ಮಂಡ್ಯ : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಪ್ರಜ್ವಲ್ ಅಶ್ಲೀಲ ವಿಡಿಯೋಗಳು ಇರುವ ಪೆನ್ ಡ್ರೈವ್ ಬಿಡುಗಡೆ ಹೇಳಿಕೆ ಕೊಟ್ಟಾಗ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹಾಗೂ ಎಚ್ ಡಿ ಕುಮಾರಸ್ವಾಮಿ ಏನು ಕತ್ತೆ ಕಾಯುತಿದ್ರ? ಎಂದು ಮಾಜಿ ಸಂಸದ ಶಿವರಾಮೇಗೌಡ ಆಕ್ರೋಶ ಹೊರ ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಮುಂದೆ ರಮೇಶ್ ರೆಡ್ಡಿ ಕೂಡ ಶೂನ್ಯ ಎಂದು ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ಪ್ರತಿಕ್ರಿಯೆ ನೀಡಿದರು. ಪ್ರಜ್ವಲ್ ಇಷ್ಟೆಲ್ಲ ಮಾಡುತ್ತಿದ್ದಾರೆ ಅವರ ಅಪ್ಪ ಅಮ್ಮ ಕತ್ತೆ ಕಾಯ್ತಿದ್ರಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಂದು ಕಡೆ ಅಪ್ಪ ಮತ್ತೊಂದು ಕಡೆ ಮಗ ದೊಡ್ಡಗೌಡರನ್ನ ಚಿಂತೆ ಮಾಡುವ ಪರಿಸ್ಥಿತಿಗೆ ತಂದಿದ್ದಾರೆ. ಅವರು ಮಾಡಿರುವ ಪಾಪ ಅವರೇ ಅನುಭವಿಸುತ್ತಿದ್ದಾರೆ.ದೇವರಾಜ ಗೌಡ ಪೆನ್ ಡ್ರೈವ್ ಬಿಡುವ ಹೇಳಿಕೆಯನ್ನು ಕೊಟ್ಟಿದ್ದರು ಅವಾಗ ದೇವೇಗೌಡರು ಕುಮಾರಸ್ವಾಮಿ ಕತ್ತೆ ಕಾಯುತಿದ್ರ? ಎಂದು ಕಿಡಿ ಕಾರಿದರು.
ಪೆನ್ ಡ್ರೈವ್ ಬಿಡುಗಡೆ ಬಗ್ಗೆ ಗೊತ್ತಿದ್ದ HD ಕುಮಾರಸ್ವಾಮಿ ಆಗಲೇ ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕಿತ್ತು.ವಿಡಿಯೋ ಬಿಡುಗಡೆ ಆಗಬೇಕೆಂದು ಎಚ್ ಡಿ ಕುಮಾರಸ್ವಾಮಿಗೂ ಇತ್ತೇನೋ ಅನಿಸುತ್ತದೆ.ಇದಿಗ ಎಚ್ ಡಿ ಕುಮಾರಸ್ವಾಮಿ ಸಂತ್ರಸ್ತ ಮಹಿಳೆಯರ ಪರ ಬರಬೇಕು ಎಂದು ಆಗ್ರಹಿಸಿದರು.