ಚಿಕ್ಕಮಗಳೂರು : ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ದೇಶದ ಎಲ್ಲಾ ದೇವಸ್ಥಾನಗಳಲ್ಲಿ ಅಂದು ಹೋಮ ಹವನ ಹಾಗೂ ಪೂಜೆ ಕೈಗೊಳ್ಳಲಾಗಿತ್ತು. ಅದರಂತೆ ಚಿಕ್ಕಮಂಗಳೂರು ಜಿಲ್ಲೆಯ ಬಾಬಾಬುಡನ್ ಸ್ವಾಮಿ ದರ್ಗಾ ಇನಾಂ ದತ್ತಾತ್ರೇಯ ಪೀಠದಲ್ಲಿ ರಾಮ ತಾರಕ ಹೋಮಕ್ಕೆ ಚಿಕ್ಕಮಂಗಳೂರು ಜಿಲ್ಲಾಡಳಿತ ನಿರಾಕರಿಸಿತ್ತು.
ಚಿಕ್ಕಮಂಗಳೂರು ಜಿಲ್ಲಾಡಳಿತ ಈ ಒಂದು ನಡೆಗೆ ಹಿಂದೂ ಪರಿಷತ್ ಹಾಗೂ ಬಜರಂಗದಳ ಕಾರ್ಯಕರ್ತರನ್ನು ಕೆರಳಿಸಿದ್ದು ಅಂದು ಪ್ರತಿಭಟನೆ ನಡೆಸಿದರು.ಈ ವೇಳೆ ಪ್ರತಿಭಟನಾ ನಿರತರ ಪೈಕಿ ಇವರ ಮೇಲೆ ಪೊಲೀಸರು fir ದಾಖಳಿಸಿದ್ದರು.ಹೋಮಕ್ಕೆ ನಿರಾಕರಿಸಿದಕ್ಕೆ ಪ್ರತಿಭಟನಾ ನಿರತರ ಪೈಕಿ 5 ಜನರ ಮೇಲೆ ಪೊಲೀಸರು FIR ದಾಖಲಿಸಿದ್ದರು.ಇದನ್ನು ವಿರೋಧಿಸಿ ನಾಳೆ ದತ್ತಪೀಠ ಚಲೋಗೆ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಕರೆ ನೀಡಿವೆ ಎಂದು ತಿಳಿದುಬಂದಿದೆ.
ನಾಳೆ ಹುಣ್ಣಿಮೆ ಹಿನ್ನೆಲೆಯಲ್ಲಿ ದತ್ತ ಗುಹೆಯಲ್ಲಿ ಹೋಮ ನಡೆಸುತ್ತಿದ್ದು, ದತ್ತ ಪಾದುಕೆ ಪೂಜೆಗೆ 500ಕ್ಕೂ ಅಧಿಕ ಹಿಂದು ಕಾರ್ಯಕರ್ತರು ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.ಬಾಲ ರಾಮಮೂರ್ತಿ ಪ್ರತಿಷ್ಠಾಪನೆ ವೇಳೆ ಹೋಮಕ್ಕೆ ನಿರಾಕರಣೆ ಮಾಡಲಾಗಿದ್ದು ದತ್ತಪೀಠದಲ್ಲಿ ರಾಮ ತಾರಕ ಹೋಮಕ್ಕೆ ಜಿಲ್ಲಾಡಳಿತ ನಿರಾಕರಿಸಿತ್ತು. ಜಿಲ್ಲಾಡಳಿತದ ವಿರುದ್ಧ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.ಈ ಕುರಿತಂತೆ ಚಿಕ್ಕಮಂಗಳೂರು ಠಾಣೆಯಲ್ಲಿ ಐವರ ಮೇಲೆ ಎಫ್ ಐ ಆರ್ ದಾಖಲಾಗಿತ್ತು.