ಬೆಂಗಳೂರು : ಮಾದರಿ ನೀತಿ ಸಂಹಿತೆ ಜಾರಿಯಲ್ಲಿ ಇದ್ದರೂ ಕೂಡ ಬಿಜೆಪಿ ಚಿನ್ಹೆ ಹಾಗೂ ಮೋದಿ ಫೋಟೋ ಅಳವಡಿಸಿ ನೀತಿ ಸಂಹಿತೆ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಡು ವಿರುದ್ಧ ಇದೀಗ ಚುನಾವಣೆ ಅಧಿಕಾರಿಗಳ ದೂರಿನ ಮೇರೆಗೆ ಕೋರಮಂಗಲದ ಠಾಣೆಯಲ್ಲಿ ದಾಖಲಾಗಿದೆ.
ಸಿಎಂ ಸಿದ್ದರಾಮಯ್ಯಗು ತಟ್ಟಿದ ‘ನೀತಿ ಸಂಹಿತೆ’ ಬಿಸಿ : ಟಿ.ನರಸೀಪುರದಲ್ಲಿ ಕಾರು ತಪಾಸಣೆ
ಕೋರಮಂಗಲ ಠಾಣೆಯಲ್ಲಿ ರಾಘವೇಂದ್ರ ನಾಯ್ಡು ವಿರುದ್ಧ FIR ದಾಖಲಾಗಿದೆ. ರಾಘವೇಂದ್ರ ನಾಯ್ಡು ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಂದು ಹೇಳಲಾಗುತ್ತಿದೆ.ಅನುಮತಿ ಇಲ್ಲಿದೆ ಬಿಜೆಪಿ ಚಿನ್ಹೆ ಪ್ರಧಾನಿ ಫೋಟೋ ಅಂಟಿಸಲಾಗಿತ್ತು. ಈ ಬಗ್ಗೆ ಚುನಾವಣಾ ಅಧಿಕಾರಿಗಳಿಗೆ ಸ್ಥಳೀಯರು ದೂರು ನೀಡಿದ್ದರು.
ಮೇ 2023ರಿಂದ 2000 ರೂ.ಗಳ ನೋಟುಗಳಲ್ಲಿ 97.69% ಮರಳಿದೆ, ಇನ್ನೂ 8,202 ಕೋಟಿ ರೂಪಾಯಿ ಮರಳಬೇಕಿದೆ : RBI
ಕೂಡಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು.ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಕೋರಮಂಗಲ ಠಾಣೆಗೆ ದೂರು ನೀಡಿದ್ದರು. ಚುನಾವಣೆ ಅಧಿಕಾರಿಗಳ ದೂರಿನಂತೆ ರಾಘವೇಂದ್ರ ನಾಯ್ಡು ವಿರುದ್ಧ ಇದೀಗ ಎಫ್ಐಆರ್ ದಾಖಲಾಗಿದೆ.