಬಗ್ಗೆ ನಿರ್ಧಾರ ಮಾಡಿಲ್ಲ ಎಂದು ಅವರು ಹೇಳಿದ್ದಾರೆ.
ಬಾಹ್ಯಾಕಾಶ ಕ್ಷೇತ್ರದಲ್ಲಿ 100% ಎಫ್‌ಡಿಐಗೆ ‘ಅನುಮೋದನೆ’ ನೀಡಿದ ಕೇಂದ್ರ ಸಂಪುಟ | FDI in Space Sector
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೇರೆ ಅಭ್ಯರ್ಥಿಗಳ ಪರವಾಗಿ ನಾನು ಚುನಾವಣಾ ಪ್ರಚಾರಗಳಿಗೆ ಹೋಗಿಲ್ಲ. ಯಾರೂ ಕರೆದಿಲ್ಲ ಅಂತೇನೂ ಇಲ್ಲ. ನನಗೂ ಎಲ್ಲ ಪಕ್ಷಗಳಲ್ಲಿ ಗೆಳೆಯರು ಇದ್ದಾರೆ. ಕರೆದಿದ್ದರೂ ಕೂಡ ನಾನು ಎಲೆಕ್ಷನ್ ಪ್ರಚಾರಕ್ಕೆ ಹೋಗಿಲ್ಲ. ಯಾಕೆಂದರೆ, ಅದರಲ್ಲಿ ತೊಡಗಿಕೊಳ್ಳಲು ನನಗೆ ಇಷ್ಟ ಇಲ್ಲ. ಈ ಬಾರಿ ಕೂಡ ಎಲೆಕ್ಷನ್ ಕ್ಯಾಂಪೇನ್ಗೆ ಹೋಗುವ ಬಗ್ಗೆ ಆಲೋಚನೆ ಮಾಡಿಲ್ಲ’ ಎಂದು ಡಾಲಿ ಧನಂಜಯ ಹೇಳಿದ್ದಾರೆ.
BREAKING : ಬೆಂಗಳೂರಲ್ಲಿ ‘ಬಿಯರ್’ ಗೆ ಮಿಕ್ಸ್ ಮಾಡಲು ನೀರು ಕೊಡದಿದ್ದಕ್ಕೆ ಯುವಕನಿಗೆ ಚಾಕು ಇರಿದ ಸ್ನೇಹಿತರು
ಕರ್ನಾಟಕ ಸರ್ಕಾರದ ಲಿಡ್ಕರ್ ಉತ್ಪನ್ನಗಳಿಗೆ ಧನಂಜಯ್ ಅವರು ಪ್ರಚಾರ ರಾಯಭಾರಿ ಆಗಿದ್ದಾರೆ. ಇತ್ತೀಚೆಗೆ ಬಜೆಟ್ ಮಂಡನೆ ವೇಳೆ ಸಿಎಂ ಸಿದ್ದರಾಮಯ್ಯ ಅವರು ಡಾಲಿ ಬರೆದ ಸಾಲುಗಳನ್ನು ಓದಿದ್ದರು. ಈ ಎಲ್ಲ ಕಾರಣಗಳಿಂದಾಗಿ ಧನಂಜಯ್ ಹೆಸರು ರಾಜಕೀಯ ವಲಯದಲ್ಲಿ ಹೆಚ್ಚು ಕೇಳಿಬರಲು ಆರಂಭಿಸಿದೆ. ತಮ್ಮ ಬಗ್ಗೆ ಹಬ್ಬಿದ್ದ ಗಾಸಿಪ್ಗಳಿಗೆ ಅವರು ಉತ್ತರ ನೀಡಿದ್ದಾರೆ.
ನಿರುದ್ಯೋಗಿಗಳಿಗೆ ಗುಡ್ ನ್ಯೂಸ್: ಫೆ. 26 ರಿಂದ ಬೆಂಗಳೂರಿನಲ್ಲಿ ಎರಡು ದಿನಗಳ ‘ಉದ್ಯೋಗ ಮೇಳ’