ಅಡುಗೆ ಮಾಡಲು ಬಳಸುವ ನಮ್ಮ ದೈನಂದಿನ ದಿನಚರಿಯ ಭಾಗವಾಗಿರುವ ಗ್ಯಾಸ್ ಸಿಲಿಂಡರ್ ಎಲ್ಲ ಗೃಹಿಣಿಯ ನೆಚ್ಚಿನ ಸಂಗಾತಿ ಎಂದರೆ ತಪ್ಪಾಗದು. ಅತಿ ಶೀಘ್ರದಲ್ಲಿ ಕೆಲಸ ಕಾರ್ಯಗಳನ್ನು ಪೂರೈಸಲು ಗ್ಯಾಸ್ ಸಿಲಿಂಡರ್ ಉಪಕಾರಿಯಾಗಿದೆ. ನೀವೆಲ್ಲಾ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಕೆಂಪು ಬಣ್ಣದಲ್ಲಿರುವುದನ್ನು ಗಮನಿಸಿರಬಹುದು.
ಕೆಂಪು ಬಣ್ಣ ಎಂದರೆ ಅಪಾಯದ ಸಂಕೇತ ಎನ್ನಲಾಗುತ್ತದೆ. ಗ್ಯಾಸ್ ಸಿಲಿಂಡರ್ ಅಪಾಯಕಾರಿಯಾಗಿದ್ದು, ಎಲ್‌ಪಿಜಿ ಸಿಲಿಂಡರ್‌ನಲ್ಲಿ ದಹಿಸುವ ಗ್ಯಾಸ್ ಇರುತ್ತದೆ. ಇದನ್ನು ಗಮನದಲ್ಲಿರಿಸಿ ಕಂಪನಿಯು ಸಿಲಿಂಡರ್‌ಗೆ ಕೆಂಪು ಬಣ್ಣವನ್ನು ನೀಡುತ್ತದೆ. ಅಷ್ಟೆ ಅಲ್ಲದೇ, ಕೆಂಪು ಬಣ್ಣವನ್ನು ಎಚ್ಚರಿಕೆಯ ಸಂಕೇತವಾಗಿ ಬಳಸಲಾಗುತ್ತದೆ. ಗ್ರಾಹಕರ ಸುರಕ್ಷತೆಗಾಗಿ ಗ್ಯಾಸ್ ಸಿಲಿಂಡರ್‌ಗಳಿಗೆ ಕೆಂಪು ಬಣ್ಣ ಬಳಿಯಲಾಗುತ್ತದೆ. ದೂರದಿಂದ ನೋಡಿದಾಗ ಕೆಂಪು ಬಣ್ಣವನ್ನು ಗುರುತಿಸುವುದು ಸುಲಭವಾಗಿದ್ದು, ಸಿಲಿಂಡರ್‌ಗೆ ಕೆಂಪು ಬಣ್ಣ ಬಳಿಯಲು ಇದು ಕೂಡ ಕಾರಣವಾಗಿರಬಹುದು. ಅದೇ ರೀತಿ, ಗ್ಯಾಸ್ ಸಿಲಿಂಡರ್ ಏಕೆ ದುಂಡಗಗಿರುತ್ತದೆ ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ಗ್ಯಾಸ್ ಮೇಲೆ ಒತ್ತಡ ಸೃಷ್ಟಿಯಾಗಿರುವುದರಿಂದ ಸಿಲಿಂಡರ್ ದುಂಡಗೆ ತಿರುಚಲು ಪ್ರಮುಖ ಕಾರಣವಾಗಿದೆ. ದುಂಡಗಿನ ಆಕಾರವು ಸಿಲಿಂಡರ್ನಲ್ಲಿ ಅನಿಲವನ್ನು ಒತ್ತಡಕ್ಕೆ ಮತ್ತು ಸಂಕುಚಿತಗೊಳಿಸಲು ಸುಲಭಗೊಳಿಸುತ್ತದೆ. ಅಷ್ಟೇ ಅಲ್ಲದೆ, ದುಂಡಗಿನ ಆಕಾರದಿಂದ ಸಿಲಿಂಡರ್ ಅನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುಲಭವಾಗಿ ಒಯ್ಯಬಹುದು. ಹೀಗಾಗಿ, ಸಿಲಿಂಡರ್ ಆಕಾರ ಗೋಳಕಾರವಾಗಿರುತ್ತದೆಯಾಗಿದೆ.