ಕೋಲಾರ : ಲೋಕಸಭಾ ಚುನಾವಣೆಗೆ ಕೋಲಾರ ಕ್ಷೇತ್ರ ಕಾಂಗ್ರೆಸ್ ಗೆ ಕಗ್ಗಂಟಾಗಿ ಪ್ರೇಮಿಸಿತ್ತು ಅಲ್ಲದೆ ಐದು ಮಂದಿ ಶಾಸಕರು ರಾಜೀನಾಮೆಗೆ ಮುಂದಾಗಿದ್ದರು, ಇದೀಗ ಟಿಕೇಟ್ ಆಕಾಂಕ್ಷಿಗಳನ್ನು ಹೊರತುಪಡಿಸಿ ಕಾಂಗ್ರೆಸ್ ಹೊಸ ಅಭ್ಯರ್ಥಿಗೆ ಮಣೆ ಹಾಕಿದೆ. ಈ ಕುರಿತಾಗಿ ಶಾಸಕ ಕೊತ್ತೂರು ಮಂಜುನಾಥ್ ಗೌತಮ್ ಯಾರೆಂಬುದೇ ನಮಗೆ ಗೊತ್ತಿಲ್ಲ ಎಂದು ತಿಳಿಸಿದರು.
ಮೊಬೈಲ್ ಬಳಕೆದಾರರೇ ಗಮನಿಸಿ: ಏಪ್ರಿಲ್ 15 ರಿಂದ ಈ ಸೇವೆ ಲಭ್ಯ ಇರೋದಿಲ್ಲ!
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೋಲಾರ ಅಭ್ಯರ್ಥಿ ಕೆವಿ ಗೌತಮ್ ನಮಗೆ ಯಾರೆಂಬುದೇ ತಿಳಿದಿಲ್ಲ ಪರಿಚಯವೇ ಇಲ್ಲ. ಆದರೂ ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧರಿದ್ದೇವೆ ಎಂದು ಶಾಸಕ ಕೊತ್ತೂರು ಮಂಜುನಾಥ್ ಹೇಳಿಕೆ ನೀಡಿದ್ದಾರೆ.
ಪಕ್ಷ ಎರಡು ಬಣಗಳಿಗೂ ಟಿಕೆಟ್ ಕೊಡಲ್ಲ ಅಂತ ಅಂದಿದ್ದರು. ಒಬ್ಬರಿಗೆ ಕೊಡಿ ಎಂದು ನಾವು ವರಿಷ್ಠರಿಗೆ ಕೇಳಿದ್ದೆವು.ಆದರೆ ವರಿಷ್ಠರು ಇಬ್ಬರು ಬಣಕ್ಕು ಕೊಡಲ್ಲ ಅಂತ ಹೇಳಿದ್ದರು.ಹೈಕಮಾಂಡ್ ಯಾವುದೇ ಅಭ್ಯರ್ಥಿಯ ಹೆಸರು ಘೋಷಣೆ ಮಾಡಿದರು ನಾವು ಅದಕ್ಕೆ ಬದ್ಧರಾಗಿದ್ದೇವೆ. ಕೋಲಾರ ಅಭ್ಯರ್ಥಿ ಗೌತಮ್ ನನಗೆ ಪರಿಚಯವೇ ಇಲ್ಲ ಆದರೂ ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದರು.
ಕೆ.ವಿ.ಗೌತಮ್ ಹಿನ್ನೆಲೆ
ಮಾಜಿ ಕಾರ್ಪೊರೇಟರ್ ವಿಜಯ್ ಕುಮಾರ್ ಪುತ್ರ ಕೆ. ಗೌತಮ್ ಆಗಿದ್ದು ಕೋಲಾರ ಎರಡು ಬನಗಳ ಹೊರತುಪಡಿಸಿ ಹೊಸ ಅಭ್ಯರ್ಥಿಗೆ ಕಾಂಗ್ರೆಸ್ ಇಲ್ಲಿ ಮಣೆ ಹಾಕಿದೆ. ಸಂಬಂಧವೇ ಇರದಂತಹ ಅಭ್ಯರ್ಥಿಯನ್ನ ಕಣಕ್ಕಿಳಿಸಿದೆ. ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷರಾಗಿ ಕೆ ವಿ ಗೌತಮ್ ಇದೀಗ ಕಾರ್ಯ ನಿರ್ವಹಿಸುತ್ತಿದ್ದಾರೆ.ಕೋಲಾರ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ ವಿ ಗೌತಮ್ ಕಣಕ್ಕೆ ಇಳಿಸಿದ್ದು ಎರಡು ಬಣಗಳನ್ನ ಬಿಟ್ಟು ಇದೀಗ ಕಾಂಗ್ರೆಸ್ ಪರ್ಯಾಯ ಅಭ್ಯರ್ಥಿಗೆ ಆಯ್ಕೆ ಮಾಡಿದೆ.