ಕೇರಳ: 10 ದಿನಗಳ ಓಣಂ ಹಬ್ಬದ ಅವಧಿಯ ಪ್ರಮುಖ ದಿನಗಳಲ್ಲಿ ಒಂದಾದ ತಿರುಓಣಂಗೆ ಒಂದು ದಿನ ಮುಂಚಿತವಾಗಿ ಕೇರಳದಾದ್ಯಂತ 117 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದ್ರೆ, ಒಂದು ವಾರದಲ್ಲಿ 625 ಕೋಟಿ ರೂ.ಗಳ ಮದ್ಯ ಮಾರಾಟವಾಗಿದೆ ಎಂದು ಸರ್ಕಾರಿ ಸ್ವಾಮ್ಯದ ರಾಜ್ಯ ಪಾನೀಯಗಳ ನಿಗಮದ ಬಿವರೇಜಸ್ ಕಾರ್ಪೊರೇಷನ್ (ಬೆವ್ಕೊ)ನ ಅಂಕಿಅಂಶ ತಿಳಿಸಿದೆ.
ಒಂದು ದಿನದ ಮದ್ಯ ಮಾರಾಟ 100 ಕೋಟಿ ದಾಟಿರುವುದು ಬೆವ್ಕೋ ಇತಿಹಾಸದಲ್ಲಿ ಇದೇ ಮೊದಲು. ಕಳೆದ ವರ್ಷ ತಿರುಓಣಂ ಹಿಂದಿನ ದಿನವಾದ ಉತ್ರಾಂನಲ್ಲಿ ಮಾರಾಟವು 85 ಕೋಟಿ ರೂ.ಗೆ ತಲುಪಿತ್ತು ಎಂದು ಶುಕ್ರವಾರ ಬಿಡುಗಡೆ ಮಾಡಿದ ಮತ್ತು ಎಚ್ಟಿ ಪರಿಶೀಲಿಸಿರುವ ಬೆವ್ಕೊ ಅಂಕಿಅಂಶಗಳು ತೋರಿಸಿವೆ.
ಮದ್ಯ ಮತ್ತು ಲಾಟರಿ ರಾಜ್ಯಕ್ಕೆ ಆದಾಯ ತಂದುಕೊಡುವ ಪ್ರಮುಖ ಅಂಶಗಳಾಗಿವೆ. ರಾಜ್ಯದ ಅಂಕಿಅಂಶಗಳ ಪ್ರಕಾರ, ಕಳೆದ ಕೆಲವು ವರ್ಷಗಳಲ್ಲಿ ಕೇರಳವು ಮದ್ಯದಿಂದ ವಾರ್ಷಿಕ 14,000 ಕೋಟಿ ರೂ. ಮತ್ತು ಲಾಟರಿಯಿಂದ 10,000 ಕೋಟಿ ರೂ. ಆದಾಯ ಗಳಿಸುತ್ತಿದೆ.
ಹತ್ತು ದಿನಗಳ ಹಬ್ಬದ ಸೀಸನ್ನಿಂದ ಒಟ್ಟು ಆದಾಯ 700 ಕೋಟಿ ರೂ. ದಾಟುವ ನಿರೀಕ್ಷೆಯಿದೆ. ಆದರೆ, ಸೆಪ್ಟೆಂಬರ್ 11 ರ ನಂತರವೇ ಖಚಿತ ಮಾಹಿತಿ ಹೊರಬರಲಿದೆ ಎಂದು ನಿಗಮದ ವಕ್ತಾರರು ತಿಳಿಸಿದ್ದಾರೆ.
ಬೆವ್ಕೋ ಬಿಡುಗಡೆ ಮಾಡಿದ ಇತ್ತೀಚಿನ ವರ್ಷಗಳ ಆದಾಯ ದಾಖಲೆಗಳು 10 ದಿನಗಳ ಉತ್ಸವದಲ್ಲಿ ಸುಮಾರು 100 ಕೋಟಿ ರೂ. ಗಳಷ್ಟು ಜಿಗಿತ ತೋರಿಸಿದೆ.
ಹುಡುಗರ ಲೈಂಗಿಕ ಸಾಮರ್ಥ್ಯ “ಮ್ಯಾಗಿ ತರ ಎರಡೇ ನಿಮಿಷ” : ಬಹುಭಾಷಾ ನಟಿ ರೆಜಿನಾ ಕಸೆಂದ್ರ | Regina Cassandra
BREAKING NEWS : ಕಲಬುರಗಿಯಲ್ಲಿ ಕಲುಷಿತ ನೀರು ಸೇವಿಸಿ ವಾಂತಿ ಭೇದಿ : ಓರ್ವ ಸಾವು, 52 ಮಂದಿ ಅಸ್ವಸ್ಥ
BIGG BREAKING NEWS: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಕೆ; ಕಳೆದ 24 ಗಂಟೆಗಳಲ್ಲಿ 5,554 ಹೊಸ ಪ್ರಕರಣ ಪತ್ತೆ