ಬೆಂಗಳೂರು : ನಾಳೆ ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮದ ಅಂಗವಾಗಿ ಕಾಂಗ್ರೆಸ್ ಎಂಎಲ್ಸಿ ಬಿಕೆ ಹರಿಪ್ರಸಾದ್ ಕೆಲವು ದಿನಗಳ ಹಿಂದೆ ಗೋದ್ರಾ ಹತ್ಯಾಕಾಂಡ ಘಟನೆ ರೀತಿ ನಡೆಯಬಹುದು ಎಂಬ ವಿವಾದಾತ್ಮಕ ಹೇಳಿಕೆ ಕುರಿತಂತೆ ನಿನ್ನೆ ಅವರನ್ನು ಸಿಸಿಬಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು.ಈ ವಿಷಯಕ್ಕೆ ಸಂಬಂಧಿಸಿದಂತೆ ಇದೀಗ ಬಿಕಾರಿ ಪ್ರಸಾದವರು ಸಿಬಿಎಂ ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಕುರಿತಂತೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಅಧಿಕಾರಕ್ಕೆ ಬಂದ ವಲಸೆಪ್ರಾಣಿ ಅಲ್ಲ ಎಂದು ಸಿಎಂ ವಿರುದ್ಧ ಎಂಎಲ್ಸಿ ಬಿ ಕೆ ಹರಿಪ್ರಸಾದ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರೆ.ಅಧಿಕಾರಕ್ಕಾಗಿ ಬೇರೆಬೇರೆ ಪಕ್ಷಗಳನ್ನು ನಾನು ಬದಲಾವಣೆ ಮಾಡುವುದಿಲ್ಲ.
ಕೆಲವರು ಕಾಂಗ್ರೆಸ್ ನಮ್ಮದು ಅಂತಿದ್ದಾರೆ.ಅದಕ್ಕೆ ನಮ್ಮ ಅಸಮಾಧಾನವಿದೆ.ಯಾವುದು ಸಮಾಧಾನ ಅಸಮಾಧಾನ ಅಂತ ತಿಳಿದವರಿಗೆ ಗೊತ್ತಾಗುತ್ತದೆ ಎಂದು ಆಕ್ರೋಶ ಹೊರಹಕಿದ್ದಾರೆ.ಸಿದ್ದರಾಮಯ್ಯ ಈ ರಾಜ್ಯದ ಮುಖ್ಯಮಂತ್ರಿ ಅವರ ಮೇಲೆ ಯಾಕೆ ಸಿಟ್ಟಾಗೋಣ? ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಬಿಕೆ ಹರಿಪ್ರಸಾದ್ ತಿರುಗೇಟು ನೀಡಿರುವ ಪ್ರಸಂಗ ಜರುಗಿತು.