ಬೆಂಗಳೂರು : ಪ್ರಜ್ವಲ್ ರೇವಣ್ಣ ಅವರ ವಿರುದ್ಧದ ಲೈಂಗಿಕ ಹಗರಣ ಈಗ ಮತ್ತೊಂದು ಮಹತ್ವದ ತಿರುವು ಪಡೆದುಕೊಂಡಿದೆ. ಇದೀಗ ಈ ಒಂದು ಪ್ರಕರಣದಲ್ಲಿ ಅರಕಲಗೂಡು ಶಾಸಕ ಎ ಮಂಜು ಅವರ ಹೆಸರು ಕೂಡ ತಳಕು ಹಾಕಿಕೊಂಡಿರುವುದು ಬೆಳಕಿಗೆ ಬಂದಿದೆ.
ಹೌದು ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣಕ್ಕೆ ಇದಿಗ ಸ್ಪೋಟಕ ತಿರುವು ಸಿಕ್ಕಿದ್ದು, ಅರಕಲಗೂಡು ಜೆಡಿಎಸ್ ಶಾಸಕ ಎ ಮಂಜು ಹೆಸರು ತಳಕು ಹಾಕುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನವೀನ ಗೌಡ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದು, ಪೆನ್ ಡ್ರೈವ್ ನನ್ನು ಶಾಸಕ ಮಂಜು ಅವರಿಗೆ ನಾನು ನೀಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಆರೋಪಿ ನವೀನ್ ಗೌಡ ಫೇಸ್ಬುಕ್ ಖಾತೆಯಿಂದ ಈ ಒಂದು ಪೋಸ್ಟ್ ವೈರಲಾಗುತ್ತಿದೆ. ಏಪ್ರಿಲ್ 20 ರಂದು ನನಗೆ ರಸ್ತೆಯಲ್ಲಿ ಪೆನ್ ಡ್ರೈವ್ ಸಿಕ್ಕಿದ್ದು, ಅರಕಲಗೂಡು ಶಾಸಕರಾದ ಎ ಮಂಜು ಅವರಿಗೆ 21 ರಂದು ಅರಕಲಗೂಡಿನ ಮಾರುತಿ ಕಲ್ಯಾಣ ಮಂಟಪದಲ್ಲಿ A ಮಂಜು ಅವರಿಗೆ ನೀಡಿದ್ದೇನೆ ಕುಮಾರಸ್ವಾಮಿ ಅವರು ಹೇಳಿದ ಹಾಗೆ ವಿಡಿಯೋ ವೈರಲ್ ಹಿಂದೆ ಇರುವ ಮಹಾ ನಾಯಕ ಅರಕಲಗೂಡು ಶಾಸಕರು ಆಗಿರಬಹುದು ಎಂದು ಆರೋಪಿ ನವೀನ್ ಗೌಡ ಹಾಕಿರೋ ಪೋಸ್ಟ್ ಈಗ ವೈರಲ್ ಆಗುತ್ತಿದೆ.