ಕಲಬುರ್ಗಿ : ಕಳೆದ ವರ್ಷದಿಂದ ಮಳೆ ಬಾರದೆ ಇಡೀ ರಾಜ್ಯ ತೀವ್ರ ಬರದಿಂದ ಕಂಗೆಟ್ಟು ಹೋಗಿತ್ತು. ಅಲ್ಲದೆ ರೈತರು ಕೂಡ ಮಳೆ ಇಲ್ಲದೆ ಬೆಳೆ ಬೆಳೆಯದೆ ತೀವ್ರ ಸಂಕಷ್ಟವನ್ನು ಎದುರಿಸಿದ್ದರು. ಇದೀಗ ವರುಣನ ಕೃಪೆಯಿಂದ ಮಳೆರಾಯ ಕರುಣೆ ತೋರಿದ್ದು, ಕಲ್ಬುರ್ಗಿ ಜನತೆಗೆ ತಂಪೆರೆದಿದ್ದಾನೆ.
ಹೌದು ಇಂದು ಸಂಜೆ ಸತತ ಒಂದು ಗಂಟೆಗಳ ಕಾಲ ಕಲ್ಬುರ್ಗಿ ನಗರದಲ್ಲಿ ಗುಡುಗು ಸಹಿತ ಮಳೆ ಆಗುತ್ತಿದೆ. ಬಿಸಿಲಿನ ತಾಪದಿಂದ ಜನರು ಮನೆಯಿಂದ ಹೊರಬರದೆ ಮನೆಯಲ್ಲಿಯೇ ಕುಳಿತು ಬೇಸರಗೊಂಡಿದ್ದರು ಇದೀಗ ಮಳೆರಾಯ ಸ್ವಲ್ಪ ಕರುಣೆ ತೋರಿದ್ದರಿಂದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಕಲಬುರ್ಗಿ ಜಿಲ್ಲೆಯಲ್ಲಿ ಅಷ್ಟೇ ಅಲ್ಲದೆ ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ ಕೂಡ ನಿನ್ನೆ ಧಾರಾಕಾರ ಮಳೆ ಸುರಿದಿದೆ ಎಂದು ತಿಳಿದು ಬಂದಿದೆ. ಹುಬ್ಬಳ್ಳಿಯಲ್ಲಿ ಧಾರಾಕಾರ ಮಳೆಯಿಂದ ಕೆಲಕಾಲ ಜನಜೀವನ ಕೂಡ ಅಸ್ತವ್ಯಸ್ಥಗೊಂಡಿತ್ತು.. ಅದೇ ರೀತಿಯಾಗಿ ಚಿಕ್ಕಮಗಳೂರಿನಲ್ಲಿ ಕೂಡ ಇಂದು ಕೆಲಕಾಲ ಮಳೆಯಾಗಿದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಬೇಸಿಗೆ ತಾಪ ಹಾಗೂ ಬರದಿಂದ ಕಂಗೆಟ್ಟ ರಾಜ್ಯಕ್ಕೆ ಕೊಂಚ ಮಳೆಯಾಗುತ್ತಿರುವುದರಿಂದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.