ರಾಯಚೂರು : ಜೈ ಶ್ರೀರಾಮ್ ಘೋಷಣೆ ಕೂಗುವವರನ್ನ ಪೊಲೀಸರು ಬೂಟುಗಾಲಲ್ಲಿ ಒದ್ದು ಒಳಗೆಹಾಕಬೇಕು ಎಂಬ ಉದ್ಧಟತನದ ಹೇಳಿಕೆ ನೀಡಿದ್ದ ರಾಯಚೂರು ಕಾಂಗ್ರೆಸ್ ಮುಖಂಡ ಬಷಿರುದ್ದೀನ್ ಬಿಜೆಪಿ ಮುಖಂಡರ ಆಕ್ರೋಶ ಗುರಿಯಾಗಿದ್ದಾರೆ.
ಕಾಂಗ್ರೆಸ್ ಮುಖಂಡ ಬಷಿರುದ್ದೀನ್ ಹೇಳಿಕೆಯನ್ನು ಖಂಡಿಸಿ ಈಗಾಗ್ಲೇ ರಾಯಚೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ಬಿಜೆಪಿಯಿಂದ ಧರಣಿ ನಡೆಸಲಾಗುತ್ತಿದೆ. ಲೋಕಸಭ ಬಿಜೆಪಿ ಅಭ್ಯರ್ಥಿ ಅಣ್ಣಾಮಲೈ ನೇತೃತ್ವದಲ್ಲಿ ದೂರು ನೀಡಲು ಇದೀಗ ಬಿಜೆಪಿ ಮುಂದಾಗಿದೆ.
ಕೆಲವೇ ಕ್ಷಣಗಳಲ್ಲಿ ಅಣ್ಣಾಮಲೈ ಅವರು ರಾಯಚೂರು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಲಿದ್ದಾರೆ.ಡಿಸಿ ಕಚರಿಗೆ ಆಗಮಿಸಿ ಬಿಜೆಪಿ ದೂರು ನೀಡಲಿದೆ. ಇದೆ ವೇಳೆ ರಾಯಚೂರು ಶಾಸಕ ಶಿವರಾಜ ಪಾಟೀಲ್ ಹಾಗೂ ಬಿಜೆಪಿ ಕಾರ್ಯಕರ್ತರು ಈಗಾಗಲೇ ಆಗಮಿಸಿದ್ದಾರೆ.
ಕೆಲದಿನಗಳ ಹಿಂದೆ ನಗರ ಸಭೆಯಲ್ಲಿ ಕಾಂಗ್ರೆಸ್ ಮುಖಂಡ ಬಷಿರುದ್ಧೀನ್ ಉದ್ದಟತನದ ಹೇಳಿಕೆ ನೀಡಿದ್ದರು. ಜೈ ಶ್ರೀರಾಮ ಅಂದವರನ್ನ ಪೊಲೀಸರು ಬೂಟುಗಾಲಲ್ಲಿ ಒದ್ದು ಒಳಗೆ ಹಾಕಬೇಕು ಅಂತಾ. ಬಷಿರುದ್ಧೀನ್ ವಿಡಿಯೋ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಹಿಂದೂ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.