ಬೆಂಗಳೂರು : ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲದಿದ್ದರೆ ಗ್ಯಾರಂಟಿ ಯೋಜನೆಗಳು ರದ್ದಾಗುತ್ತವೆಂಬ ಹೇಳಿಕೆಯನ್ನು ಶಾಸಕ ಎಸ್ ಸಿ ಬಾಲಕೃಷ್ಣ ತಿಳಿಸಿದರು. ಇದೀಗ ಅವರ ಹೇಳಿಕೆಯನ್ನು ಅವರೇ ಸಮರ್ಥಿಸಿಕೊಂಡಿದ್ದು, ನಾವು ಗ್ಯಾರಂಟಿ ಕೊಟ್ಟಿದ್ದು ಚುನಾವಣೆಗಾಗಿಯೇ. ಲೋಕಸಭೆಯಲ್ಲಿ ಜನ ಮತ ಹಾಕಿಲ್ಲ ಎಂದರೆ ಗ್ಯಾರಂಟಿ ಅವಶ್ಯಕತೆ ಇಲ್ಲಾ ಎಂದರ್ಥ ಎಂದು ಮಾಗಡಿ ಶಾಸಕ ಹೆಚ್‌ಸಿ ಬಾಲಕೃಷ್ಣ ಹೇಳಿದ್ದಾರೆ.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಪೂರ್ತಿ ಆಗದ ದೇವಸ್ಥಾನವನ್ನು ತರಾತುರಿಯಲ್ಲಿ ಉದ್ಘಾಟನೆ ಮಾಡಿದ್ದು ಚುನಾವಣೆಗಾಗಿ. ಅವರು ಮಾಡಿರುವುದು ಚುನಾವಣೆಗಾಗಿ. ನಾವು ಗ್ಯಾರಂಟಿ ಕೊಟ್ಟಿದ್ದು ಚುನಾವಣೆಗಾಗಿಯೇ. ಸಿಎಂ ಡಿಸಿಎಂ ಇಬ್ಬರ ಹತ್ತಿರವೂ ಈ ವಿಚಾರ ಚರ್ಚೆ ಮಾಡಿದ್ದೇನೆ. ಅವರು ಏನೇ ಹೇಳದಿರಬಹುದು. ನನ್ನ ವೈಯುಕ್ತಿಕ ಅಭಿಪ್ರಾಯ ಲೋಕಸಭೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ ಆದರೆ ಜನರಿಗೆ ಗ್ಯಾರಂಟಿ ಬೇಡವಾಗಿದೆ ಎಂದು ತೀರ್ಮಾನ ಮಾಡಬೇಕು ಎಂದರು.
ಗ್ಯಾರಂಟಿ ಬದಲು ಅಭಿವೃದ್ಧಿಗೆ ಹಣ ಬಳಸಲಿ ಅನ್ನೋದು ನನ್ನ ವೈಯುಕ್ತಿಕ ಅಭಿಪ್ರಾಯ. ನಾವು ಗ್ಯಾರಂಟಿ ಕೊಟ್ಟಿರೋದೇ ಚುನಾವಣೆ ಗೆಲ್ಲೋಕೆ. ಅವರು ದೇವಸ್ಥಾನ ಉದ್ಘಾಟನೆ ಮಾಡಿದ್ದು, ಮಂತ್ರಾಕ್ಷತೆ ಕೊಟ್ಟಿದ್ದು ಚುನಾವಣೆ ಗೆಲ್ಲೋಕೆ. ಬಿಜೆಪಿಯವರು (BJP) ಲೋಕಸಭೆ ಚುನಾವಣೆ ದೃಷ್ಟಿಯಿಂದ ದೇವಸ್ಥಾನ9 ಉದ್ಘಾಟನೆ ಮಾಡಿದರು. ನಮ್ಮ ದೀಪ ನಾವೆ ಹಚ್ಚಬೇಕು. ನಮ್ಮ ಕುಂಕುಮ ನಮಗೆ ನಾಮ ಹಾಕಿ ಅವರು ಅಧಿಕಾರಕ್ಕೆ ಬಂದರು ಎಂದು ಕಿಡಿಕಾರಿದರು.
ಗ್ಯಾರಂಟಿಯಿಂದಾಗಿ ಅಭಿವೃದ್ಧಿಗೆ ಹಣ ಕೊರತೆ ಆಗುತ್ತಿದೆ. 60 ಸಾವಿರ ಕೋಟಿ ಹಣ ಗ್ಯಾರಂಟಿಗೆ ಬೇಕು. ಜನ ಈ ಗ್ಯಾರಂಟಿಗೆ ಮತ ಹಾಕಿಲ್ಲ ಎಂದರೆ ಅದೇ ಹಣವನ್ನು ಅಭಿವೃದ್ಧಿಗೆ ಬಳಸೋಣ. ನನ್ನ ಕ್ಷೇತ್ರಕ್ಕೂ 500 ಕೋಟಿ ಅಭಿವೃದ್ಧಿಗೆ ಸಿಗುತ್ತದೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.