ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮಂದಿರದ ಪ್ರತಿಷ್ಠಾಪನೆ ಸಮಾರಂಭಕ್ಕೆ ದಿನಗಣನೆ ಆರಂಭಗೊಂಡಿದ್ದು, ಭಗವಂತನ ದರ್ಶನ ಪಡೆಯಲು ಸಹಸ್ರಾರು ಸಂಖ್ಯೆಯ ಭಕ್ತಾಧಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಇದರ ಬೆನ್ನಲ್ಲೇ ವಾರಣಾಸಿಯ ಎಲ್ಲಾ 84 ಗಂಗಾ ಘಾಟ್ಗಳಲ್ಲಿ ಭಕ್ತರು ಮತ್ತು ಪ್ರವಾಸಿಗರಿಗೆ ಉಚಿತ ಸವಾರಿ ನೀಡಲು ಇದೀಗ ದೋಣಿ ಸವಾರರು ನಿರ್ಧರಿಸಿದ್ದಾರೆ.
ಇದರ ಬಗ್ಗೆ ಮಾತನಾಡಿದ ಮಾ ಗಂಗಾ ನಿಷಾದ್ ರಾಜ್ ಸೇವಾ ಟ್ರಸ್ಟ್ನ ಕಾರ್ಯದರ್ಶಿಯಾದ ಶಂಭು ಸಾಹ್ನಿ, “ಪ್ರಮುಖವಾಗಿ ದೋಣಿ ನಡೆಸುವವರನ್ನು ಒಳಗೊಂಡಿರುವ ನಿಶಾದ್ ಸಮುದಾಯವು ಶ್ರೀರಾಮನೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ. ಕಾಡಿಗೆ ಹೋಗುವಾಗ ಭಗವಂತ ಶ್ರೀರಾಮ, ಲಕ್ಷ್ಮಣ ಮತ್ತು ಸೀತೆ ಮಾತೆ ಬಳಿ ಏನನ್ನು ಸ್ವೀಕರಿಸದೆ ತನ್ನ ದೋಣಿಯಲ್ಲಿ ನದಿಯನ್ನು ದಾಟಲು ಸಹಾಯ ಮಾಡುತ್ತಾರೆ” ಎಂದರು. “ಈ ಸಂಪ್ರದಾಯವನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ರಾಮಮಂದಿರದ ಪ್ರತಿಷ್ಠಾಪನೆ ಸಮಾರಂಭಕ್ಕೆ ಬನಾರಸ್ನ ಎಲ್ಲಾ 84 ಘಾಟ್ಗಳಲ್ಲಿ ಗಂಗಾನದಿಯ ಒಂದು ತುದಿಯಿಂದ ಇನ್ನೊಂದು ತುದಿಗೆ ಹೋಗುವ ಭಕ್ತರಿಗೆ ಮತ್ತು ಪ್ರವಾಸಿಗರಿಗೆ ಉಚಿತ ದೋಣಿ ಸೇವೆಯನ್ನು ಒದಗಿಸಲಾಗುವುದು” ಎಂದು ಸಾಹ್ನಿ ಹೇಳಿದ್ದಾರೆ. ಟ್ರಸ್ಟ್ನ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ಶಂಭು ಸಾಹ್ನಿ ಹೇಳಿದ್ದಾರೆಯಾಗಿದೆ.