ಬೆಂಗಳೂರು : ಕಾನೂನಾತ್ಮಕವಾಗಿ ಮಗುವನ್ನು ದತ್ತು ಪಡೆಯದೆ ಅಕ್ರಮವಾಗಿ ದತ್ತು ಪಡೆದಿದ್ದಕ್ಕೆ ಇಂದು ಬಿಗ್ ಬಾಸ್ ಓಟಿಟಿ ಸೀಸನ್ ಒಂದರ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ನನ್ನು ಬ್ಯಾಡರ ಹಳ್ಳಿಯ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದರು. ಇದೀಗ ಪೊಲೀಸರ ವಿಚಾರಣೆ ವೇಳೆ ದತ್ತು ಪಡೆಯುವ ಪ್ರಕ್ರಿಯೆ ನನಗೆ ಗೊತ್ತಿರಲಿಲ್ಲ ಎಂದು ಸೋನು ಗೌಡ ತಿಳಿಸಿದ್ದಾಳೆ.
ಅಬಕಾರಿ ನೀತಿ ಕುರಿತು ವಿರೋಧ ತಾಳಿದ್ದರಿಂದ ಕೇಜ್ರಿವಾಲ್ ಬಂಧನ : ಬೇಸರ ವ್ಯಕ್ತಪಡಿಸಿದ ಅಣ್ಣಾ ಹಜಾರೆ
ದತ್ತು ಪ್ರಕ್ರಿಯ ಹೀಗಿರುತ್ತದೆ ಎಂದು ನನಗೆ ಗೊತ್ತಿರಲಿಲ್ಲ ಎಂದು ಪೊಲೀಸರ ವಿಚಾರಣೆಯ ವೇಳೆ ಸೋನು ಗೌಡ ತಿಳಿಸಿದ್ದಾರೆ.ನನಗೆ ಮದುವೆ ಆಗಿದೆ. ಮಗುವನ್ನ ನೋಡಿಕೊಂಡಿರುತ್ತೇನೆ. ಸೋಶಿಯಲ್ ಮೀಡಿಯಾದಿಂದ ಬಂದ ಹಣದಿಂದ ಅವಳಿಗೆ ಬಳಸುತ್ತೇನೆ. ಮಗುವಿನ ಜೀವನ ರೂಪಿಸಲು ಉಪಯೋಗಿಸುತ್ತೇನೆ ಎಂದು ವಿಚಾರಣೆ ವೇಳೆ ಸೋನುಗೌಡ ಹೇಳಿಕೆ ನೀಡಿದ್ದಾರೆ.
ಬಿಟ್ ಕಾಯಿನ್ ಪ್ರಕರಣ: ‘ಹೈಕೋರ್ಟ್’ನಿಂದ ಆರೋಪಿ ಶ್ರೀಧರ್ ಪೂಜಾರಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ
ಸಾಮಾಜಿಕ ಜಾಲತಾಣಗಳ ಮೂಲಕ ತಾನು 6 ರಿಂದ 8 ವರ್ಷದ ಮಗುವನ್ನು ದತ್ತು ಪಡೆದಿರೋದಾಗಿ ರೀಲ್ ಸ್ಟಾರ್ ಸೋನು ಗೌಡ ಹೇಳಿಕೊಂಡಿದ್ದರು. ಅವರ ಹೇಳಿಕೆ ವೈರಲ್ ಕೂಡ ಆಗಿತ್ತು.ಈ ಹಿನ್ನಲೆಯಲ್ಲಿ ರಾಜ್ಯ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗೀತಾ ಎಂಬುವರು ಬ್ಯಾಡರಹಳ್ಳಿ ಠಾಣೆಗೆ ರೀಲ್ ಸ್ಟಾರ್ ಸೋನು ಗೌಡ ವಿರುದ್ಧ ದೂರು ನೀಡಿದ್ದರು.
BREAKING: ಇಡಿ ಬಂಧನ ಪ್ರಶ್ನಿಸಿ ‘ಸುಪ್ರೀಂ ಕೋರ್ಟ್’ಗೆ ಸಲ್ಲಿಸಿದ್ದ ಅರ್ಜಿ ಹಿಂಪಡೆದ ‘ಅರವಿಂದ್ ಕೇಜ್ರಿವಾಲ್’
ಈ ದೂರನ್ನು ಆಧರಿಸಿ, ಸೋನು ಗೌಡ ವಿರುದ್ಧ ಜೆ.ಜೆ ಆ್ಯಕ್ಟ್ ಅಡಿಯಲ್ಲಿ ಬ್ಯಾಡರಹಳ್ಳಿ ಠಾಣೆಯ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು. ಆ ಬಳಿಕ ಇಂದು ಸೋನು ಗೌಡ ಅವರನ್ನು ಬಂಧಿಸಿರೋದಾಗಿ ತಿಳಿದು ಬಂದಿದೆ. ಇದೀಗ ಪೊಲೀಸರು ಸೋನು ಗೌಡನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.