ಕೇಂದ್ರ ಸರ್ಕಾರ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಕೇಂದ್ರ ಸರ್ಕಾರ ಜಾರಿಗೆ ತಂದ ಯೋಜನೆಗಳಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ರೈತರಿಗೆ ವ್ಯವಸಾಯ ಮಾಡುವ ಸಲುವಾಗಿ ಸರ್ಕಾರ ವರ್ಷಕ್ಕೆ 6,000 ರೂ ಧನಸಹಾಯ ನೀಡುತ್ತದೆ. ಆದರೆ, ಪಿಎಂ ಕಿಸಾನ್ ಮಾನಧನ್ ಯೋಜನೆಯಲ್ಲಿ gಸಣ್ಣ ರೈತರಿಗೆ ಮಾಸಿಕ 3,000 ರೂ ಪಿಂಚಣಿ ಕಲ್ಪಿಸಲಾಗುತ್ತದೆಯಾಗಿದೆ.
ಪ್ರಧಾನಮಂತ್ರಿ ಕಿಸಾನ್ ಮಾನಧನ್ ಯೋಜನೆಯಲ್ಲಿ ಎರಡು ಹೆಕ್ಟೇರ್ ಅಥವಾ ಐದು ಎಕರೆವರೆಗೆ ಜಮೀನು ಹೊಂದಿರುವ ರೈತರು ಹಾಗೂ 18 ರಿಂದ 40 ವರ್ಷ ವಯೋಮಿತಿಯ ರೈತರು ನೊಂದಣಿ ಮಾಡಬಹುದು. ಇದರಲ್ಲಿ ಅರ್ಹ ರೈತರು ತಿಂಗಳಿಗೆ 55 ರೂ ನಿಂದ 200 ರೂ ವರೆಗೆ ಹಣವನ್ನು ಪಿಂಚಣಿ ನಿಧಿಗೆ ತುಂಬಿಸುತ್ತಿರಬೇಕು. ಕೇಂದ್ರ ಸರ್ಕಾರ ಕೂಡ ಇಷ್ಟೇ ಹಣವನ್ನು ನಿಧಿಗೆ ಹಾಕುತ್ತದೆ. ಒಂದು ವೇಳೆ 18 ವರ್ಷ ವಯಸ್ಸಿನಲ್ಲಿ ಈ ಯೋಜನೆ ಆರಂಭ ಮಾಡಿದರೆ, ತಿಂಗಳಿಗೆ ಕನಿಷ್ಠ 55 ರೂನಂತೆ ಕಟ್ಟಬೇಕಾಗುತ್ತದೆ. ಒಂದು ವೇಳೆ 40ನೇ ವಯಸ್ಸಿನಲ್ಲಿ ಯೋಜನೆ ಪಡೆದರೆ ತಿಂಗಳಿಗೆ ಕಟ್ಟಬೇಕಾಗಿರುವ ಕನಿಷ್ಠ ಮೊತ್ತ 200 ರೂ ಯಾಗಿದೆ. 60 ವರ್ಷದವರೆಗೆ ಪ್ರತೀ ತಿಂಗಳು ಪಿಂಚಣಿ ನಿಧಿಗೆ ಕಟ್ಟಬೇಕು. ಅದಾದ ಬಳಿಕ ತಿಂಗಳಿಗೆ 3,000 ರೂ ಇಲ್ಲವೇ ಅದಕ್ಕಿಂತ ಹೆಚ್ಚಿನ ಮೊತ್ತದ ಪಿಂಚಣಿಯನ್ನು ರೈತರು ಪಡೆಯಬಹುದಾಗಿದೆ.