ಬೆಂಗಳೂರು : 1,823 ಕೋಟಿ ತೆರಿಗೆ ಕಟ್ಟುವಂತೆ ಕಾಂಗ್ರೆಸ್ಗೆ IT ನೋಟಿಸ್ ವಿಚಾರ ಸಂಬಂಧ ಬಿಜೆಪಿಯವರು 8,200 ಕೋಟಿ ತೆಗೆದುಕೊಂಡಿದ್ದಾರೆ ಅವರಿಗೆ ನೋಟಿಸ್ ಯಾಕಿಲ್ಲ? ನಾವು ಯಾವ ದೇಶದಲ್ಲಿದ್ದೇವೆ ಅನ್ನೋದೇ ಕನ್ಫ್ಯೂಸ್ ಆಗುತ್ತಿದೆ ಎಂದು ಬೆಂಗಳೂರಿನಲ್ಲಿ ಗ್ರಹ ಇಲಾಖೆಯ ಸಚಿವ ಡಾಕ್ಟರ್ ಜಿ ಪರಮೇಶ್ವರ್ ತಿಳಿಸಿದರು.
ಸುದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಯಾರು ಹಣ ಕೊಡುವಂತಿಲ್ಲ. ಚುನಾವಣೆ ಬಾಂಡ್ ಕೊಡಬಹುದು ಎಂದು ಹೇಳಿದ್ದರು. ಆಗ ಎಲ್ಲಾ ಪಕ್ಷಗಳು ದೇಣಿಗೆಯನ್ನು ಬಾಂಡ್ ರೂಪದಲ್ಲಿ ಪಡೆದರು. ಈಗ ಚುನಾವಣೆ ಬಾಂಡ್ ತಪ್ಪು ಎಂದು ಹೇಳುತ್ತಿದ್ದಾರೆ ಎಂದು ಅವರು ತಿಳಿಸಿದರು.
ಕಾಲೇಜು ವಿದ್ಯಾರ್ಥಿಗೆ ಬಂತು 46 ಕೋಟಿ ಮೊತ್ತದ ಟ್ಯಾಕ್ಸ್ ನೋಟಿಸ್! ಮುಂದೆನಾಯ್ತು?
ಬಿಜೆಪಿಯವರೇ ಹೆಚ್ಚು ದೇಣಿಗೆಯನ್ನು ಪಡೆದಿದ್ದಾರೆ. ಬಿಜೆಪಿಯವರು 8,200 ಕೋಟಿ ತೆಗೆದುಕೊಂಡಿದ್ದಾರೆ ಏಕಾಂಗಿ ಕಾಂಗ್ರೆಸ್ಗೆ ಅಷ್ಟೇ ಏಕೆ ನೋಟಿಸ್ ಬಂತು?ಕೊಡುವುದಾದರೆ ಬಿಜೆಪಿಗೂ ನೋಟಿಸ್ ಕೊಡಬೇಕಲ್ಲವಾ? ಇದು ರಾಜಕೀಯ ದುರುದ್ದೇಶ ಅಲ್ಲದೆ ಮತ್ತೇನು ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದರು.