ಮುಂಬೈ : ವಿರೋಧ ಪಕ್ಷದ ನಾಯಕರು ಚುನಾವಣಾ ಆಯೋಗ, ಐಟಿ, ಸಿಬಿಐ, ಇಡಿ ದಾಳಿಗೆ ಹೆದರಿ ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ ಹೊರತು, ಬಿಜೆಪಿಯ ತತ್ವ ಸಿದ್ಧಾಂತಗಳನ್ನು ಇಷ್ಟಪಡುವ ಕಾರಣಕ್ಕೆ ಹೋಗುತ್ತಿಲ್ಲ ಎಂದು ಎನ್ಸಿಪಿ ಸಂಸದೆ ಸುಪ್ರಿಯಾ ಸುಳೆ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದ ಜನತೆಯ ಹಿತ ಕಾಪಾಡುವುದೇ ನಮ್ಮ ಮೊದಲ ಆದ್ಯತೆ – ಸಚಿವ ದಿನೇಶ್ ಗುಂಡೂರಾವ್
ಚುನಾವಣಾ ಪ್ರಚಾರ ಸಿದ್ಧತೆ ನಡೆಸುತ್ತಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅರವಿಂದ್ ಕೇಜ್ರಿವಾಲ್ ಬಂಧನ ಪ್ರಕರಣದ ಕುರಿತು ಮಾತನಾಡುತ್ತಾ, ಬಿಜೆಪಿಯಿಂದ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ. ಬಿಜೆಪಿಗೆ ಹೋದವರು ಪ್ರೀತಿಯಿಂದಾಗಿ, ತತ್ವ ಸಿದ್ಧಾಂತಗಳನ್ನು ಇಷ್ಟಪಡುವ ಕಾರಣಕ್ಕಾಗಲಿ ಹೋಗುತ್ತಿಲ್ಲ. ಭಾರತೀಯ ಚುನಾವಣಾ ಆಯೋಗ, ಐಟಿ, ಇಡಿ, ಸಿಬಿಐ ತನಿಖಾ ಸಂಸ್ಥೆಗಳು ಎಲ್ಲವೂ ಅವರ ಬಳಿಯೇ ಇದೆ. ಇವುಗಳನ್ನು ಬಳಸಿ ಬಿಜೆಪಿ ದಾಳಿ ಮಾಡಿಸುತ್ತಾರೆ ಅಂತಾ ಹೆದರಿ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಕಿಡಿ ಕಾರಿದರು.
ಕೆ.ಎಸ್ ಈಶ್ವರಪ್ಪ ಸ್ವತಂತ್ರವಾಗಿ ಸ್ಪರ್ಧಿಸದಂತೆ ಮನವೊಲಿಕೆ : ರಾಜ್ಯ ಬಿಜೆಪಿ ಉಸ್ತುವಾರಿ ಅಗರ್ವಾಲ್ ವಿಶ್ವಾಸ
ಇದೇ ಕಾರಣಕ್ಕಾಗಿ ಕಳೆದ ತಿಂಗಳು ಅಶೋಕ್ ಶಂಕರರಾವ್ ಚವ್ಹಾಣ್ ಅವರೂ ಬಿಜೆಪಿ ಸೇರಿದರು. ಬಿಜೆಪಿಯವರು ಎಲ್ಲಾ ಪಕ್ಷಗಳನ್ನು ಹೀಗೆ ಒಡೆಯುತ್ತಿದ್ದಾರೆ. ಇದು ರಾಜಕೀಯವಲ್ಲ ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ವಾಗ್ದಾಳಿ ನಡೆಸಿದ್ದಾರೆ.2009 ರಿಂದ ಪ್ರತಿನಿಧಿಸುತ್ತಿರುವ ಬಾರಾಮತಿ ಸಂಸದೀಯ ಕ್ಷೇತ್ರದಿಂದ ಹಿರಿಯ ರಾಜಕಾರಣಿ ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಳೆ ಮತ್ತೆ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. 1996 ರಿಂದ 2009ರ ವರೆಗೆ ಈ ಕ್ಷೇತ್ರದಲ್ಲಿ ಶರದ್ ಪವಾರ್ ಪ್ರತಿನಿಧಿಸಿದ್ದರು.