ಕಲಬುರಗಿ : ಇತ್ತೀಚಿಗೆ ಕಲ್ಬುರ್ಗಿಯಲ್ಲಿ ಒಂದೇ ದಿನ ಇಬ್ಬರು ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಬಾಲಕ ಸೇರಿದಂತೆ ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು ಏಳು ಆರೋಪಿಗಳನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ.
ಮನೆಯಲ್ಲಾಗುವ ಸಮಸ್ಯೆಗಳು ಮತ್ತು ಹಣಕಾಸಿನ ಸಮಸ್ಯೆಗಳನ್ನು ನಿವಾರಿಸಲು ಮನೆಯಲ್ಲಿ ಸುಲಭ ಪರಿಹಾರ
ಸಂಸದ ಜಾಧವ ಆಪ್ತ ಕೊಲೆ ಆರೋಪಿಗಳ ಬಂಧನ
ಬಿಜೆಪಿ ಸಂಸದ ಉಮೇಶ್ ಜಾಧವ್ ಆಪ್ತ ಎಂದು ಹೇಳಲಾಗುತ್ತಿದ್ದ ಗಿರೀಶ್ ಚಕ್ರ ಎನ್ನುವವರನ್ನು ಕೊಲೆಗೈದ ನಾಲ್ವರು ಆರೋಪಗಳನ್ನು ಇದೀಗ ಪೊಲೀಸ್ ಬಂಧಿಸಿದ್ದಾರೆ. ಘಟನೆಯಲ್ಲಿ ಓರ್ವ ಬಾಲಕ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಸಚಿನ್ ಕಿರಸಾವಳಗೆ, ವಿಶ್ವನಾಥ್ ಅಲಿಯಾಸ್ ಕುಮ್ಯಾ, ಪ್ರಜ್ವಲ್ ಹಾಗೂ ಒಬ್ಬ ಬಾಲಕರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಧಾನಿ ಮೋದಿಗೆ ‘ಕೊಲೆ ಬೆದರಿಕೆ’ ಪ್ರಕರಣ : ಆರೋಪಿ ರಸೂಲ್ ವಿರುದ್ಧ ‘FIR’ ದಾಖಲು
ಫೆಬ್ರವರಿ 29 ರಂದು ಆಫ್ಜಲಪುರ ತಾಲೂಕಿನ ಸಾಗನೂರಿನಲ್ಲಿ ಪಾರ್ಟಿ ಕೊಡುವ ನೆನಪಲ್ಲಿ ಕರೆದು ಗಿರೀಶ್ ಚಕ್ರನನ್ನು ಈ ಹಂತಕರು ಕೊಲೆ ಮಾಡಿದ್ದಾರೆ.ಕಣ್ಣಿಗೆ ಕಾರದಪುಡಿ ಎರಚಿ ಗಿರೀಶ್ ಚಕ್ರನನ್ನು ಹಂತಕರು ಭೀಕರವಾಗಿ ಹತ್ಯೆ ಮಾಡಿದ್ದರು ಎನ್ನಲಾಗಿದೆ. ಘಟನೆ ಕೋರಿದಂತೆ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಇದೀಗ ಪೊಲೀಸ್ರು ನಾಲ್ವರು ಹಂತಕರನ್ನು ಬಂಧಿಸಿದ್ದಾರೆ.
ಮಹಾಂತಪ್ಪ ಆಲೂರ್ ಹಂತಕರ ಬಂಧನ
ಅಲ್ಲದೆ ಇನ್ನೊಂದು ಬಿಜೆಪಿ ಕಾರ್ಯಕರ್ತನ ಕೊಲೆ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದ್ದು ಮಾದನ ಹಿಪ್ಪರಗ ಠಾಣೆಯ ಪೊಲೀಸರಿಂದ 3 ಆರೋಪಿಗಳನ್ನು ಬಂಧಿಸಲಾಗಿದೆ. ಕಲಬುರ್ಗಿ ಜಿಲ್ಲೆ ಆಳಂದ್ ತಾಲೂಕಿನ ಮಾದನಹಿಪ್ಪರಗ ಪೊಲೀಸ್ ಠಾಣೆ ಪೋಲೀಸರು ಬಿಜೆಪಿ ಕಾರ್ಯಕರ್ತ ಮಹಾಂತಪ್ಪ ಕೊಲೆ ಪ್ರಕರಣದಲ್ಲಿ ಮೂವರನ್ನು ಬಂಧಿಸಿದ್ದಾರೆ.
BIG NEWS : ಲೋಕಸಭಾ ಚುನಾವಣೆಗೆ ‘ಬಿಜೆಪಿ’ ಅಭ್ಯರ್ಥಿಗಳ ಪಟ್ಟಿ ನಾಳೆ ಫೈನಲ್ : ಬಿ.ಎಸ್ ಯಡಿಯೂರಪ್ಪ
ಅಜತ್ ಕುಮಾರ್ ಕ್ಷೇತ್ರಿ, ಮಯೂರ್ ಕ್ಷೇತ್ರಿ, ಆಕಾಶ ಕಾಮಟ್ಟಿ ಎನ್ನುವ ಆರೋಪಿಗಳನ್ನು. ಬಂಧಿಸಲಾಗಿದೆ ಫೆಬ್ರವರಿ 29 ಸರಸಂಬ ಹೊರ ವಲಯದಲ್ಲಿ ಬಿಜೆಪಿ ಕಾರ್ಯಕರ್ತ ಮಹಾಂತಪ್ಪ ಆಲೂರೆ ಹತ್ತೆ ಮಾಡಲಾಗಿತ್ತು. ಹಳೆ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದೆ.
ಹತ್ಯೆ ಮಾಡಲು ಅಜಿತ್ ಪುಣೆಯಿಂದ ಸ್ನೇಹಿತರನ್ನು ಕರೆಸಿಕೊಂಡಿದ್ದ ಎನ್ನಲಾಗಿತ್ತಿದೆ. ಕಾರು ಡಿಕ್ಕಿ ಹೊಡೆಸಿ ನಂತರ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಗೈದಿದ್ದಾರೆ. ಇದೀಗ ಮಾದನ ಹಿಪ್ಪರಗ ಠಾಣೆಯ ಪೊಲೀಸರು ಮೂವರನ್ನು ಬಂಧಿಸಿ ಜೈಲಿಗೆಟ್ಟಿದ್ದಾರೆ ಎಂದು ತಿಳಿದುಬಂದಿದೆ.