ಬೆಂಗಳೂರು : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಕುರಿತು ಪ್ರಚಾರಕ್ಕೆ ಕೇಂದ್ರದಿಂದ ಹಲವು ನಾಯಕರು ಭೇಟಿ ನೀಡಿದ್ದು ಇದೀಗ ಕೇಂದ್ರ ಕ್ರೀಡಾ ಸಚಿವರಾದ ಅನುರಾಗ ಠಾಕೂರ್ ಕೂಡ ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿಯಾಗಿರುವ ತೇಜಸ್ವಿ ಸೂರ್ಯ ಅವರ ಕುರಿತು ಪ್ರಚಾರಕ್ಕೆ ನಿನ್ನೆ ಬೆಂಗಳೂರಿಗೆ ಆಗಮಿಸಿದ್ದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ದೇಶದಲ್ಲಿ ಒಂದೇ ಗ್ಯಾರಂಟಿ ನಡೆಯುತ್ತದೆ ಅದು ಮೋದಿ ಗ್ಯಾರಂಟಿ ಮಾತ್ರ ನಡೆಯುತ್ತದೆ.ಕಾಂಗ್ರೆಸ್ ಗ್ಯಾರಂಟಿಗಳೆಲ್ಲ ಭ್ರಷ್ಟಾಚಾರದಿಂದ ಕೂಡಿದೆ. ಕಾಂಗ್ರೆಸ್ ಗ್ಯಾರಂಟಿಗಳೆಲ್ಲ ವಿಫಲವಾಗಿವೆ. ಕಾಂಗ್ರೆಸ್ನಂತೆ ಅವರ ಗ್ಯಾರಂಟಿಗಳು ಫೇಲ್ ಆಗಿವೆ ಎಂದು ಕಾಂಗ್ರೆಸ್ ಗ್ಯಾರಂಟಿ ವಿರುದ್ಧ ಠಾಕೂರ್ ವ್ಯಂಗ್ಯವಾಡಿದರು.
ಆಂಜನೇಯನನ್ನು ಈ ರೀತಿ ಪೂಜಿಸುವುದರಿಂದ ವಾಹನಗಳಿಂದ ಆಗುವ ಎಲ್ಲಾ ಅಪಘಾತಗಳು ನಿವಾರಣೆ
ಮೋದಿ ಗ್ಯಾರಂಟಿ ಶಾಶ್ವತ
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ತೇಜಸ್ವಿ ಸೂರ್ಯ ಅವರ ಪರವಾಗಿ ರಾಜ್ಯಸಭಾ ಸದಸ್ಯ ಜಗ್ಗೇಶ್ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದು ಈ ವೇಳೆ ಗ್ಯಾರಂಟಿ ಯೋಜನೆಗಳ ಕುರಿತು ಅವರು ಲೇವಡಿ ಮಾಡಿದರು.
ಮತದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರದ ಗ್ಯಾರೆಂಟಿಗಳ ಕುರಿತು ಸಂಸದ ಜಗ್ಗೇಶ್ ಲೇವಡಿ ಮಾಡಿದ್ದು ಕುರಿ ಬಲಿ ಕೊಡುವ ಮೊದಲು ಮೆರವಣಿಗೆ ಮಾಡುತ್ತಾರಲ್ಲಾ ಹಾಗೆ ಹರಕೆ ಕುರಿಗೆ ಹಾರ ಹಾಕಿ ಮೆರವಣಿಗೆ ಮಾಡುತ್ತಾರೆ. ಮತದಾರರಿಗೆ ಹೀಗೆ ಹಾಕುತ್ತಿರುವುದೇ ಫ್ರೀ ಬಸ್ ಎಂದರು.
ಮತದಾರರನ್ನು ಬಲಿಹಾಕಲು ಗ್ಯಾರಂಟಿ ನೀಡಲಾಗಿದೆ.ಎಷ್ಟೇ ಫ್ರೀ ಸ್ಕೀಮ್ ಕೊಟ್ಟರು ಮೋದಿ ಗ್ಯಾರಂಟಿ ಶಾಶ್ವತವಾಗಿರುತ್ತದೆ. ಫ್ರೀ ಬೀಸ್ ಇಟ್ಕೊಂಡ್ರೆ ಸ್ವಾಭಿಮಾನ ಮಾರಿಕೊಂಡಂತೆ ಎಂದು ಬೆಂಗಳೂರಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಕುರಿತು ರಾಜ್ಯಸಭಾ ಸದಸ್ಯ ಜಗ್ಗೇಶ್ ಲೆವಡಿ ಮಾಡಿದರು.
ಕಲಬುರಗಿ : ‘ತಲ್ವಾರ್’ ನಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ : ‘Birthday Boy’ ನನ್ನು ಬಂಧಿಸಿದ ಪೊಲೀಸರು