ಭಾರತೀಯ ರೈಲ್ವೆಯ ಆಡಳಿತದಡಿ ಕಾರ್ಯನಿರ್ವಹಿಸುವ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) 1957ರಲ್ಲಿ ಸ್ಥಾಪನೆಯಾಗಿದ್ದು, ರೈಲ್ವೆ ಸಚಿವಾಲಯದ ನಿಯಂತ್ರಣದಲ್ಲಿದೆ. ರೈಲ್ವೆಗೆ ಸಂಬಂಧಿಸಿದ ಉಪಕರಣಗಳಿಗೆ ಧಕ್ಕೆಯಾಗದಂತೆ ತಡೆಯುವ ಜತೆಗೆ ಆಸ್ತಿಯನ್ನು ಒತ್ತುವರಿ ಮಾಡದಂತೆ ಸಂರಕ್ಷಣೆ ಮಾಡುವ ಜವಾಬ್ದಾರಿ ನಿರ್ವಹಿಸುತ್ತದೆ. 1989ರ ರೈಲ್ವೆ ಕಾಯ್ದೆಯಡಿ ಅಪರಾಧಿಗಳನ್ನು ಹುಡುಕುವ, ಬಂಧಿಸುವ ಹಾಗೂ ವಿಚಾರಣೆ ಮಾಡುವ ಅಧಿಕಾರ ಹೊಂದಿದೆ.
ಪ್ರಸ್ತುತ ಖಾಲಿ ಇರುವ ಹುದ್ದೆಗಳ ನೇಮಕಾತಿ ಕುರಿತು ಪ್ರಕಟಣೆ ಹೊರಡಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಅರ್ಜಿ ಸಲ್ಲಿಸಬಹುದು. ಒಟ್ಟು 2,250 ಹುದ್ದೆಗಳಿವೆ. ಕಾನ್ಸ್‌ಟೇಬಲ್ – 2000, ಸಬ್ ಇನ್‌ಸ್ಟೆಕ್ಟರ್ – 250 ಹುದ್ದೆಗಳಿವೆ. ಕಾನ್‌ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ ಅಥವಾ ಶೈಕ್ಷಣಿಕ ಸಂಸ್ಥೆಯಲ್ಲಿ ಎಸ್‌ಎಸ್‌ಎಲ್‌ಸಿ ಪೂರ್ಣಗೊಳಿಸಿರಬೇಕು. ಸಬ್ ಇನ್‌ಸ್ಟೆಕ್ಟರ್ ಹುದ್ದೆ ಆಕಾಂಕ್ಷಿಗಳು ಪದವಿ ಪಡೆದಿರಬೇಕು. ಆರ್‌ಪಿಎಫ್ ನಿಯಮಾನುಸಾರ ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ ವೇತನ ಪಾವತಿಸಲಾಗುತ್ತದೆ. ಕಾನ್‌ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ 18 ರಿಂದ 25 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, ಎಸ್‌ಐ ಹುದ್ದೆಗೆ ಅರ್ಜಿ ಸಲ್ಲಿಸುವವರು 20 ರಿಂದ 25 ವರ್ಷದೊಳಗಿರಬೇಕು. ಎಸ್‌ಸಿ-ಎಸ್‌ಟಿ ಅಭ್ಯರ್ಥಿಗಳಿಗೆ 5ವರ್ಷ, ಒಬಿಸಿಗಳಿಗೆ 3ವರ್ಷ, ಸೈನಿಕ, ಮಹಿಳಾ, ವಿಧವೆ, ಅಂಗವಿಕಲ ಸೇರಿ ಇತರ ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಅನ್ವಯವಾಗಲಿದೆ. ಆರ್ಪಿಎಫ್ನ ಅಧಿಕೃತ ವೆಬ್‌ಸೈಟ್ https://rpf.indianrailways.gov.in/RPF/ ಭೇಟಿ ನೀಡಿ, ಅಧಿಸೂಚನೆಯನ್ನು ಕೂಲಂಕುಷವಾಗಿ ಪರಿಶೀಲಿಸಿದ ನಂತರ ಅಗತ್ಯ ದೃಢೀಕೃತ ದಾಖಲೆಗಳನ್ನು ಅಪ್‌ಲೋಡ್ ಮಾಡುವ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬೇಕು. ಇತ್ತೀಚಿನ ಪಾಸ್‌ಪೋರ್ಟ್ ಸೈಜ್ ಫೋಟೋ ಲಗತ್ತಿಸುವುದು ಕಡ್ಡಾಯವಾಗಿದ್ದು, ಸಂವಹನ ಉದ್ದೆಶಕ್ಕಾಗಿ ಚಾಲ್ತಿಯಲ್ಲಿರುವ ದೂರವಾಣಿ ಸಂಖ್ಯೆ, ಇ-ಮೇಲ್ ಐಡಿ ನಮೂದಿಸಬೇಕು. ಅಡ್ಮಿಟ್ ಕಾರ್ಡ್ ಸೇರಿ ಇತರ ಅಪ್‌ಡೆಟ್ ಮಾಹಿತಿಗಾಗಿ ಆಗಾಗ ವೆಬ್‌ಸೈಟ್ ಪರಿಶೀಲಿಸುತ್ತಿರಿ. ಆರ್‌ಪಿಎ್ ನಿಯಮಾನುಸಾರ ಅರ್ಜಿಶುಲ್ಕ ನಿಗದಿ ಮಾಡಲಾಗಿದೆ. ಆರ್‌ಆರ್‌ಬಿ ನಡೆಸುವ ಕಂಪ್ಯೂಟರ್ ಆಧಾರಿತ ಪರೀಕ್ಷೆ ಮತ್ತು ಆರ್‌ಪಿಎ್ ನಡೆಸುವ ದೈಹಿಕ ದಕ್ಷತೆ ಪರೀಕ್ಷೆ ಲಿತಾಂಶದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ನಂತರ ದಾಖಲೆ ಪರಿಶೀಲನೆ ಮೂಲಕ ಅಂತಿಮ ಆಯ್ಕೆ ಮಾಡಲಾಗುತ್ತದೆ. 31-01-2024 ಅರ್ಜಿ ಸಲ್ಲಿಸಲು ಕೊನೇ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ indianrailways.gov.ಇನ್ ವಿಸಿಟ್ ಮಾಡಿ.