ಬೆಂಗಳೂರು : ಬೆಂಗಳೂರಿನಲ್ಲಿ ಅನಗತ್ಯವಾಗಿ ನೀರು ಪೋಲು ಮಾಡಿದರೆ ದಂಡ ವಿಧಿಸಲಾಗುತ್ತದೆ. BWSSB ವತಿಯಿಂದ 5000 ದಂಡ ವಿಧಿಸಲಾಗುತ್ತದೆ. ಈ ಕುರಿತಂತೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯಿದೆ 1964ರ ಕಲಂ 109ರಂತೆ 5000 ತಂಡ ವಿಧಿಸಲಾಗುತ್ತದೆ ಎಂದು BWSSB ಪ್ರಕಟಣೆಯಲ್ಲಿ ತಿಳಿಸಿದೆ.
‘ಚುನಾವಣಾ ಬಾಂಡ್’ : ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿದ ‘SBI’ ವಿರುದ್ಧ ‘ನ್ಯಾಯಾಂಗ ನಿಂದನೆ’ ಕೇಸ್
ಪದೇಪದೇ ನಿಯಮ ಮೀರಿದರೆ ಹೆಚ್ಚುವರಿ ದಂಡ ವಿಧಿಸಳಾಗುತ್ತೆ. ಸಾರ್ವಜನಿಕರು ಕುಡಿಯುವ ನೀರು ಮಿತವಾಗಿ ಬಳಸುವಂತೆ ಸೂಚನೆ ನೀಡಲಾಗಿದೆ.ಕುಡಿಯುವ ನೀರನ್ನು ವಾಹನಗಳ ಸ್ವಚ್ಛತೆಗೆ, ಕೈದೋಟ, ಕಟ್ಟಡ ನಿರ್ಮಾಣ, ಮನೋರಂಜಕವಾಗಿ ಕಾರಂಜಿ, ಅಂತ ಆಕರ್ಷಕ ವ್ಯವಸ್ಥೆಗೆ ಹಾಗೂ ಸಿನಿಮಾ ಥಿಯೇಟರ್ ಮಾಲ್ಗಳಲ್ಲಿ ಬಳಸಿದರೆ 5000 ದಂಡ ವಿಧಿಸಲಾಗುತ್ತದೆ.
ಜಲ ಮಂಡಳಿ ಕಾಯ್ದೆ 1964 ಕಲಂ ಕಾಯ್ದೆಯ 109 ಅಡಿ ನಿಯಮ ಉಲ್ಲಂಘನೆ ಮರುಕಳಿಸಿದರೆ 5,000 ದಂಡದ ಜೊತೆಗೆ ಪ್ರತಿದಿನ 500 ರೂಪಾಯಿ ದಂಡ ವಿರಿಸಲಾಗುತ್ತದೆ ಎಂದು BWSSB ಆದೇಶದಲ್ಲಿ ತಿಳಿಸಿದೆ.ಈಗಾಗಲೇ ಕಳೆದ 15 ದಿನಗಳಲ್ಲಿ ಬೆಂಗಳೂರಿನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಬೋರ್ವೆಲ್ ಗಳು ಅಂತರ್ಜಲ ಮಟ್ಟ ಕುಸಿತದಿಂದ ಬಂದಾಗಿವೆ ಹೀಗಾಗಿ ಜನರು ತೀವ್ರವಾದ ಸಮಸ್ಯೆ ಎದುರಿಸುತ್ತಿದ್ದಾರೆ ಹಾಗಾಗಿ ಅನಗತ್ಯವಾಗಿ ನೀರು ಪೋಲು ಮಾಡಿದರೆ ದಂಡ ತೆತ್ತಬೇಕಾಗುತ್ತದೆ.
ಈ ರಾಶಿಯ ಪುರುಷರಿಗೆ ಮಹಿಳೆಯರು ಹೆಚ್ಚು ಆಕರ್ಷಿತರಾಗುತ್ತಾರಂತೆ ನಿಮ್ಮ ರಾಶಿ ಇದೆಯಾ ನೋಡಿ!